Wednesday, October 15, 2025

Latest Posts

ಈ 2 ಸಮಯದಲ್ಲಿ ಮನುಷ್ಯ ತಾಳ್ಮೆಯಿಂದ ಇರಬೇಕು..

- Advertisement -

Spiritual Stories:ಮನುಷ್ಯ ತನ್ನ ಜೀವನದಲ್ಲಿ ಎಷ್ಟು ತಾಳ್ಮೆಯಿಂದ ಇರುತ್ತಾನೋ, ಅಷ್ಟು ಒಳ್ಳೆಯದು. ಹಿರಿಯರೇ ಹೇಳಿದ ಹಾಗೆ ತಾಳ್ಮೆಯಿಂದಿದ್ದರೆ, ಮನುಷ್ಯ ಪ್ರಪಂಚವನ್ನೇ ಗೆಲ್ಲಬಹುದಂತೆ. ಆದರೆ ನೀವು ನೆಮ್ಮದಿಯಾಗಿ ಬದುಕಬೇಕು ಅಂದ್ರೆ, 2 ಸಮಯದಲ್ಲಿ ತಾಳ್ಮೆಯಿಂದ ಇರಬೇಕು. ಹಾಗಾದ್ರೆ ಅದು ಯಾವ 2 ಸಮಯ ಅಂತಾ ತಿಳಿಯೋಣ ಬನ್ನಿ..

ನೀವು ತುಂಬಾ ಸಂತೋಷದಲ್ಲಿದ್ದಾಗ ಅಥವಾ ತುಂಬ ದುಃಖದಲ್ಲಿದ್ದಾಗ ತಾಳ್ಮೆಯಿಂದ ಇರಬೇಕು. ಮತ್ತು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಸಂತೋಷದಲ್ಲಿದ್ದಾಗ ಏಕೆ ತಾಳ್ಮೆಯಿಂದ ಇರಬೇಕು ಎಂದರೆ, ಕೆಲವರು ಸಂತೋಷದಲ್ಲಿರುವಾಗ, ನಾನು ಅದು ಮಾಡುತ್ತೇನೆ, ಇದು ಕೊಡುತ್ತೇನೆ, ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಮಾತು ಕೊಟ್ಟು ಬಿಡುತ್ತಾರೆ. ಆ ಮಾತು ಈಡೇರಿಸಲು ಸಾಧ್ಯವಾದರೆ ಉತ್ತಮ. ಆದರೆ ಖುಷಿಯಲ್ಲಿ ಕೊಟ್ಟ ಮಾತನ್ನು ಈಡೇರಿಸಿಕೊಳ್ಳಲು ಆಗದಿದ್ದಲ್ಲಿ, ನಿಮ್ಮನ್ನು ಜನ ಕೀಳಾಗಿ ನೋಡುತ್ತಾರೆ.

ಉದಾಹರಣೆಗೆ ನೀವು ಖುಷಿಯಲ್ಲಿದ್ದಾಗ, ನಾನು ನಿಮಗೆ ಇಂತಿಷ್ಟು ದುಡ್ಡು ಕೊಡುತ್ತೇನೆ ಎಂದು ಹೇಳುತ್ತೀರಿ. ಆಗ ನೀವು ಆ ಹಣವನ್ನು ಕೊಡಲೇಬೇಕಾಗುತ್ತದೆ. ಇಲ್ಲವಾದಲ್ಲಿ, ಆ ವ್ಯಕ್ತಿ ನಿಮ್ಮ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾನೆ. ಬರೀ ದುಡ್ಡಂತಲ್ಲ, ನೀವು ಕೆಲವು ಕೆಲಸ ಮಾಡುತ್ತೇನೆಂದು ಮಾತು ಕೊಡಬಹುದು. ಆ ಮಾತು ಈಡೇರಿಸುವಷ್ಟು ನೀವು ಯೋಗ್ಯವಾಗಿರಬೇಕು.

ಇನ್ನು ದುಃಖದಲ್ಲಿದ್ದಾಗ ಅಥವಾ ಕೋಪದಲ್ಲಿದ್ದಾಗ, ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಇವೆರಡು ಸಂದರ್ಭದಲ್ಲಿ ಮಾತನಾಡಲೇಬೇಡಿ. ಏಕೆಂದರೆ, ಈ ಸಂದರ್ಭದಲ್ಲಿ ಒಳ್ಳೆಯ ಮಾತು ಬರಲು ಸಾಧ್ಯವಿಲ್ಲ. ದುಃಖದ ಸಂದರ್ಭದಲ್ಲಿ ಹಲವರು ಸಾವಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಇದು ತಪ್ಪು. ದುಃಖದ ಸಮಯ ಬಂದಾಗ, ಮೌನವಾಗಿ ಕುಳಿತು ಆ ಬಗ್ಗೆ ಯೋಚಿಸಬೇಕು. ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು.

ಇನ್ನು ಕೋಪದ ಸಮಯ ಬಂದಾಗ, ಮಾತನಾಡದೇ ಸುಮ್ಮನಿರಬೇಕು. ಏಕೆಂದರೆ ಈ ಸಂದರ್ಭದಲ್ಲಿ ಬರುವ ಮಾತನ್ನು ನೀವು ಹಿಂದೆಗೆದುಕೊಳ್ಳಲು ಆಗುವುದಿಲ್ಲ. ಬಳಿಕ ನೀವು ಹಾಗೆ ಮಾತನಾಡಬಾರದಿತ್ತು ಎಂದು ಪಶ್ಚಾತಾಪ ಪಡುವಂತಾಗುತ್ತದೆ. ಇನ್ನು ಕೋಪದ ಸಮಯದಲ್ಲಿ ಕೆಲವು ನಿರ್ಧಾರಗಳನ್ನು ಸಹ ಮಾಡಬಾರದು. ಇದರಿಂದ ಭವಿಷ್ಯದಲ್ಲಿ ಕಷ್ಟ ಬರಬಹುದು.

ಮನೆ ಬಳಿ ತೆಂಗಿನ ಮರವನ್ನು ಎಲ್ಲಿ ಬೆಳೆಸಬೇಕು..?

ದೇವಸ್ಥಾನಗಳಲ್ಲಿ ಕಲ್ಯಾಣಿ ಇರಲು ಕಾರಣವೇನು..?

ನೆಮ್ಮದಿಯಿಂದ ಇರಬೇಕು ಎಂದರೆ, ಇಂಥ ಸ್ಥಳಗಳಲ್ಲಿರಬೇಡಿ..

- Advertisement -

Latest Posts

Don't Miss