Health Tips: ಬೇದಿ ಶುರುವಾಗುವುದು ಎಂದಾಗ, ಹಲವರು ಅದನ್ನು ಕಾಮನ್ ಎಂದು ತಿಳಿದುಕೊಳ್ಳುತ್ತಾರೆ. ಮತ್ತು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ನೀವು ಬೇಧಿಯನ್ನು ನಿರ್ಲಕ್ಷಿಸಿ ಬಿಟ್ಟರೆ, ಅದು ನಿಮ್ಮ ಜೀವಕ್ಕೇ ಅಪಾಯ ತಂದೊಡ್ಡುತ್ತದೆ. ಹಾಗಾಗಿ ನಾವಿಂದು ಬೇಧಿ ಶುರುವಾದಾಗ, ಮನೆಯಲ್ಲೇ ಹೇಗೆ ಮದ್ದು ಮಾಡಿಕೊಳ್ಳಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ವೈದ್ಯರಾದ ಡಾ.ಕಿಶೋರ್ ಅವರು ಬೇದಿ ಕಂಟ್ರೋಲ್ ಮಾಡಲು ಮನೆಮದ್ದನ್ನು ಹೇಳಿದ್ದಾರೆ. ಬೇಧಿ ಶುರುವಾದಾಗ ಮಾಡಬೇಕಾದ ಮೊದಲ ಕೆಲಸ ಅಂದ್ರೆ, ಹೊಟ್ಟೆ ತುಂಬ ಎಳನೀರು ಕುಡಿಯಬೇಕು. ಏಕೆಂದರೆ, ಬೇಧಿ ಶುರುವಾದಾಗ, ದೇಹದಲ್ಲಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತ ಬರುತ್ತದೆ. ಆಗಲೇ ಪ್ರಾಣಾಪಾಯ ಸಂಭವಿಸುವುದು. ಹಾಗಾಗಿ ದೇಹದಲ್ಲಿ ನೀರಿನ ಅಂಶ ಹಾಗೇ ಇರಬೇಕು ಅಂದ್ರೆ, ಎಳನೀರಿನ ಸೇವನೆ ಮಾಡುತ್ತಲೇ ಇರಬೇಕು.
ಮಜ್ಜಿಗೆ ಸೇವನೆ ಕೂಡ ಉತ್ತಮ. ಎರಡು ಸ್ಪೂನ್ ಮೊಸರಿಗೆ ಅರ್ಧ ಚಮಚ ಮೆಂತ್ಯೆ ಕಾಳು ಸೇರಿಸಿ, ನುಂಗಬೇಕು. ಇದರಿಂದ ಬೇಧಿ ನಿವಾರಣೆಯಾಗುತ್ತದೆ. ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಇಟ್ಟುಕೊಳ್ಳಬೇಕು. ಇವುಗಳನ್ನು ಪುಡಿ ಮಾಡಿ, ನೀರಿನಲ್ಲಿ ಹಾಕಿ ಕುದಿಸಿ, ಪೂರ್ತಿ ತಣ್ಣಗಾದ ಬಳಿಕ, ಈ ಕಶಾಯವನ್ನು ಸೇವಿಸಿದರೆ, ಬೇಧಿ ಕಡಿಮೆಯಾಗುತ್ತದೆ.
ಇನ್ನು ಮುಖ್ಯವಾದ ವಿಷಯ ಅಂದ್ರೆ, ಬೀದಿ ಸಿಗುವ ತಿಂಡಿ, ಕರಿದ ತಿಂಡಿ, ಹೊಟೇಲ್ ತಿಂಡಿ ಇವುಗಳನ್ನು ಹೆಚ್ಚಾಗಿ ತಿನ್ನುವುದರಿಂದ, ಫುಡ್ ಪಾಯ್ಸನ್ ಆಗಿ, ಬೇಧಿ ಶುರುವಾಗುತ್ತದೆ. ಹಾಗಾಗಿ ಮನೆಯಲ್ಲೇ ತಯಾರಿಸಿದ ತಿಂಡಿ, ಮನೆಯಲ್ಲೇ ಕುದಿಸಿ, ತಣಿಸಿದ ನೀರಿನ ಸೇವನೆ ಮಾಡಿದರೆ, ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..