Spiritual News:ಶ್ರೀಲಂಕೆಯ ರಾಣಿ,, ಲಂಕಾಪತಿ ರಾವಣನ ಪತ್ನಿ ಮಂಡೋದರಿ ಕೂಡ ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಬ್ಬಳು. ಈಕೆಯ ಹೆಸರಿಗೂ ಈಕಗೆಯ ಜನ್ಮಕ್ಕೂ ಒಂದು ಸಂಬಂಧವಿದೆ. ಆ ಕುತೂಹಲಕಾರಿ ಕಥೆಯ ಬಗ್ಗೆ ತಿಳಿಯೋಣ ಬನ್ನಿ..
ರಾಮಾಯಣದ ಉತ್ತರಕಾಂಡದ ಅನುಸಾರ ಮಂಡೋದರಿ, ಅಸುರರ ರಾಜ ಮಾಯಾಸುರ ಮತ್ತು ದೇವಲೋಕದ ಅಪ್ಸರೆ ಹೇಮಾಳ ಮಗಳಾಗಿದ್ದಳು. ಆದರೆ ಈಕೆ ಇವರ ಗರ್ಭದಲ್ಲಿ ಜನಸಿದವಳಾಗಿರಲಿಲ್ಲ. ಬದಲಾಗಿ ಈಕೆ ಕಪ್ಪೆಯ ಹೊಟ್ಟೆಯಲ್ಲಿ ಕಪ್ಪೆಯಾಗಿ ಜನಿಸಿದ್ದಳು. ಒಮ್ಮೆ ಈಕೆ ಆಶ್ರಮದಲ್ಲಿದ್ದಾಗ, ಮಂದಾರ ಮತ್ತು ಉದರ ಹೆಸರಿನ ಋಷಿಗಳು ನೈವೇದ್ಯಕ್ಕೆ ಇಟ್ಟಿದ್ದ ಹಾಲನ್ನು ಕುಡಿಯಬೇಕು ಎಂದು ಬದಿಗೆ ಇರಿಸಿದ್ದರು.
ಅದೇ ವೇಳೆ ಈ ಕಪ್ಪೆಯನ್ನು ಹಿಡಿದು ತಿನ್ನಲು ಸರ್ಪವೊಂದು ಬರುತ್ತಿತ್ತು, ಸರ್ಪದಿಂದ ತಪ್ಪಿಸಿಕೊಳ್ಳಲು ಕಪ್ಪೆ, ಹಾಲಿನ ಬಾಣಲೆಯ ಮೇಲೆ ಇಟ್ಟಿರುವ ತಟ್ಟೆಯ ಮೇಲೆ ಹಾರಿಬಿಟ್ಟಿತು. ಅದನ್ನು ಹಿಡಿಯಲು ಸರ್ಪವೂ ಆ ಬಾಣಲೆಯ ಮೇಲೆ ಹಾರಿದ್ದು, ತಟ್ಟೆ ಕೆಳಗೆ ಬಿದ್ದು, ಸರ್ಪ ಹಾಲಿಗೆ ಬಿತ್ತು. ಆಗ ಕಪ್ಪೆಗೆ, ಎಂಥ ಅಚಾತುರ್ಯ ನಡೆದುಹೋಯಿತು. ಈ ಹಾಲನ್ನು ಋಷಿ ಮುನಿಗಳು ಕುಡಿದರೆ, ಅವರ ಸಾವಾಗುತ್ತದೆ.
ನಾನು ಅವರು ಬರುವ ತನಕ ಕಾದು, ಅವರು ಬಂದ ಮೇಲೆ ಹಾಲಿಗೆ ಬೀಳುತ್ತೇನೆ. ಆಗ ಅವರು ಈ ಹಾಲು ಕುಡಿಯುವುದಿಲ್ಲವೆಂದು ಯೋಚಿಸುತ್ತದೆ. ಅದೇ ರೀತಿ ಮಾಡುತ್ತದೆ. ಆಗ ಋಷಿಗಳು ಆ ಹಾಲನನನ್ನು ಕುಡಿಯದಿರಲು ನಿರ್ಧಾರಮ ಮಾಡಿದ್ದು, ಹಾಲಿನ ಪಾತ್ರೆಯನ್ನು ಖಾಲಿ ಮಾಡುತ್ತಾರೆ. ಆಗ ಅವರಿಗೆ ಅದರಲ್ಲಿ ಸರ್ಪ ಬಿದ್ದಿರುವುದು ಗೊತ್ತಾಗುತ್ತದೆ. ಅಲ್ಲದೇ ಕಪ್ಪೆಯ ಸಹಾಯವೂ ಅರ್ಥವಾಗುತ್ತದೆ. ಆಕೆ ಕನ್ಯೆಯಾಗುವಂತೆ ಅವರು ವರ ನೀಡುತ್ತಾರೆ.
ಈಕೆ ಆಶ್ರಮ ಬಿಟ್ಟು ಹೋಗುವಾಗ, ಮಾಯಾಸುರ ಮತ್ತು ಹೇಮಾ ಮಗುವಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಆಗಲೇ ಇವರಿಗೆ ಮಂಡೂಕವಾಗಿ ಹುಟ್ಟಿ, ಮಂದಾರ ಮತ್ತು ಉದರ ಋಷಿಗಳಿಂದ ವರ ಪಡೆದ ಮಂಡೋದರಿ ಸಿಗುತ್ತಾಳೆ. ಬಳಿಕ ರಾವಣನೊಂದಿಗೆ ಈಕೆಯ ವಿವಾಹವಾಗುತ್ತದೆ. ಮಂಡೋದರಿ ರಾಕ್ಷಸನ ಪತ್ನಿಯಾಗಿದ್ದರೂ, ಈಕೆ ಸದ್ಗುಣ ಸಂಪನ್ನೆಯಾಗಿದ್ದಳು.
ಜೀವನದಲ್ಲಿ ಇವುಗಳನ್ನು ಮಾತ್ರ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು