Health tips: ಎಲ್ಲರಿಗೂ ಕಣ್ಣು ದಾನ ಮಾಡುವ ಬಗ್ಗೆ ಗೊತ್ತು. ಆದರೆ ದಾನ ಮಾಡಿದ ಕಣ್ಣು ಹೇಗೆ ಪರೀಕ್ಷಿಸುತ್ತಾರೆ. ಅದನ್ನು ಹೇಗೆ ಇನ್ನೊಬ್ಬರಿಗೆ ಜೋಡಿಸುತ್ತಾರೆ ಅನ್ನೋದು ಮಾತ್ರ ಗೊತ್ತಿರುವುದಿಲ್ಲ. ಇಂದು ವೈದ್ಯರು ದಾನ ಮಾಡಿದ ಕಣ್ಣಿನ ತಪಾಸಣೆ ಹೇಗಿರುತ್ತದೆ ಅಂತಾ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ದಾನ ಮಾಡಿದ ಕಣ್ಣಿನ ಆರೋಗ್ಯ, ಕ್ವಾಲಿಟಿ ಎಲ್ಲವೂ ಉತ್ತಮವಾಗಿ ಇದೆಯಾ ಇಲ್ಲವಾ ಅನ್ನೋದನ್ನ ಮೊದಲು ಪರೀಕ್ಷಿಸಲಾಗುತ್ತದೆ. ಬಳಿಕ ಕಣ್ಣುಗಳನ್ನು ಐ ಬ್ಯಾಂಕ್‌ನಲ್ಲಿ ಸ್ಟೋರ್ ಮಾಡಲಾಗುತ್ತದೆ. ಮೊದಲೆಲ್ಲ ಫ್ರಿಜ್‌ನಲ್ಲಿ ಸ್ಟೋರ್ ಮಾಡಲಾಗುತ್ತದೆ. ಆದರೆ ಈಗ ಕೆಮಿಕಲ್ ಬಳಸಿ, ದಾನ ಮಾಡಿದ ಕಣ್ಣನ್ನು ಸ್ಟೋರ್ ಮಾಡಲಾಗುತ್ತದೆ. ಹೀಗೆ ಸ್ಟೋರ್ ಮಾಡಿದ ಕಣ್ಣನ್ನು ಆದಷ್ಟು ಬೇಗ ಬೇರೆಯವರಿಗೆ ಹಾಕಲಾಗುತ್ತದೆ. ಇಲ್ಲವಾದಲ್ಲಿ ಆ ಕಣ್ಣಿನ ಗುಣ ಕಡಿಮೆಯಾಗುತ್ತ ಬರುತ್ತದೆ. ಹಾಗಾಗಿ ಹೆಚ್ಚು ತಡಮಾಡದೇ, ಕಣ್ಣಿನ ಟ್ರಾನ್ಸ್‌ಪ್ಲಾಂಟ್ ಮಾಡಬೇಕಾಗುತ್ತದೆ.
ಯಾರಿಗೆ ಐ ಟ್ರಾನ್ಸ್‌ಪ್ಲಾಂಟ್ ಮಾಡಬೇಕೋ, ಅವರ ಲೀಸ್ಟ್ ಮಾಡಿ ಇಡಲಾಗುತ್ತದೆ. ಕಣ್ಣು ದಾನ ಸಿಕ್ಕಾಗ, ಅವರನ್ನು ಕಾಂಟ್ಯಾಕ್ಟ್ ಮಾಡಿ, ಅವರಿಗೆ ಕಣ್ಣನ್ನು ಟ್ರಾನ್ಸ್‌ಪ್ಲಾಂಟ್ ಮಾಡಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..




