Recipe: ಹಲವರು ಹೊಟೇಲ್‌ಗೆ ಹೋದಾಗ ಹೆಚ್ಚಾಗಿ ಆರ್ಡರ್ ಮಾಡುವ ರೆಸಿಪಿ ಅಂದ್ರೆ ಪನೀರ್ ಟಿಕ್ಕಾ. ದರೆ ಕೆಲವು ಹೊಟೇಲ್‌ನಲ್ಲಿ ಪನೀರ್ ಟಿಕ್ಕಾ ಸರಿಯಾಗಿ ಪ್ರಿಪೇರ್ ಮಾಡಿ ಕೊಡುವುದಿಲ್ಲ. ಅರ್ದಂಭರ್ದ ಬೆಂದಿರುತ್ತದೆ. ಹಾಗಾಗಿ ನೀವು ಮನೆಯಲ್ಲೇ ಹೇಗೆ ಪನೀರ್ ಟಿಕ್ಕಾ ತಯಾರಿಸಬಹುದು ಅಂತಾ ತಿಳಿಯೋಣ ಬನ್ನಿ..
ಒಂದು ಮಿಕ್ಸಿಂಗ್ ಬೌಲ್‌ಗೆ ಒಂದು ಕಪ್ ಮೊಸರು, ಒಂದು ಸ್ಪೂನ್ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಚಾಟ್ ಮಸಾಲೆ, ಜೀರಿಗೆ ಪುಡಿ, ಕಸೂರಿ ಮೇಥಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಡಲೆ ಹಿಟ್ಟು, ನಿಂಬೆರಸ, ಉಪ್ಪು ಇವಿಷ್ಟನ್ನು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಪನೀರ್ ಕ್ಯೂಬ್ಸ್, ದೊಡ್ಡದಾಗಿ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೋ ಹಾಕಿ. ಬಳಿಕ ಒಂದು ಸ್ಪೂನ್ ಎಣ್ಣೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.
ಅರ್ಧಗಂಟೆ ಬಳಿಕ ಈ ಮಿಶ್ರಣವನ್ನು ಟಿಕ್ಕಾ ಕಡ್ಡಿಗೆ ಹಾಕಿ, ತವ್ವಾ ಫ್ರೈ ಮಾಡಿದ್ರೆ, ಪನೀರ್ ಟಿಕ್ಕಾ ರೆಡಿ. ಇದನ್ನು ಪುದೀನಾ ಚಟ್ನಿಯೊಂದಿಗೆ ಸವಿಯಿರಿ.