- Advertisement -
Recipe: ಇಂದು ನಾವು ಸಾಸ್ ಬಳಸದೇ, ಯಾವ ರೀತಿ ಸಿಂಪಲ್ ಆಗಿ ಫ್ರೈಡ್ ರೈಸ್ ಮಾಡಬಹುದು ಅಂತಾ ಹೇಳಲಿದ್ದೇವೆ. ಫ್ರೈಡ್ ರೈಸ್ ಮಾಡಲು ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿ: ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೇಟ್, ಬೀನ್ಸ್, ಕ್ಯಾಬೇಜ್, ಹಸಿಮೆಣಸು, ಹಸಿಬಟಾಣಿ, 5 ಸ್ಪೂನ್ ಎಣ್ಣೆ, ಉಪ್ಪು, ಪ್ಪೆಪ್ಪರ್ ಪೌಡರ್, ಕೊಂಚ ಗರಂ ಮಸಾಲೆ, ಚಾಟ್ ಮಸಾಲೆ, ಅನ್ನ, ಕೊತ್ತೊಂಬರಿ ಸೊಪ್ಪು.
ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ, ಈರುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ಈಗ ಉಳಿದ ತರಕಾರಿಗಳನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಉಪ್ಪು, ಅರ್ಧ ಸ್ಪೂನ್ ಗರಂ ಮಸಾಲೆ, ಅರ್ಧ ಸ್ಪೂನ್ ಚಾಟ್ ಮಸಾಲೆ, ಪೆಪ್ಪರ್ ಪುಡಿ, ಇವಿಷ್ಟನ್ನು ಹಾಕಿ ಮಿಕ್ಸ್ ಮಾಡಿ. ಬಳಿಕ ಅನ್ನ, ಕೊತ್ತೊಂಬರಿ ಸೊಪ್ಪು ಸೇರಿಸಿದರೆ ಫ್ರೈಡ್ ರೈಸ್ ರೆಡಿ.
- Advertisement -

