Friday, December 5, 2025

Latest Posts

ನೀರನ್ನು ಕುಡಿಯಬಾರದಂತೆ.. ತಿನ್ನಬೇಕಂತೆ.. ಅದು ಹೇಗೆ ಅಂತಾ ತಿಳಿಯಿರಿ..

- Advertisement -

Health Tips: ನೀರು ನಮ್ಮ ದೇಹಕ್ಕೆ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ನಮ್ಮ ದೇಹಕ್ಕಾಗುವಷ್ಟು ನಾವು ನೀರಿನ ಸೇವನೆ ಮಾಡಿದರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಆದರೆ ನಾವು ನೀರನ್ನು ಕುಡಿಯಬಾರದಂತೆ. ತಿನ್ನಬೇಕಂತೆ. ಹಾಗಾದ್ರೆ ನೀರನ್ನು ತಿನ್ನುವುದು ಹೇಗೆ..? ಏನು ಈ ಮಾತಿನ ಅರ್ಥ ಅಂತಾ ತಿಳಿಯೋಣ ಬನ್ನಿ..

ನೀವು ನೀರನ್ನು ಬಾಯಿಗೆ ಹಾಕಿದ ತಕ್ಷಣ ಅದನ್ನು ನುಂಗಬಾರದು. ನೀರನ್ನು ಕೊಂಚ ಕೊಂಚ ಬಾಯಿಗೆ ಹಾಕಿ, ಬಾಯಿ ಮುಕ್ಕಳಿಸಬೇಕು. ಬಳಿಕ ನಿಧಾನವಾಗಿ ಆ ನೀರನ್ನು ಕುಡಿಯಬೇಕು. ಇದನ್ನೇ ನೀರು ತಿನ್ನುವ ಪ್ರಕ್ರಿಯೆ ಎನ್ನುತ್ತಾರೆ. ಹೀಗೆ ನಿಧಾನವಾಗಿ, ಬಾಯಿ ಮುಕ್ಕಳಿಸಿ ನೀರು ಕುಡಿಯುವುದರಿಂದ, ನಮ್ಮ ಆರೋಗ್ಯ ಉತ್ತವಾಗಿರುತ್ತದೆ. ನೀರು ನಮ್ಮ ದೇಹಕ್ಕೆ ಆರೋಗ್ಯಕರ ರೀತಿಯಿಂದ ಹೋದರೆ, ನಮ್ಮ ಜೀರ್ಣಾಂಗ ವ್ಯವಸ್ಥೆಯೂ ಉತ್ತಮವಾಗಿರುತ್ತದೆ.

ಎರಡನೇಯದಾಗಿ ಫ್ರಿಜ್‌ನಲ್ಲಿ ಇರಿಸಿದ ನೀರು ಅಥವಾ ಸಿಕ್ಕಾಪಟ್ಟೆ ಬಿಸಿ ಇರುವ ನೀರನ್ನು ಕುಡಿಯಬಾರದು. ನೀರನ್ನು ಕಾಯಿಸಿ, ತಣಿಸಿ ಕುಡಿಯಬೇಕು. ಹೆಚ್ಚು ತಣ್ಣಗಿರುವ ನೀರನ್ನು ಕುಡಿದರೆ, ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತರಹೇವಾರಿ ಖಾಯಿಲೆ ಬರಲು ಕಾರಣವಾಗುತ್ತದೆ. ಬಿಸಿ ಬಿಸಿ ನೀರು ಕುಡಿದರೆ, ದೇಹದ ಒಳಭಾಗ ಸುಟ್ಟು ಹೋಗುತ್ತದೆ. ಹಾಗಾಗಿ ರೂಮ್‌ ಟೆಂಪ್ರೆಚರ್‌ನಲ್ಲಿರುವ ನೀರು ಕುಡಿಯಬೇಕು.

ಮೂರನೇಯದಾಗಿ ನಿಂತು ನೀರು ಕುಡಿಯಬಾರದು. ಕುಳಿತುಕೊಂಡೇ ನೀರು ಕುಡಿಯಬೇಕು. ಏಕೆಂದರೆ,  ನಿಂತು ನೀರು ಕುಡಿದರೆ, ಅದು ನಮ್ಮ ದೇಹಕ್ಕೆ ಸರಿಯಾಗಿ ಸೇರುವುದಿಲ್ಲ. ಇದರಿಂದಲೇ, ಭವಿಷ್ಯದಲ್ಲಿ ಸಂಧಿವಾತ ಬರುತ್ತದೆ. ಆದರೆ ನೀವು ಕುಳಿತುಕೊಂಡು ನೀರು ಕುಡಿದರೆ, ಅದು ನಿಮ್ಮ ದೇಹದ ಎಲ್ಲ ಭಾಗಗಳಿಗೂ ಹೋಗಿ, ತನ್ನ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುತ್ತದೆ. ಆಗ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ.

ಸಹಜ- ಅಸಹಜ ಬಿಳಿಪದರ ಸ್ರಾವ(white discharge) ಅಂದ್ರೇನು..?

ಕಣ್ಣಿಗೆ ಪೊರೆ ಬರುವುದು ಅಂದರೇನು..?

ಕಣ್ಣಿನಲ್ಲಿದೆ ಆರೋಗ್ಯದ ಗುಟ್ಟು

- Advertisement -

Latest Posts

Don't Miss