HIV ಎಂದರೇನು..? ಇದರ ಲಕ್ಷಣಗಳೇನು..?

Health Tips: ವೈದ್ಯರಾದ ಡಾ.ಕೆ.ಜೆ.ಇರ್ಫಾನ್ HIV ಎಂದರೇನು..? ಇದರ ಲಕ್ಷಣಗಳೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಹೆಚ್‌ಐವಿ ಎಂದರೆ, ವೈರಲ್ ಇನ್‌ಫೆಕ್ಷನ್. ಈ ರೋಗ ಬರುವ ಮುನ್ನ ನೆಗಡಿ, ಕೆಮ್ಮು, ಗಂಟಲ ನೋವು ಬರುತ್ತದೆ. ಸಾಮಾನ್ಯ ಜ್ವರ ಬರುವಾಗ ಏನೇನು ಲಕ್ಷಣವಿರುತ್ತದೆಯೋ, ಅಂಥ ಲಕ್ಷಣಗಳೆಲ್ಲವೂ ಇರುತ್ತದೆ. ಸುಸ್ತಾಗುತ್ತದೆ. ಇನ್ನು ಕೆಲವರಿಗೆ ದೇಹದ ಮೇಲೆ ಕೆಂಪು ಗುಳ್ಳೆಗಳಾಗುತ್ತದೆ.

ಇಂಥ ಲಕ್ಷಣಗಳು ಕಂಡುಬಂದಾಗ, ವೈದ್ಯರ ಬಳಿ ತೋರಿಸಿಕೊಳ್ಳಬೇಕು. ತಪಾಸಣೆಯಾದ 10ರಿಂದ 23 ದಿನಗಳಲ್ಲಿ, ಏಡ್ಸ್ ಇದ್ದರೆ, ಪಾಸಿಟಿವ್ ಬರುತ್ತದೆ. ಇದು ಮೊದಲನೇಯ ಹಂತವಾಗಿದ್ದು, ಈ ವೇಳೆ ಚಿಕಿತ್ಸೆ ಪಡೆದಾಗ, ಏಡ್ಸ್ ಗುಣಪಡಿಸಿಕೊಳ್ಳಬಹುದು. ಇಲ್ಲವಾದಲ್ಲಿ, ಇದು ಜೀವಕ್ಕೇ ಕುತ್ತು ತರುತ್ತದೆ. ಅಲ್ಲದೇ, ಹೆಚ್‌ಐವಿ ಇದ್ದವರು, ಬೇರೆಯವರಿಗೆ ರಕ್ತ ಕೊಡುವ ಹಾಗಿಲ್ಲ. ಇನ್ನೊಬ್ಬರಿಗೆ ತಮ್ಮ ಎಂಜಿಲು ತಿನ್ನಲು ಕೊಡುವ ಹಾಗಿಲ್ಲ. ಆದರೆ ಶೇಕ್ ಹ್ಯಾಂಡ್ ಮಾಡುವುದು, ಮಾತನಾಡುವುದೆಲ್ಲ ಮಾಡಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

About The Author