Spiritual: ಜೀವನವನ್ನು ಹೇಗೆ ನಿಭಾಯಿಸಬೇಕು..? ಜೀವನ ಸಂಗಾತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು..? ಹಣಕಾಸಿನ ಸಮಸ್ಯೆ ಬಾರದಿರಲು ಏನು ಮಾಡಬೇಕು..? ಹೀಗೆ ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಇಂದು ನಾವು ಯಾರು ಜೀವನದಲ್ಲಿ ಸಫಲರಾಗುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ ಅನ್ನೋ ಬಗ್ಗೆ ಚಾಣಕ್ಯರು ಹೇಳಿದ ನೀತಿಯನ್ನು ವಿವರಿಸಲಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ ಗುಣ: ನಾನು ಇದನ್ನು ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲವಿರಬೇಕು. ಯಾವುದಾದರೂ ಕೆಲಸ ಮಾಡುವಾಗ ನಮಗೆ ಏಕಾಗೃತೆ ಇರಬೇಕು. ಇಷ್ಟು ದಿನದಲ್ಲಿ, ಅಥವಾ ಇಷ್ಟು ಗಂಟೆಯಲ್ಲಿ ನಾನು ಈ ಕೆಲಸವನ್ನು ಮಾಡೇ ಮಾಡುತ್ತೇನೆ ಎಂಬ ಗುರಿ ನಿಮ್ಮಲ್ಲಿದ್ದರೆ, ಅದರಂತೆ ನೀವು ಕಾರ್ಯ ನಿರ್ವಹಿಸಿದರೆ, ನಿಮಗೆ ಬೇಕಾದ್ದನ್ನು ನೀವು ಪಡೆಯಬಹುದು.
ಎರಡನೇಯ ಗುಣ: ಕಷ್ಟ ಪಟ್ಟು ಕೆಲಸ ಮಾಡುವುದು. ಅಥವಾ ಕಷ್ಟಪಟ್ಟು ಓದುವುದು. ವಿದ್ಯಾರ್ಥಗಳು ಕಠಿಣ ಪರಿಶ್ರಮ ಹಾಕಿ ಓದಿದಾಗಲೇ, ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಪಾಸ್ ಆಗಲು ಸಾಧ್ಯವಾಗುತ್ತದೆ. ಅಂತೆಯೇ, ಯಾವುದಾದರೂ ಕೆಲಸ ಮಾಡಬೇಕಾದ್ದಲ್ಲಿ, ಕಷ್ಟಪಟ್ಟು ಆ ಕೆಲಸ ಮಾಡಿದಾಗಲೇ, ನೀವು ಉದ್ಧಾರವಾಗಲು ಸಾಧ್ಯವಾಗೋದು. ಶ್ರೀಮಂತರಾಗಲು ಸಾಧ್ಯವಾಗೋದು.
ಮೂರನೇಯ ಗುಣ: ನಿಯತ್ತಾಗಿರಬೇಕು. ಇನ್ನು ನೀವು ಮಾಡುವ ಕೆಲಸ ಅಚ್ಚುಕಟ್ಟಾಗಿ, ಸಮಯಕ್ಕೆ ಸರಿಯಾಗಿ ಮುಗಿಯುವುದಷ್ಟೇ ಅಲ್ಲ. ಬದಲಾಗಿ, ಆ ಕೆಲಸದಲ್ಲಿ ನೀವು ನಿಯತ್ತು ತೋರಿಸಬೇಕು. ನಿಯತ್ತಾಗಿ ಕೆಲಸ ಮಾಡಿದರೆ, ಮಾತ್ರ ಉತ್ತಮ ಪ್ರತಿಫಲ ನಿಮಗೆ ಸಿಗಲು ಸಾಧ್ಯವಾಗೋದು. ಕೆಲಸದಲ್ಲಿ ಮೋಸ ಮಾಡಿದ್ದಲ್ಲಿ, ಅದರ ಪ್ರತಿಫಲವೂ ಕಹಿಯಾಗಿರುತ್ತದೆ.
ನಾಲ್ಕನೇಯ ಗುಣ: ತಾಳ್ಮೆಯಿಂದ ಕೆಲಸ ಮಾಡಬೇಕು. ಕೊಟ್ಟ ಕೆಲಸವನ್ನು ಬೇಗ ಬೇಗ ಮಾಡಬೇಕು. ಗುರಿ ಮುಟ್ಟಬೇಕು ಎನ್ನುವ ತವಕದಲ್ಲಿ ನಾವು ತಾಳ್ಮೆ ಮತ್ತು ಶಿಸ್ತನ್ನು ಎಂದಿಗೂ ಮರೆಯಬಾರದು. ಶಿಸ್ತು ಇಲ್ಲದೇ, ತಾಳ್ಮೆಯೊಂದರೆ ಇದ್ದರೆ, ಕೆಲಸ ಸರಿಯಾಗಿ ಆಗುವುದಿಲ್ಲ. ಕೆಲಸದಲ್ಲಿ ಶಿಸ್ತು, ತಾಳ್ಮೆ ಎರಡೂ ಕೂಡ ಮುಖ್ಯವಾಗಿರುತ್ತದೆ.
ಐದನೇಯ ಗುಣ: ಜವಾಬ್ದಾರಿಯುತ ಮನುಷ್ಯನಾಗಿರಬೇಕು. ನಮ್ಮ ನಮ್ಮ ಜವಾಬ್ದಾರಿಯನ್ನು ನಾವು ಸರಿಯಾಗಿ ನಿಭಾಯಿಸಬೇಕು. ಕೆಲಸದ ಒತ್ತಡ ಹೆಚ್ಚಿದೆ ಎಂದು, ನಾವು ಕುಟುಂಬವನ್ನು ಮರಿಯಬಾರದು. ಕುಟುಂಬದ ಕಿರಿಕಿರಿಯಿಂದಾಗಿ, ನಾವು ಕೆಲಸವನ್ನು ಮರಿಯಬಾರದು. ಎರಡನ್ನೂ ಜವಾಬ್ದಾರಿಯಿಂದ ನಿಭಾಯಿಸಿಕೊಂಡು ಹೋಗಬೇಕು. ಆಗಲೇ ನಾವು ಯಶಸ್ವಿಯಾಗೋಕ್ಕೆ ಸಾಧ್ಯವಾಗುತ್ತದೆ.
ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