Health Tips: ಕಣ್ಣು ದಾನ ಮಾಡುವುದು ಒಂದು ಪುಣ್ಯ ಕಾರ್ಯ ಅಂತತಾ ಎಲ್ಲರಿಗೂ ಗೊತ್ತು. ಆದರೆ ಹಲವರು ಕಣ್ಣು ದಾನ ಮಾಡುವುದಿಲ್ಲ. ಕೆಲವರಿಗೆ ಕಣ್ಣು ದಾನ ಮಾಡುವ ಆಸೆ ಇರುತ್ತದೆ. ಆದರೆ ನೋಂದಣಿ ಮಾಡಿಸಿಕೊಳ್ಳದೇ, ಈ ಬಗ್ಗೆ ಯಾರಲ್ಲಿಯೂ ಹೇಳದೇ ಸಮಯ ವ್ಯರ್ಥ ಮಾಡುತ್ತಾರೆ. ಆದು ಆಸೆಯಾಗಿಯೇ ಉಳಿಯುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ, ಅಂದ್ರೆ ನಟ ಪುನೀತ್ ರಾಜ್‌ಕುಮಾರ್ ನಿಧನವಾದ ಬಳಿಕ, ಅಪ್ಪು ತಂದೆಯಂತೆ, ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇವರಿಂದ ಸ್ಪೂರ್ತಿ ಪಡೆಯದಿರುವ ಹಲವರು ತಾವೂ ಕಣ್ಣು ದಾನ ಮಾಡುತ್ತೇವೆ ಎಂದು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ವೈದ್ಯರೇ ಹೇಳಿದ್ದಾರೆ ಕೇಳಿ.
ವೈದ್ಯರು ಹೇಳುವ ಪ್ರಕಾರ, ಅಪ್ಪು ನಿಧನಕ್ಕೂ ಮುನ್ನ ವರ್ಷಕ್ಕೆ ಬರೀ 600ರಿಂದ 700 ಕಣ್ಣು ದಾನಕ್ಕಾಗಿ ನೋಂದಣಿಯಾಗುತ್ತಿದ್ದರು. ಆದರೆ ಅಪ್ಪು ಸಾವಿನ ಬಳಿಕ, ಅವರು ಕಣ್ಣು ದಾನ ಮಾಡಿದ್ದನ್ನು ಕಂಡು, ಅವರ ಅಭಿಮಾನಿಗಳು ಸೇರಿದಂತೆ ಹಲವರು ಕಣ್ಣು ದಾನ ಮಾಡುವ ಮನಸ್ಸು ಮಾಡಿದ್ದು, ಈಗ ತಿಂಗಳಿಗೆ 2ರಿಂದ 3 ಸಾವಿರ ಕಣ್ಣುಗಳು ದಾನ ಕೊಡುತ್ತಿದ್ದಾರೆ.
ಅಷ್ಟೇ ಅಲ್ಲದೇ, ಮೊದಲೆಲ್ಲ ವರ್ಷಕ್ಕೆ 2ರಿಂದ 3ಸಾವಿರ ಜನ ಕಣ್ಣು ದಾನಕ್ಕಾಗಿ ನೋಂದಣಿ ಮಾಡುತ್ತಿದ್ದರು. ಆದರೆ ಪುನೀತ್ ಸಾವಿನ ಬಳಿಕ, ಒಂದೇ ವರ್ಷದಲ್ಲಿ 1 ಲಕ್ಷಕ್ಕೂ ಅಧಿಕ ಜನ ಕಣ್ಣು ದಾನಕ್ಕಾಗಿ ನೋಂದಣಿ ಮಾಡಿಸಿದ್ದಾರೆ. ಹಾಗಾಗಿ ಪ್ರಭಾವಿ ವ್ಯಕ್ತಿ ಕಣ್ಣು ದಾನ ಮಾಡಿದರೆ, ಅದರಿಂದ ಜನಸಾಮಾನ್ಯರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.
ಆದರೂ ಕೂಡ ಡಿಮ್ಯಾಂಡ್‌ಗೆ ತಕ್ಕಂತೆ ಕಣ್ಣು ಸಿಗುತ್ತಿಲ್ಲ. ಕಣ್ಣು ದಾನ ಅನ್ನೋದು ಇನ್ನೂ ಉನ್ನತ ಮಟ್ಟಕ್ಕೆ ಹೋಗಬೇಕು. ಒಬ್ಬರು ದಾನ ಮಾಡುವ ಕಣ್ಣು ನಾಲ್ಕು ಜನರ ಬಾಳಿಗೆ ಬೆಳಕಾಗುತ್ತದೆ ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..