Thursday, November 27, 2025

Latest Posts

ಲಕ್ಷ್ಮಣ ಜಲಸಮಾಧಿ ತೆಗೆದುಕೊಳ್ಳಲು ಕಾರಣವೇನು ಗೊತ್ತೇ..?

- Advertisement -

Spiritual News: ರಾಯಾಣದಲ್ಲಿ ಬರುವ ಮುಖ್ಯವಾದ ಪಾತ್ರದಲ್ಲಿ ಲಕ್ಷ್ಮಣ ಕೂಡ ಒಬ್ಬ. ರಾಮನನ್ನು ನೆನೆಯುವಾಗ ಲಕ್ಷ್ಮಣನನ್ನು ಭಕ್ತರು ಖಂಡಿತವಾಗಿಯೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಅಣ್ಣನ ಮೇಲಿನ ಪ್ರೀತಿಗಾಗಿ ಲಕ್ಷ್ಮಣ ಜಲಸಮಾಧಿಯಾಗಬೇಕಾಯಿತು. ಈ ಕಥೆಯನ್ನು ತಿಳಿಯೋಣ ಬನ್ನಿ..

ಒಮ್ಮೆ ಶ್ರೀರಾಮನ ಅರಮನೆಗೆ ಓರ್ವ ಸಾಧು ಬರುತ್ತಾರೆ. ಅವರು ಶ್ರೀರಾಮನೊಂದಿಗೆ ಗೌಪ್ಯವಾಗಿ ಮಾತನಾಡಬೇಕು. ಮತ್ತು ನಮ್ಮಿಬ್ಬರ ಮಾತನ್ನು ಯಾರೂ ಕೇಳಿಸಿಕೊಳ್ಳಬಾರದು ಎನ್ನುತ್ತಾರೆ. ಆಯಿತೆಂದು ಶ್ರೀರಾಮ ಸಾಧುವನ್ನು ಕರೆದುಕೊಂಡು ಒಂದು ಕೋಣೆಯೊಳಗೆ ಹೋಗುತ್ತಾನೆ. ಮತ್ತು ಲಕ್ಷ್ಮಣನನ್ನು ಕರೆದು, ನೀನು ಈ ಕೋಣೆಯ ಬಾಗಿಲನ್ನು ಕಾಯಬೇಕು. ಒಳಗೆ ಯಾರನ್ನೂ ಬರಲು ಬಿಡಬಾರದು ಎಂದು ಆಜ್ಞೆ ನೀಡುತ್ತಾನೆ.

ಇನ್ನು ಸಾಧುವಿನ ರೂಪದಲ್ಲಿ ಬಂದಿದ್ದು ಮತ್ಯಾರೂ ಅಲ್ಲ, ಯಮದೇವ. ಶ್ರೀರಾಮನ ಭೂವಾಸ ಮುಗಿಯಿತು, ಇನ್ನು ಜಲಸಮಾಧಿ ತೆಗೆದುಕೊಳ್ಳಬೇಕು ಎಂದು ಹೇಳಲು, ಯಮರಾಜ ರಾಮನ ಅರಮನೆಗೆ ಬಂದಿದ್ದ. ಅತ್ತ ಅಣ್ಣನ ಕೋಣೆಯನ್ನು ಕಾಯುತ್ತ ನಿಂತಾಗ, ದೂರ್ವಾಸ ಮುನಿ ರಾಮನನ್ನು ಭೇಟಿಯಾಗಬೇಕೆಂದು ಬಯಸುತ್ತಾರೆ. ಆದರೆ ಅಣ್ಣನನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಕೋಪಗೊಂಡ ದೂರ್ವಾಸ ಮುನಿಗಳು, ನೀನೇನಾದರೂ ಶ್ರೀರಾಮನನ್ನು ಕಾಣಲು ಬಿಡದಿದ್ದಲ್ಲಿ, ನಾನು ಶ್ರೀರಾಮನಿಗೆ ಶಾಪ ನೀಡುವೆನೆಂದು ಹೇಳುತ್ತಾರೆ.

ದೂರ್ವಾಸರ ಶಾಪಕ್ಕೆ ದೇವಾನುದೇವತೆಗಳೇ ಹೆದರುತ್ತಿದ್ದರು. ಎಲ್ಲಿ ತನ್ನ ಅಣ್ಣನ ಜೀವಕ್ಕೆ ತೊಂದರೆಯಾಗುತ್ತದೆಯೋ ಎಂದು, ಲಕ್ಷ್ಮಣ ಅಣ್ಣನ ಮಾತು ಮೀರಿ, ಕೋಣೆಯ ಬಾಗಿಲು ತೆಗೆಯುತ್ತಾನೆ. ಆಗ ಸಾಧು ರೂಪದಲ್ಲಿರುವ ಯಮ, ಲಕ್ಷ್ಮಣನಿಗೆ ಈ ದೇಶ ಬಿಟ್ಟು ಹೋಗುವಂತೆ ಆದೇಶಿಸುತ್ತಾನೆ. ಬಳಿಕ ಲಕ್ಷ್ಮಣ ಸರಯೂ ನದಿಯಲ್ಲಿ ಜಲಸಮಾಧಿಯಾಗುತ್ತಾನೆ. ಬಳಿಕ ಶೇಷನಾಗನಾಗಿ ಜನ್ಮ ಪಡೆಯುತ್ತಾನೆ.

ಶನಿವಾರ ಉಗುರು ಕತ್ತರಿಸಬಾರದು ಅಂತಾ ಹೇಳುವುದೇಕೆ ಗೊತ್ತೇ..?

ಇವುಗಳು ಕನಸಿನಲ್ಲಿ ಬಂದರೆ ಆರ್ಥಿಕ ಲಾಭವಾಗುತ್ತದೆ ಎಂದರ್ಥ

ಜೀವನದಲ್ಲಿ ಇವುಗಳನ್ನು ಮಾತ್ರ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು

- Advertisement -

Latest Posts

Don't Miss