Political News: ಬೆಳಗಾವಿ: ಶಾಸಕ ಅರವಿಂದ್ ಬೆಲ್ಲದ್ ಪ್ರತಿಪಕ್ಷ ಉಪನಾಯಕ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಉಪ ನಾಯಕನಿಗೆ ಏನು ಪವರ್ ಇರಲ್ಲ. ಏನು ಕೊಡಬೇಕೆಂದು ಕೊಡುತ್ತಿರಬೇಕು ಅಷ್ಟೇ. ಎಲ್ಲ ತೀರ್ಮಾನಗಳು ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರು ತೆಗದುಕೊಳ್ತಾರೆ. ಉಪನಾಯಕ ಅಂದ್ರೆ ಪ್ರತಿಪಕ್ಷ ನಾಯಕನ ಪಕ್ಕದಲ್ಲಿ ಕೂರಬೇಕು ಅಷ್ಟೇ ಎಂದು ವ್ಯಂಗ್ಯ ಆಡಿದರು.
ಈಗ ಡೆಪ್ಯೂಟಿ ಸ್ಪೀಕರ್ ಇಲ್ವಾ? ಅದೇ ರೀತಿ ಸುಮ್ನೆ ಕೂರಬೇಕು. ಸ್ಪೀಕರ್, ಡೆಪ್ಯೂಟಿ ಅವರಿಗೆ ಮೇಲೆ ಕೂರಲು ಅವಕಾಶನೇ ಕೊಡಲ್ಲ. ನಿನ್ನೆ ಏನು ಅರ್ಧ ಗಂಟೆ ಡೆಪ್ಯೂಟಿ ಸ್ಪೀಕರ್ ಗೆ ಮೇಲೆ ಕೂರಲು ಅವಕಾಶ ಕೊಟ್ಟರು. ಉಪನಾಯಕನಿಗೆ ಸಮಾಜದಲ್ಲೂ ಗೌರವ ಸಿಗಲ್ಲ ಎಂದು ಹೇಳಿದರು.
ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ
ನಾನಾಗಿಯೇ ದೆಹಲಿಗೆ ಹೋಗುವುದಿಲ್ಲ. ದೆಹಲಿಯಿಂದ ಸೂಚನೆ ಬಂದಿದ್ದು, ಕರೆ ಬಂದ್ಮೇಲೆಯೇ ಹೋಗುತ್ತೇನೆ. ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಆದರೆ ಉಚಿತ ಮಾತ್ರ ಅಲ್ಲ. ಹಣ ಕೊಟ್ಟು ಟಿಕೆಟ್ ಪಡೆದು ಹೋಗಬೇಕು.
ಅಸಮಾಧಾನ ಹೊರಹಾಕಿದ ಯತ್ನಾಳ್
ಕರ್ನಾಟಕದಲ್ಲಿ ಇಬ್ಬರು ಮಹಾನುಭಾವರು ಇದ್ದಾರೆ. ಅವರಿಂದ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ಇಬ್ಬರು ಸಿಂಗ್ ಗಳಿಂದ ಈ ನಿರ್ಧಾರ ಮಾಡಿದ್ದೇನೆ. ದೆಹಲಿಯ ಒಬ್ಬರು, ಕರ್ನಾಟಕ ಒಬ್ಬರು ಇದ್ದಾರೆ ಎಂದು ಪಕ್ಷದ ಮೇಲಿನ ಅಸಮಾಧಾನ ಹೊರ ಹಾಕಿದರು.
ಸಿಎಂ ಪಕ್ಕ ಕುಳಿತ ಆ ವ್ಯಕ್ತಿ ಯಾರು?
ಹುಬ್ಬಳ್ಳಿಯ ಮುಸ್ಲಿಂ ಸಮಾವೇಶದಲ್ಲಿ ಐಸಿಸ್ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ವ್ಯಕ್ತಿ ಸಿಎಂ ಪಕ್ಕದಲ್ಲಿಯೇ ಕುಳಿತಿದ್ದನು. ಈ ಬಗ್ಗೆ ಸಿಎಂಗೆ ಮಾಹಿತಿ ಇರಲಿಲ್ಲವಾ ಎಂದು ಯತ್ನಾಳ್ ಪ್ರಶ್ನೆ ಮಾಡಿದರು.
ಎಲ್ಲ ಮಾಹಿತಿ ಪಡೆದುಕೊಂಡ ನಂತರವೇ ಈ ಹೇಳಿಕೆಯನ್ನು ನೀಡುತ್ತಿದ್ದೇನೆ. ಇದು ಹುಡುಗಾಟಿಕೆಯ ಮಾತಲ್ಲ. ಬೇಕಾದ್ರೆ ಮಾಹಿತಿ ತರಿಸಿಕೊಂಡು ಪರಿಶೀಲಿಸಿಕೊಳ್ಳಲಿ. ನಾನೇ ಇನ್ನೊಂದು ವಾರದಲ್ಲಿ ಎಲ್ಲ ಮಾಹಿತಿಯನ್ನು ನೀಡುತ್ತೇನೆ ಎಂದರು.
‘ಅಲ್ಪಸಂಖ್ಯಾತ ಇಲಾಖೆಗೆ ಕೊನೆಯದಾಗಿ 10 ಸಾವಿರ ಕೋಟಿ ಮಾಡಬೇಕು ಅನ್ಕೊಂಡಿದ್ದೀನಿ’
‘ಇಂತಹ ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ’