Monday, December 23, 2024

Latest Posts

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

- Advertisement -

Health Tips: ಇಂದಿನ ಹೆಚ್ಚಿನ ಮಕ್ಕಳು ನೋಡಲು ಗುಂಡುಗುಂಡಾಗಿರುತ್ತಾರೆ. ಆದರೆ ಆರೋಗ್ಯವಂತರಾಗಿರುವುದಿಲ್ಲ. ದೇಹದ ತೂಕವೂ ಅಷ್ಟಕ್ಕಷ್ಟೇ ಇರುತ್ತದೆ. ಅಂಥವರ ಚರ್ಮದ ಭಾರ ಹೆಚ್ಚಿರುತ್ತದೆ. ಆದರೆ ಮೂಳೆ ಗಟ್ಟಿಯಾಗಿರುವುದಿಲ್ಲ. ಅದನ್ನು ಬೊಜ್ಜು ಎಂದು ಕರೆಯುತ್ತಾರೆ. ಹಾಗಾದ್ರೆ ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಮಕ್ಕಳ ಬೊಜ್ಜಿಗೆ ಅತೀಯಾದ ಕಾರಣವೇನಂದ್ರೆ, ಅವರ ಜೀವನಶೈಲಿ. ಇಂದು ಮಕ್ಕಳು ಹೊರಹೋಗಿ ಆಟವಾಡುವುದು ಕಡಿಮೆ. ಅದರಲ್ಲೂ ಸಿಟಿಗಳಲ್ಲಿ ಮಕ್ಕಳು ಹೊರಗೆ ಕಾಲೇ ಇಡುವುದಿಲ್ಲ. ಶಾಲೆಗೆ ಹೋಗುವುದು. ಶಾಲೆಯಿಂದ ಬರುವುದು. ಟಿವಿ, ಮೊಬೈಲ್, ಗೇಮ್, ಜಂಕ್‌ಫುಡ್, ರಾತ್ರಿ ಊಟಕ್ಕೂ ಮುನ್ನ ನಿದ್ದೆ, ಮರುದಿನ ಬೆಳಿಗ್ಗೆ ಅರ್ಧಂಬರ್ಧ ತಿಂಡಿ ಸೇವನೆ, ಮತ್ತೆ ಶಾಲೆಗೆ ಹಾಜರ್. ಇಂಥ ಜೀವನ ಶೈಲಿಯಿಂದಲೇ, ಬೊಜ್ಜು ಬೆಳೆಯುತ್ತದೆ.

ನಿಮಗೆ ನಿಮ್ಮ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿರುವ ಲಕ್ಷಣ ಕಂಡುಬಂದಲ್ಲಿ, ನೀವು ಮಕ್ಕಳಿಗೆ ಆದಷ್ಟು ಆರೋಗ್ಯಕರ ಊಟ, ತರಕಾರಿ, ಹಣ್ಣು, ಎಳನೀರು, ಮಜ್ಜಿಗೆಯಂಥ ಆಹಾರವನ್ನು ಕೊಡಿ. ಜಂಕ್‌ಫುಡ್ ಸಂಪೂರ್ಣವಾಗಿ ನಿಲ್ಲಿಸಿ. ಇದು ಅಸಾಧ್ಯವಾದರೂ, ಸ್ವಲ್ಪವಾದರೂ, ನೀವು ಅದನ್ನು ಕಂಟ್ರೋಲ್ ಮಾಡಬಹುದು. ಅಲ್ಲದೇ, ಸ್ಪೋರ್ಟ್ಸ್‌ಗೆ ಸೇರುವಂತೆ ಮಾಡಬೇಕು. ಇಂಥ ಕೆಲಸಗಳಿಂದ, ನಿಮ್ಮ ಮಕ್ಕಳ ಬೊಜ್ಜು ಕಡಿಮೆಯಾಗಿ, ಅವರು ಆರೋಗ್ಯವಂತರಾಗಿರುತ್ತಾರೆ.

ಇಲ್ಲವಾದಲ್ಲಿ, ಭವಿಷ್ಯದಲ್ಲಿ ಇದೇ ಬೊಜ್ಜಿನಿಂದ ಕ್ಯಾನ್ಸರ್, ಹೃದಯದ ಸಮಸ್ಯೆ, ಕಿಡ್ನಿ ಸಮಸ್ಯೆಗಳು ತಲೆದೂರುತ್ತದೆ. ಹಾಗಾಗಿ ಮಕ್ಕಳಿರುವಾಗಲೇ, ಅವರ ಆರೋಗ್ಯ ಕಾಪಾಡುವುದು ಮುಖ್ಯ. ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಲು ಇನ್ನು ಏನೇನು ಕಾರಣವಿರುತ್ತದೆ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss