Friday, October 24, 2025

Latest Posts

ಹಿಂದೂ ಶಾಸ್ತ್ರದ ಪ್ರಕಾರ ಹೆಣ್ಣು ಮಕ್ಕಳು ಈ ಕೆಲಸಗಳನ್ನು ಮಾಡಬಾರದು..

- Advertisement -

Spiritual :ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿ, ನಿಯಮ, ಶಾಸ್ತ್ರಗಳಿದೆ. ಅದರಲ್ಲಿ ಹಲವು ಕೆಲಸಗಳನ್ನು ಮಹಿಳೆಯರು ಮಾಡುವ ಹಾಗಿಲ್ಲ. ಅದರಲ್ಲೂ ಧಾರ್ಮಿಕ ಕಾರ್ಯಕ್ಕೆ ಸಂಬಂಧಿಸಿದಂತೆ ಕೆಲ ಕೆಲಸಗಳನ್ನು ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ, ಆ ಕಾರ್ಯದ ಫಲ ದೊರಕುವುದಿಲ್ಲ. ಹಾಗಾದ್ರೆ ಮಹಿಳೆಯ ಮಾಡಬಾರದ ಧಾರ್ಮಿಕ ಕಾರ್ಯಗಳು ಏನೇನು ಅಂತಾ ತಿಳಿಯೋಣ ಬನ್ನಿ..

ದೇವರ ಪೂಜೆ. ಇದು ಹಲವರಿಗೆ ಆಶ್ಚರ್ಯವೆನ್ನಿಸಬಹುದು. ಆದರೆ ಸತ್ಯ. ಹಿಂದೂಗಳಲ್ಲಿ ಹೆಣ್ಣು ಮಕ್ಕಳು ದೇವರ ಪೂಜೆ ಮಾಡುವಂತಿಲ್ಲ. ಅದರಲ್ಲೂ ದೇವರ ಕೋಣೆಯಲ್ಲಿರುವ ಮೂರ್ತಿಗಳನ್ನು ಆಕೆ ಮುಟ್ಟುವಂತಿಲ್ಲ. ಹಾಗಾಗಿಯೇ ಎಷ್ಟು ಮನೆಯಲ್ಲಿ ಹೆಣ್ಣು ಮಕ್ಕಳು, ಕಲಶವನ್ನಿಟ್ಟು, ಅದರ ಮೇಲೆ ಮಾವಿನ ಎಲೆ, ಹೂವಿನ ಅಲಂಕಾರ ಮಾಡಿ, ತೆಂಗಿನಕಾಯಿಯನ್ನಿಟ್ಟು. ಅದಕ್ಕೆ ಸೀರೆ, ಆಭರಣವನ್ನು ಹಾಕಿ. ಅದನ್ನೇ ಲಕ್ಷ್ಮೀ ದೇವಿಯೆಂದು ಪೂಜಿಸುತ್ತಾರೆ. ಏಕೆಂದರೆ, ಮನೆಯ ಮೂಲ ದೇವರ ವಿಗ್ರಹವನ್ನು ಹೆಣ್ಣು ಮಕ್ಕಳು ಮುಟ್ಟಿದರೆ, ಅದರಿಂದ ಆ ಮನೆಗೆ ಒಳ್ಳೆಯದಲ್ಲವೆಂಬ ನಂಬಿಕೆ ಇದೆ. ಏಕೆಂದರೆ ಹೆಣ್ಣು ಮಕ್ಕಳು ಪ್ರತಿ ತಿಂಗಳು ಋತುಮತಿಯಾಗುತ್ತಾರೆ. ಹಾಗಾಗಿ ಈ ಕೆಲಸ ನಿಷಿದ್ಧವೆನ್ನಲಾಗಿದೆ.

