Healthy tips: ಅಡುಗೆ ಮನೆ ಅಂದ್ರೆ, ಆಸ್ಪತ್ರೆ ಇದ್ದ ಹಾಗೆ. ಏಕೆಂದರೆ, ನಾವು ಅಡುಗೆ ಮನೆಯಲ್ಲಿರುವ ಕೆಲ ಸಾಮಗ್ರಿಯಿಂದ ಆರೋಗ್ಯಕರ ಅಡುಗೆ ಮಾಡಿಕೊಂಡು ತಿನ್ನುತ್ತೇವೆ. ಕೆಲವು ಬಾರಿ ಜ್ವರ, ನೆಗಡಿ, ಕೆಮ್ಮು, ಗಾಯ ಇವುಗಳಿಗೆಲ್ಲ ಅಡುಗೆ ಮನೆಯಲ್ಲೇ ಔಷದಿ ಇರುತ್ತದೆ. ಅಂಥ ವಸ್ತುಗಳನ್ನು ಬಳಸಿಕೊಂಡೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ. ಆದರೆ ಅಡುಗೆ ಕೋಣೆಯಲ್ಲಿರುವ ಕೆಲ ವಸ್ತುಗಳು ಮಾತ್ರ, ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಅದು ಯಾವ ವಸ್ತು ಅಂತಾ ತಿಳಿಯೋಣ ಬನ್ನಿ..
ಅಲ್ಯೂಮಿನಿಯಂ ಪಾತ್ರೆ ಮತ್ತು ಅಲ್ಯೂಮಿನಿಯಂ ಫಾಯ್ಲ್. ಅಲ್ಯೂಮಿನಿಯಂ ಪೇಪರ್ನಲ್ಲಿ ಕೆಲವರು ಕೆಲವು ಆಹಾರ ಪದಾರ್ಥಗಳನ್ನು ಸುತ್ತಿಡುತ್ತಾರೆ. ಆದೆರೆ ಇದು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು, ಇದರಿಂದ ಕ್ಯಾನ್ಸರ್ನಂಥ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ. ಅದೇ ರೀತಿ ಅಲ್ಯೂಮಿನಿಯಂ ಪಾತ್ರೆ ಕೂಡ ಹಾಗೆ. ಆ ಪಾತ್ರೆ ಬಳಸಿ, ಅಡುಗೆ ಮಾಡಿ, ಊಟ ಮಾಡುವುದರಿಂದ, ರೋಗ ರುಜಿನಗಳು ಬರುತ್ತದೆ. ಹಾಗಾಗಿ ಇದನ್ನು ಬಳಸಬೇಡಿ.
ಮೈಕ್ರೋವೇವ್ ಓವನ್. ಇಂದಿನ ಕಾಲದಲ್ಲಿ ಓವನ್ ಬಳಸುವುದು ಶೋಕಿಯಾಗಿದೆ. ಆದರೆ ಇದನ್ನು ಬಳಸಿ, ಆಹಾರವನ್ನು ತಯಾರಿಸುವುದರಿಂದ, ಅಥವಾ ಇದರಲ್ಲಿ ಆಹಾರವನ್ನು ಬಿಸಿ ಮಾಡುವುದರಿಂದ, ನಮ್ಮ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಹೃದಯ ಸಮಸ್ಯೆ ಬರುವ ಸಾಧ್ಯತೆ ಇದೆ. ಅಲ್ಲದೇ, ನಾವು ಯಾವನ ಆಹಾರವನ್ನು ಬೇಯಿಸುತ್ತೆವೋ, ಓವನ್ ಅದರಲ್ಲಿರುವ ಉತ್ತಮ ಸತ್ವಗಳನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಪಾತ್ರೆ ಬಳಸಿ ಅಡುಗೆ ಮಾಡುವುದು ಉತ್ತಮ.
ಪ್ಲಾಸ್ಟಿಕ್, ಪ್ಲಾಸ್ಟಿಕ್ ಡಬ್ಬ, ಅಥವಾ ಪ್ಲಾಸ್ಟಿಕ್ ಪಾತ್ರೆ. ಇವುಗಳಲ್ಲಿ ಯಾವುದನ್ನು ಬಳಸಿದರೂ, ಅದು ಕ್ಯಾನ್ಸರ್ ಬರಲು ಕಾರಣವಾಗುತ್ತದೆ. ಎಲ್ಲರಿಗೂ ಪ್ಲಾಸ್ಟಿಕ್ ಎಷ್ಟು ಡೇಂಜರ್ ಅನ್ನುವುದು ಗೊತ್ತು. ಇದರಲ್ಲಿ ಆಹಾರವಿಟ್ಟು, ಅದನ್ನು ನಾವು ಸೇವಿಸುವುದರಿಂದ ನಮ್ಮ ಆರೋಗ್ಯ ಸಂಪೂರ್ಣವಾಗಿ ಹಾಳಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಬೇಡಿ.