Spiritual News: ಮಲಗುವಾಗ ನಮಗೆ ಬೀಳುವ ಕೆಲ ಕನಸುಗಳು ಹೇಗೆ ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಮತ್ತು ಕೆಟ್ಟದಾಗಿ ಬದಲಾಯಿಸುತ್ತದೆಯೋ, ಅಂತೆಯೇ, ಮಲಗುವಾಗ ನಾವು ಅಭ್ಯಾಸ ಮಾಡಿಕೊಳ್ಳುವ ಕೆಲ ವಿಷಯಗಳು ಕೂಡ, ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಬಹುದು. ಅದರಲ್ಲೂ ನಾವು ಮಲಗುವಾಗ ದಿಂಬಿನ ಕೆಳಗೆ ಕೆಲ ವಸ್ತುಗಳನ್ನು ಇರಿಸಿ ಮಲಗಬೇಕು. ಇದರಿಂದ ನಮಗೆ ಒಳ್ಳೆಯದಾಗುತ್ತದೆ. ಹಾಗಾದ್ರೆ ದಿಂಬಿನ ಕೆಳಗೆ ಏನೇನು ಇಟ್ಟು ಮಲಗಬೇಕು ಅಂತಾ ತಿಳಿಯೋಣ ಬನ್ನಿ..
ಒಂದು ರೂಪಾಯಿ ನಾಣ್ಯ. ರಾತ್ರಿ ಮಲಗುವಾಗ ದಿಂಬಿನ ಕೆಳಗೆ 1 ರೂಪಾಯಿ ನಾಣ್ಯವನ್ನು ಇಟ್ಟುಕೊಂಡು ಮಲಗಬೇಕು. ಹೀಗೆ ಮಾಡುವುದರಿಂದ ನಮ್ಮ ಆರ್ಥಿಕ ಸಮಸ್ಯೆ ಸರಿಯಾಗಿ, ನಾವು ಹಣವಂತರಾಗುತ್ತೇವೆ ಅನ್ನೋ ನಂಬಿಕೆ ಇದೆ. ಆದರೆ ನೀವು ಬೆಳಿಗ್ಗೆ ಎದ್ದ ತಕ್ಷಣ ಆ ನಾಣ್ಯವನ್ನು ತೆಗೆದು, ಬಡವರಿಗೆ ನೀಡಬೇಕು. ಹೀಗೆ ಮಾಡುವುದರಿಂದ ನಮ್ಮ ಹಣದ ಸಮಸ್ಯೆ ದೂರವಾಗುತ್ತದೆ ಅನ್ನೋ ನಂಬಿಕೆ ಇದೆ.
ನವಿಲುಗರಿ. ರಾತ್ರಿ ಮಲಗುವಾಗ ದಿಂಬಿನ ಕೆಳಗೆ ನವಿಲುಗರಿ ಇಟ್ಟುಕೊಂಡು ಮಲಗಬೇಕು. ನಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆ ಮಾಡಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿಸುವಲ್ಲಿ ನವಿಲುಗರಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಮನೆಯಲ್ಲಿ ನವಿಲುಗರಿ ಇರಬೇಕು ಅಂತಾ ಹೇಳಲಾಗುತ್ತದೆ. ಪತಿ-ಪತ್ನಿ ಸಂಬಂಧ ಸರಿಯಾಗಿ ಇಲ್ಲದಿದ್ದಲ್ಲಿ, ಬೆಡ್ರೂಮಿನಲ್ಲಿ ನವಿಲು ಗರಿ ಇರಿಸಿಕೊಳ್ಳಬೇಕು. ಇದರಿಂದ ಪತಿ-ಪತ್ನಿ ಸಂಬಂಧ ಉತ್ತಮವಾಗಿರುತ್ತದೆ. ಇನ್ನು ದಿಂಬಿನ ಕೆಳಗೆ ನವಿಲು ಗರಿ ಇಟ್ಟುಕೊಂಡು ಮಲಗಿದರೆ, ಅದೃಷ್ಟ ಬದಲಾಗುತ್ತದೆ ಅನ್ನೋ ನಂಬಿಕೆ ಇದೆ.
ತುಳಸಿ ಎಲೆ. ರಾತ್ರಿ ಮಲಗುವಾಗ ದಿಂಬಿನ ಕೆಳಗೆ ತುಳಸಿ ಎಲೆ ಇರಿಸಿಕೊಂಡು ಮಲಗಬೇಕು. ತುಳಸಿ ಎಲೆ ವಿಷ್ಣುವಿಗೆ ಬಹುಪ್ರಿಯವಾಗಿದ್ದು, ಇದರಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಹಾಗಾಗಿ ರಾತ್ರಿ ಮಲಗುವಾಗ ದಿಂಬಿನ ಕೆಳಗೆ ತುಳಸಿ ಎಲೆ ಇಟ್ಟರೆ, ನಮ್ಮಲ್ಲೂ ಸಕಾರಾತ್ಮಕತೆ ಹೆಚ್ಚುತ್ತದೆ ಅನ್ನೋ ನಂಬಿಕೆ ಇದೆ.
ಯಾವ ಮಹಿಳೆಗೆ ಈ 3 ಅಭ್ಯಾಸವಿರುತ್ತದೆಯೋ, ಅಂಥ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ..