Movie News: ಮಾಲ್ಡೀವ್ಸ್ ಪ್ರಧಾನಿ ಮೋದಿಯನ್ನು ಇಸ್ರೇಲ್ ಕೈಗೊಂಬೆ ಎಂದು ಅವಹೇಳನ ಮಾಡಿದ್ದು, ಈ ಕಾರಣಕ್ಕಾಗಿ ಹಲವು ಭಾರತೀಯರು ಮಾಲ್ಡೀವ್ಸ್ ಪ್ರವಾಸ, ರೂಂ ಬುಕಿಂಗ್, ಕ್ಯಾನ್ಸಲ್ ಮಾಡಿದ್ದಾರೆ. ಅದೇ ರೀತಿ ಇನ್ನು ಮುಂದೆ ಮಾಲ್ಡೀವ್ಸ್ನಲ್ಲಿ ಸಿನಿಮಾ ಶೂಟಿಂಗ್ ಕೂಡ ನಡೆಯುವುದು ಡೌಟ್ ಎನ್ನಲಾಗಿದೆ.
ಬಾಲಿವುಡ್ ನ ಹಲವರು ಮಾಲ್ಡೀವ್ಸ್ಗೆ ಶೂಟಿಂಗ್ ಮತ್ತು ಎಂಜಾಯ್ ಮಾಡಲು ಆಗಾಗ ಹೋಗುತ್ತಿದ್ದರು. ಆದರೆ ಈಗ ಬಾಲಿವುಡ್ ಮಂದಿ ಕೂಡ ಬಾಯ್ಕಾಟ್ ಮಾಲ್ಡೀವ್ಸ್ ಎಂಬ ಅಭಿಯಾನಕ್ಕೆ ಸಾಥ್ ಕೊಟ್ಟಿದ್ದು, ತಾವು ಕೂಡ ಶೂಟಿಂಗ್ಗೆ ಮಾಲ್ಡೀವ್ಸ್ಗೆ ಹೋಗುವುದಿಲ್ಲ ಎನ್ನುತ್ತಿದೆ. ಈ ಮೂಲಕ ಪ್ರಧಾನಿ ಮೋದಿಗೆ ಬಾಲಿವುಡ್ ಸಾಥ್ ನೀಡಿದೆ.
ನಿರ್ಮಾಣ ಸಂಸ್ಥೆಗಳಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಮಾಲ್ಡೀವ್ಸ್ನಲ್ಲಿ ಯಾವುದೇ ಶೂಟಿಂಗ್ ಮಾಡಬಾರದು ಎಂದು ವಿನಂತಿಸಿದೆ. ಅಲ್ಲದೇ ನಾವೆಲ್ಲರೂ ನಮ್ಮ ದೇಶಕ್ಕಾಗಿ ಮತ್ತು ಪ್ರಧಾನಿಗಳಿಗಾಗಿ, ಈ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿನಂತಿಸಿದೆ. ಅಲ್ಲದೇ, ಮಾಲ್ಡೀವ್ಸ್ ಬದಲು, ಲಕ್ಷದ್ವೀಪವನ್ನು ಶೂಟಿಂಗ್ಗಾಗಿ ಬಳಸಿಕೊಳ್ಳಲು ಹೇಳಿದೆ.
ಈಗಾಗಲೇ ಮಾಲ್ಡೀವ್ಸ್ಗೆ ಹೋಗುವುದನ್ನು ಹಲವರು ಕ್ಯಾನ್ಸಲ್ ಮಾಡಿದ್ದು, ಮಾಲ್ಡೀವ್ಸ್ ಪ್ರವಾಸೋದ್ಯಮ ದಿನಕ್ಕೆ ಕೋಟಿ ಕೋಟಿ ನಷ್ಟ ಅನುಭವಿಸುತ್ತಿದೆ. ಹಾಗಾಗಿ ತನ್ನ ಮಿತ್ರ ರಾಷ್ಟ್ರವಾದ ಚೀನಾದ ಬಳಿ, ಹೆಚ್ಚು ಹೆಚ್ಚು ಪ್ರವಾಸಿಗರನ್ನು ಕಳಿಸುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮನವಿ ಮಾಡುತ್ತಿದ್ದಾರೆ.
ಲಕ್ಷದ್ವೀಪದ ಅಭಿವೃದ್ಧಿಗೆ ಭಾರತಕ್ಕೆ ನಾವು ಸಾಥ್ ಕೊಡುತ್ತೇವೆ ಎಂದ ಇಸ್ರೇಲ್