Saturday, March 15, 2025

Latest Posts

ದೇವಸ್ಥಾನಕ್ಕೆ ಮಾಂಸಾಹಾರ ಸೇವಿಸಿ ಹೋಗಬಾರದು ಅಂತಾ ಹೇಳುವುದು ಯಾಕೆ..?

- Advertisement -

Spiritual Story: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅವುಗಳಲ್ಲಿ ದೇವಸ್ಥಾನಕ್ಕೆ ಮಾಂಸಾಹಾರ ಸೇವನೆ ಮಾಡಿ ಹೋಗಬಾರದು ಅನ್ನೋದು ಕೂಡ ಒಂದು. ಹಾಗಾದ್ರೆ ಯಾಕೆ ನಾವು ದೇವಸ್ಥಾನಕ್ಕೆ ಹೋಗುವಾಗ ಸ್ನಾನಾದಿಗಳನ್ನು ಮಾಡಿ, ಮಾಂಸಾಹಾರ ಸೇವಿಸದೇ ಹೋಗಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವವರು ಹಲವು ನಿಯಮಗಳನ್ನು ಅನುಸರಿಸುತ್ತಾರೆ. ತಲೆಸ್ನಾನ ಮಾಡಿ, ಏನನ್ನೂ ಸೇವಿಸದೇ ದೇವಸ್ಥಾನಕ್ಕೆ ಹೋಗುತ್ತಾರೆ. ಇನ್ನು ಕೆಲವರು ಬರೀಗಾಲಿನಲ್ಲೇ ದೇವಸ್ಥಾನಕ್ಕೆ ಹೋಗುತ್ತಾರೆ. ಇನ್ನು ಕೆಲವರು ಸಾತ್ವಿಕ ಆಹಾರ ಅಂದ್ರೆ, ಸಸ್ಯಾಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗುತ್ತಾರೆ. ಏಕೆಂದರೆ, ಮಾಂಸಾಹಾರ ಸೇವಿಸಿ, ದೇವಸ್ಥಾನಕ್ಕೆ ಹೋಗಬಾರದು ಅನ್ನೋ ನಿಯಮವಿದೆ.

ಏಕೆ ಮಾಂಸಾಹಾರವನ್ನು ಸೇವಿಸಬಾರದು ಅಂದ್ರೆ, ಮಾಂಸಾಹಾರ ತಾಮಸ ಆಹಾರ. ಅಂದ್ರೆ ಮಾಂಸಾಹಾರ ಸೇವನೆ ಮಾಡಿದಾಗ, ನಿಮ್ಮಲ್ಲಿ ಭಕ್ತಿ ಬರುವುದಿಲ್ಲ. ಆಲಸ್ಯ ಬರುತ್ತದೆ. ಹಾಗಾಗಿ ನೀವು ದೇವಸ್ಥಾನಕ್ಕೆ ಹೋದಾಗ, ಅಲ್ಲಿ ನಿಮಗೆ ಸಾತ್ವಿಕ ಯೋಚನೆ ಮಾಡಲಾಗುವುದಿಲ್ಲ. ದೇವವಸ್ಥಾನದಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಅದನ್ನು ಅನುಭವಿಸಲು ಆಗುವುದಿಲ್ಲ.

ಇನ್ನು ನೀವು ಸಸ್ಯಾಹಾರವನ್ನೇ ಸೇವಿಸಿದರೂ, ಅದರಲ್ಲಿ ಪಪ್ಪಾಯಿ, ಕುಂಬಳಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಮೊಸರು, ಮಸಾಲೆ ಪದಾರ್ಥವನ್ನು ಸೇವಿಸಿ ದೇವಸ್ಥಾನಕ್ಕೆ ಹೋಗುವಂತಿಲ್ಲ. ಇವು ಕೂಡ ಆಲಸ್ಯವನ್ನು ತರಿಸುವ ಆಹಾರವಾಗಿದೆ. ಅಲ್ಲದೇ, ಇಂಥ ಆಹಾರ ಸೇವನೆಯಿಂದ ಮನಸ್ಸಿನಲ್ಲಿ ಸಾತ್ವಿಕ ಭಾವನೆ ಬರಲು ಸಾಧ್ಯವಾಗುವುದಿಲ್ಲ.

ಮನೆಯಲ್ಲಿ ಈ ಗಿಡಗಳನ್ನು ಎಂದಿಗೂ ನೆಡಬೇಡಿ..

ಮನೆ ಉದ್ಧಾರವಾಗಬೇಕು ಅಂದ್ರೆ, ಮನೆಯಲ್ಲಿ ಈ ವಸ್ತುಗಳನ್ನು ಇರಿಸಬೇಡಿ..

ನೀವು ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಅನ್ನಪೂರ್ಣೆಯ ಅವಕೃಪೆಗೆ ಪಾತ್ರರಾಗುತ್ತೀರಿ

- Advertisement -

Latest Posts

Don't Miss