Health tips: ನೀವು ವೈದ್ಯರ ಬಳಿ ಹೋದಾಗ, ವೈದ್ಯರು ಮೊದಲು ಚೆಕ್ ಮಾಡುವುದೇ ನಿಮ್ಮ ನಾಲಿಗೆ. ನಾಲಿಗೆ ನೋಡಿ, ನಿಮ್ಮ ದೇಹದಲ್ಲಿ ಏನಾಗಿದೆ ಎಂದು ಹೇಳಲಾಗುತ್ತದೆ. ಇನ್ನು ನಾಲಿಗೆಯ ಬಣ್ಣ ಬದಲಾಗೋಕ್ಕೆ ಕಾರಣವೇನು ಎಂದು ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ಡಾ.ಆಂಜೀನಪ್ಪಾ ಅವರು ಈ ಬಗ್ಗೆ ವಿವರಿಸಿದ್ದು, ಜ್ವರ ಬಂದಾಗ ನಮ್ಮ ನಾಲಿಗೆ ಹಳದಿ ಇರುತ್ತದೆ. ಅದರ ಮೇಲೆ ಬಿಳಿ ಬಿಳಿ ಪದರವಿರುತ್ತದೆ. ತಿನ್ನಲು ಏನೂ ರುಚಿಸುವುದಿಲ್ಲ. ನಾಲಿಗೆ ಒಣಗಿದ ಹಾಗೆ ಆಗುತ್ತದೆ. ಇದಕ್ಕೆ ಕಾರಣವೇನು ಅಂದ್ರೆ, ನಮ್ಮ ದೇಹಕ್ಕೆ ಬೇಕಾದಷ್ಟು ನೀರಿನ ಪ್ರಮಾಣ ನಮ್ಮ ದೇಹದಲ್ಲಿ ಇರುವುದಿಲ್ಲ. ಹಾಗಾಗಿ ನಾಲಿಗೆ ಬಣ್ಣ ಬದಲಾಗುತ್ತದೆ. ನಾಲಿಗೆ ಒಣಗುತ್ತದೆ.
ಹಾಗಾಗಿ ಚೆನ್ನಾಗಿ ನೀರು ಕುಡಿಯಬೇಕು. ಆಗ ನಮ್ಮ ನಾಲಿಗೆ ಒಣಗುವುದಿಲ್ಲ. ಅಲ್ಲದೇ, ನಮ್ಮ ಬಾಯಿಯಿಂದ ವಾಸನೆಯೂ ಬರುವುದಿಲ್ಲ. ನಿಮ್ಮ ದೇಹ ಡಿಹೈಡ್ರೇಷನ್‌ನಿಂದ ಇದ್ದರೆ, ನಾಲಿಗೆ ಒಣಗುವುದಲ್ಲದೇ, ಬಾಯಿ ವಾಸನೆಯೂ ಬರುತ್ತದೆ. ಹಾಗಾಗಿ ಚೆನ್ನಾಗಿ ನೀರು ಕುಡಿದರೆ, ಬಾಯಿ ಒಣಗುವುದಿಲ್ಲ. ಬಾಯಿಯ ವಾಸನೆಯೂ ಬರುವುದಿಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

