Health Tips: ಸಾಯೋಕ್ಕೂ ಮುನ್ನ ತಮ್ಮ ಕಣ್ಣು ದಾನಮ ಮಾಡಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಹಾಗೆ ಕಣ್ಣು ದಾನ ಮಾಡಲು ಏನೇನು ರೂಲ್ಸ್ ಫಾಲೋ ಮಾಡಬೇಕು ಎಂದು ಮಾತ್ರ, ಹಲವರಿಗೆ ಗೊತ್ತಿರುವುದಿಲ್ಲ. ಇಂದು ನಾವು ಕಣ್ಣು ದಾನ ಮಾಡೋಕ್ಕೆ ಏನೇನು ರೂಲ್ಸ್ ಇದೆ ಅಂತಾ ಹೇಳಲಿದ್ದೇವೆ.
ಕಣ್ಣು ದಾನ ಮಾಡಲು, ನೀವು ಕಣ್ಣಿನ ಬ್ಯಾಂಕ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಸಮೀಪದ ಆಸ್ಪತ್ರೆಯಲ್ಲಿ ನಿಮಗೆ ಐ ಬ್ಯಾಂಕ್ ಸಿಗುತ್ತದೆ. ಅಲ್ಲಿ ನೋಂದಣಿ ಮಾಡಿಸಿಕೊಂಡರೆ, ನೀವು ಸಾವನ್ನಪ್ಪಿದಾಗ ನಿಮ್ಮ ಕಣ್ಣನ್ನು ಅವರು ಕಲೆಕ್ಟ್ ಮಾಡಿಕೊಂಡು ಹೋಗುತ್ತಾರೆ. ನೋಂದಣಿಯಾಗದಿದ್ದರೂ, ಸಹ ನೀವು ಕಣ್ಣು ದಾನ ಮಾಡಬಹುದು.
ಆದರೆ ಯಾರು ಕಣ್ಣು ದಾನ ಮಾಡಲು ಇಚ್ಛಿಸುತ್ತಾರೋ, ಅವರು ತಮ್ಮ ಮನೆಜನರಿಗೆ ಆ ವಿಷಯವನ್ನು ತಿಳಿಸಿರಲೇಬೇಕು. ಆಗ ನಿಮ್ಮ ಸಾವಿನ ಬಳಿಕ, ಆ ಸಂಬಂಧಿಕರು, ಸಂಬಂಧ ಪಟ್ಟ ವೈದ್ಯರಿಗೆ ಕರೆ ಮಾಡಿ, ಕಣ್ಣು ದಾನ ಮಾಡಲು ಸಹಕರಿಸಬಹುದು. ನೀವು ನೋಂದಣಿ ಮಾಡಲು ವೈದ್ಯರ ಬಳಿ ಹೋಗಿ, ಅಲ್ಲಿ ಫಾರ್ಮ್ ತುಂಬಬಹುದು. ಆದರೆ ನಿಮಗೆ ಆಸ್ಪತ್ರೆಗೆ ಹೋಗಲಾಗದಿದ್ದಲ್ಲಿ, ಆನ್‌ಲೈನ್ ಮೂಲಕವೂ ನೀವು ಕಣ್ಣು ದಾನಕ್ಕಾಗಿ ನೋಂದಣಿ ಮಾಡಿಸಿಕೊಳ್ಳಬಹುದು.
ಆ ಫಾರ್ಮ್‌ನಲ್ಲಿ ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್ ಕೊಡಬೇಕು. ಅಥವಾ ನೀವು 8884018800 ಈ ನಂಬರ್‌ಗೆ ಮಿಸ್ ಕಾಲ್ ಕೊಟ್ಟರೆ, ಅವರು ಕೆಲವು ವಿವರಣೆ ತುಂಬಲು ನಿಮಗೆ ಫೋನ್ ಮುಖಾಂತರ ಫಾರ್ಮ್ ಕಳಿಸುತ್ತಾರೆ. ನೀವು ಆ ಫಾರ್ಮ್ ಫಿಲ್ ಅಪ್ ಮಾಡಿ, ಕಣ್ಣು ದಾನಕ್ಕಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

