Health Tips: ಢೆಂಗ್ಯೂ ಜ್ವರ ಹೇಗೆ ಬರುತ್ತದೆ. ಈ ಜ್ವರ ಬರಬಾರದು ಅಂದ್ರೆ ಏನು ಮಾಡಬೇಕು ಅಂತಾ ನಾವು ಅದಾಗಲೇ ನಿಮಗೆ ತಿಳಿಸಿದ್ದೇವೆ. ಅದೇ ರೀತಿ ಇಂದು ಡಾ.ಸುರೇಂದ್ರ ಅವರು ಡೆಂಗ್ಯೂ ಜ್ವರ ಬರಬಾರದು ಅಂದ್ರೆ ಏನು ಮಾಡಬೇಕು..? ಮಕ್ಕಳ ಬಗ್ಗೆ ಹೇಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ಮಳೆ ಬಂದಾಗ, ನೀರು ನಿಲ್ಲುತ್ತದೆ. ಅಂಥ ಜಾಗದಲ್ಲಿ ಡೆಂಗ್ಯೂ ಸೊಳ್ಳೆ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಮನೆಯ ಬದಿ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರ ವಹಿಸಿ. ಮಕ್ಕಳು ಶಾಲೆಗೆ ಹೋದರೆ, ಅವರು ಯಾವ ಶಾಲೆಗೆ ಹೋಗುತ್ತಾರೋ, ಅಲ್ಲಿಯೂ ಸ್ವಚ್ಛತೆ ಕಾಪಾಡಿಕೊಂಡಿದ್ದಾರೋ, ಇಲ್ಲವೋ ಅನ್ನೋದನ್ನು ಗಮನಕ್ಕೆ ತನ್ನಿ. ಏಕೆಂದರೆ, ಡೆಂಗ್ಯೂ ಸೊಳ್ಳೆ ದಿನದಲ್ಲೇ ಕಚ್ಚುತ್ತದೆ. ಹಾಗಾಗಿ ಮನೆಯ ಬಳಿ, ಶಾಲೆಯ ಬಳಿ ನೀರು ನಿಲ್ಲದಂತೆ ಎಚ್ಚರವಹಿಸುವುದು ಮುಖ್ಯ.
ಇನ್ನು ಮಕ್ಕಳಿಗೆ ಜ್ವರ, ನೆಗಡಿ , ಕೆಮ್ಮು ಬಂದಾಗ ನಿರ್ಲಕ್ಷ್ಯ ಮಾಡದೇ, ಸರಿಯಾದ ಮದ್ದು ಮಾಡುವುದು ಅತ್ಯಗತ್ಯವಾಗಿರುತ್ತದೆ. ಏಕೆಂದರೆ, ಡಂಗ್ಯೂ ಜ್ವರವನ್ನು ಹಾಗೇ ಬಿಟ್ಟರೆ, ಅವು ಜೀವಕ್ಕೇ ಅಪಾಯ ತಂದೊಡ್ಡುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ವೀಡಿಯೋ ನೋಡಿ..