ಶೆಟ್ಟರ್‌ ಕಡೆಯಿಂದ ಸನ್ಮಾನ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ.. ಕಾರಣವೇನು..?

 Hubballi News: ಹುಬ್ಬಳ್ಳಿ: ಹುಬ್ಬಳ್ಳಿ ಪಕ್ಷದ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾದರು. ಜೊತೆಗೆ ಶೆಟ್ಟರ್‌ಗೆ 68ನೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಸಿಎಂ ಸಿದ್ದರಾಮಯ್ಯ ಅವರಿಗೆ, ಹುಬ್ಬಳ್ಳಿಯ ಮಧುರಾ ಎಸ್ಟೇಟ್‌ನಲ್ಲಿರುವ ಶೆಟ್ಟರ್ ನಿವಾಸಕ್ಕೆ ಭರ್ಜರಿ ಸ್ವಾಗತ ಕೋರಲಾಯಿತು.

ಆದರೆ ಸಿದ್ದರಾಮಯ್ಯ ಅವರಿಗೆ ಶೆಟ್ಟರ್ ಅವರು ಸನ್ಮಾನ ಮಾಡಲು ಮುಂದಾದಾಗ, ಸಿಎಂ ಸಿದ್ದರಾಮಯ್ಯ ಶೋಕಾಚರಣೆ ಇದೆ ಶೆಟ್ಟರೆ ಎಂದು ಹೇಳುವ ಮೂಲಕ, ಸನ್ಮಾನವನ್ನು ನಿರಾಕರಿಸಿದರು. ಅಲ್ಲದೇ, ತಮಗೆ ಜೈಕಾರದ ಘೋಷಣೆ ಎಲ್ಲ ಕೂಗುವುದು ಬೇಡಿ, ಶಾಲು ತುರಾಯಿ ಎಲ್ಲ ಬೇಡ ಎಂದು ಹೇಳಿದರು. ಬಳಿಕ, ಶೆಟ್ಟರ್ ಮನೆಯಲ್ಲಿ ಸಿಎಂ ಉಪಹಾರ ಸೇವಿಸಿದರು.

ಸಂತ್ರಸ್ತ ಮಹಿಳೆಯ ಭೇಟಿಗೆ ಹೈಕೋರ್ಟ್ ನಿರ್ಭಂದ: ಆದರೂ ಭೇಟಿಯಾದ್ರಾ ಬಿಜೆಪಿಗರು..?

‘ಈ ರೀತಿಯ ಆಡಂಬರ ನನಗೆ ಇಷ್ಟ ಆಗುವುದಿಲ್ಲ. ನಾನು ಇಂತಹುದಕ್ಕೆ ಪ್ರಚೋದನೆ ಕೊಡುವುದೂ ಇಲ್ಲ’

ಸಿಂಗಾಪುರದಲ್ಲಿ 15 ದಿನದಲ್ಲಿ 56 ಸಾವಿರ ಕೋವಿಡ್ ಕೇಸ್ ಪತ್ತೆ

About The Author