ದೇವರಿಗೆ ತೆಂಗಿನ ಕಾಯಿ ಒಡೆಯುವಂತಿಲ್ಲ. ಹೆಣ್ಣು ಮಕ್ಕಳು ದೇವರಿಗೆ ತೆಂಗಿನಕಾಯಿಯನ್ನು ಒಡೆಯುವಂತಿಲ್ಲ. ತೆಂಗಿನಕಾಯಿ ದೇವರ ನೈವೇದ್ಯಕ್ಕೆ ಶ್ರೇಷ್ಠ ಅಂತಾ ಹೇಳುವುದು ಏಕೆ ಎಂದರೆ, ಅದು ಎಂಜಿಲಾಗದೇ ಬೆಳೆದ ಗಿಡ. ನಾವು ಹಲವು ತರಕಾರಿ, ಹಣ್ಣುಗಳನ್ನು ಬೆಳೆಸುತ್ತೇವೆ. ಅದು ಬಳಸಿದ ತರಕಾರಿಯ, ಹಣ್ಣಿನ ಬೀಜವಾಗಿರುತ್ತದೆ. ಆದರೆ ತೆಂಗಿನಕಾಯಿ ಯಾವ ಎಂಜಿಲು ಮಾಡಿದ ಬೀಜದಿಂದಲೂ ಬಳಸಿದ ಬೀಜವಾಗಿರುವುದಿಲ್ಲ. ಹಾಗಾಗಿ ತೆಂಗಿನಕಾಯಿ ದೇವರಿಗೆ ಶ್ರೇಷ್ಠ. ಮತ್ತು ಆ ತೆಂಗಿನಕಾಯಿಯನ್ನು ಪುರುಷರೇ ಒಡೆಯಬೇಕು, ವಿನಃ ಮಹಿಳೆಯರಲ್ಲ.

ಸಾಷ್ಟಾಂಗ ನಮಸ್ಕಾರ ಹಾಕುವಂತಿಲ್ಲ. ಹೆಣ್ಣು ಮಕ್ಕಳು ಕುಳಿತು ತಲೆಬಾಗಿ ನಮಸ್ಕರಿಸಬೇಕು. ಪುರುಷರ ರೀತಿ ಸಾಷ್ಟಾಂಗ ನಮಸ್ಕಾರ ಹಾಕುವಂತಿಲ್ಲ. ಇದು ಪದ್ಧತಿಯೂ ಅಲ್ಲ, ಮಹಿಳೆಯರ ದೈಹಿಕ ರಚನೆ ಸಾಷ್ಟಾಂಗ ನಮಸ್ಕಾರ ಹಾಕಲು ಯೋಗ್ಯವಾಗಿರುವುದಿಲ್ಲ. ಏಕೆಂದರೆ, ಮಹಿಳೆಯ ಎದೆ ಭಾಗ, ಹೊಟ್ಟೆಯ ಭಾಗ ನೆಲಕ್ಕೆ ತಾಕಬಾರದು. ಏಕೆಂದರೆ, ಹೆಣ್ಣು ಮಕ್ಕಳು ಮುಂದೆ ಗರ್ಭ ಧರಿಸಿ, ಸುಲಭ ಪ್ರಸವವಾಗಿ, ಆರೋಗ್ಯಕರ ಮಗುವಾಗಬೇಕು. ಹಾಗಾಗಿ ಹೆಣ್ಣು ಮಕ್ಕಳು ಸಾಷ್ಟಾಂಗ ನಮಸ್ಕಾರ ಮಾಡಬಾರದು.

ಗಾಯತ್ರಿ ಮಂತ್ರವನ್ನು ಪಠಿಸಬಾರದು. ಓಂ ಭೂರ್ಭುವಸ್ವಃ ತತ್ಸವಿ ತೂರ್ವರೇಣ್ಯಂ ಎಂಬ ಗಾಯತ್ರಿ ಮಂತ್ರವನ್ನು ಹೆಣ್ಣು ಮಕ್ಕಳು ಪಠಿಸಬಾರದು ಎಂಬ ನಿಯಮವಿದೆ. ಏಕೆಂದರೆ, ಹೆಣ್ಣು ಮಕ್ಕಳು ಋತುಮತಿಯಾಗುತ್ತಾರೆ. ಮತ್ತು ಈ ಮಂತ್ರ ಪಠಣೆಯಿಂದ ಅವರ ಆರೋಗ್ಯ ಏರುಪೇರಾಗುತ್ತದೆ ಅಂತಾ ಹೇಳಲಾಗುತ್ತದೆ. ಇದು ಒಂದು ವೈಜ್ಞಾನಿಕ ಕಾರಣವಾಗಿದೆ.

ಈ 2 ಸಮಯದಲ್ಲಿ ಮನುಷ್ಯ ತಾಳ್ಮೆಯಿಂದ ಇರಬೇಕು..

ಸಾವಿನ ಮನೆಗೆ ಹೋಗುವಾಗ ಬಿಳಿ ಬಟ್ಟೆಯನ್ನೇಕೆ ಧರಿಸಬೇಕು..?

ಲಕ್ಷ್ಮೀಯ ಕೃಪೆ ಬೇಕಾಗಿದ್ದಲ್ಲಿ, ಈ ಕೆಲಸ ಮಾಡಬೇಡಿ..

- Advertisement -

Latest Posts

Don't Miss