Health tips: ಎಲ್ಲ ಹೆಣ್ಣು ಮಕ್ಕಳಿಗೆ ಮುಟ್ಟಿನ ನೋವು ಒಂದೇ ರೀತಿ ಇರುವುದಿಲ್ಲವೋ, ಅದೇ ರೀತಿ ಅವರು ಮುಟ್ಟಾಗುವ ವಯಸ್ಸು ಕೂಡ ಬೇರೆ ಬೇರೆ ಇರುತ್ತದೆ. ಅದರಲ್ಲೂ ಇಂದಿನ ಕಾಲದ ಮಕ್ಕಳು ಬೇಗ ಮುಟ್ಟಾಗುತ್ತಿದ್ದಾರೆ. ಹೈಸ್ಕೂಲ್ ದಾಟಿದ ಮೇಲೆ ಋತುಮತಿಯಾಗಬೇಕಿದ್ದ ಹೆಣ್ಣು ಮಕ್ಕಳು, 5ನೇ ಕ್ಲಾಸಿಗೆ ಮೈನೆರೆಯುತ್ತಿದ್ದಾರೆ. ಹಾಗಾದ್ರೆ ಹೆಣ್ಣು ಮಕ್ಕಳು ಬೇಗ ಮುಟ್ಟಾಗಲು ಕಾರಣವೇನು..? ಹೀಗಾದ್ರೆ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಮೊದಲೆಲ್ಲಾ ಹೈಸ್ಕೂಲು ಮೆಟ್ಟಿಲೇರಿದ ಬಳಿಕ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳು 12ನೇ ವಯಸ್ಸಿಗೇ ಮುಟ್ಟಾಗುತ್ತಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿದೆ ಅಂತಾರೆ ವೈದ್ಯರು. ತಾಯಿ ಬೇಗ ಋತುಮತಿಯಾಗಿದ್ದರೆ, ಮಕ್ಕಳೂ ಅದೇ ರೀತಿ ಚಿಕ್ಕ ವಯಸ್ಸಿಗೆ ಋತುಮತಿಯಾಗುತ್ತಾರೆ. ಇದು ಅನುವಂಶಿಕ ಲಕ್ಷಣ.
ಎರಡನೇಯ ಕಾರಣ ಅಂದ್ರೆ, ಮಕ್ಕಳಿಗೆ ಹೆಚ್ಚು ಜಂಕ್ ಫುಡ್ ಕೊಡುವುದರಿಂದ, ಕರಿದ ತಿಂಡಿ, ಬೀದಿ ಬದಿ ತಿಂಡಿ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಿ, ಇದರಿಂದಲೂ ಬೇಗ ಹೆಣ್ಣು ಮಕ್ಕಳು ಮುಟ್ಟಾಗುತ್ತಾರೆ. ಇಷ್ಟೇ ಅಲ್ಲದೇ, ಪ್ರತಿದಿನ ರಾಸಾಯನಿಕಭರಿತವಾದ ಶ್ಯಾಂಪೂ, ಕಂಡಿಶ್ನರ್, ಮೇಕಪ್, ರೂಮ್ ಫ್ರೆಶ್ನರ್ ಸೇರಿ ಹಲವು ದಿನಬಳಕೆಯ ವಸ್ತುಗಳನ್ನು ಬಳಸುತ್ತೇವೆ. ಇದು ಹೆಣ್ಣು ಮಕ್ಕಳು ಬೇಗ ಫ್ರೌಡರಾಗಲು ಕಾರಣವಾಗುತ್ತದೆ.
ಇಷ್ಟೇ ಅಲ್ಲದೇ, ಇಂದಿನ ಹೆಣ್ಣು ಮಕ್ಕಳು ಬರೀ ಓದು ಓದು ಎಂದಿರುವ ಕಾರಣ, ಅವರಿಗೆ ತಾಯಂದಿರೂ ಕೂಡ ಮನೆಗೆಲಸ ಹೇಳುವುದಿಲ್ಲ. ಯೋಗ, ವ್ಯಾಯಾಮ ಮಾಡುವವರ ಸಂಖ್ಯೆಯೂ ಕಡಿಮೆ. ಹಾಗಾಗಿ ದೈಹಿಕ ಚಟುವಟಿಕೆ ಕಡಿಮೆಯಾಗಿರುವ ಕಾರಣ, ಹೆಣ್ಣು ಮಕ್ಕಳು ಬೇಗ ಮುಟ್ಟಾಗುತ್ತಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..