Health Tips: ಇತ್ತೀಚಿನ ದಿನಗಳಲ್ಲಿ ನಾವು ಮಕ್ಕಳ ಆರೋಗ್ಯದ ಬಗ್ಗೆ ಎಷ್ಟೇ ಗಮನ ಹರಿಸಿದರೂ, ಕಡಿಮೆಯೇ. ಅದರಲ್ಲೂ ಪುಟ್ಟ ಮಕ್ಕಳಿಗೆ ನಿಮೋನಿಯಾ ಬರದಂತೆ ತಡೆಯುವುದು ಚಾಲೆಂಜಿಂಗ್ ವಿಚಾರವೇ ಸರಿ. ಈ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ.
ನೀವು ನಿಮ್ಮ ಮಕ್ಕಳನ್ನು ಈ ಚಳಿಗಾಲದಲ್ಲಿ, ರೋಗ ರುಜಿನಗಳಿಂದ ಕಾಪಾಡಬೇಕು ಅಂದ್ರೆ, ಮೊದಲನೇಯದಾಗಿ ಮಾಡಬೇಕಾದ ಕೆಲಸ, ಅವರನ್ನು ಬೆಚ್ಚಗಿಡಬೇಕು. ಸ್ವೆಟರ್, ಪ್ಯಾಂಟ್, ಸಾಕ್ಸ್, ಮಫ್ಲರ್ ಇವೆಲ್ಲವನ್ನೂ ಹಾಕಿ, ಮಕ್ಕಳನ್ನು ಬೆಚ್ಚಗೆ ಇಡಬೇಕು.
ಯಾರಿಗಾದರೂ ಇನ್ಫೆಕ್ಷನ್ ಇದ್ದಾಗ, ಅವರ ಬಳಿ ಮಗು ಹೋಗಲು ಬಿಡಬಾರದು. ಆದಷ್ಟು ಅಂಥವರಿಂದ ಮಕ್ಕಳನ್ನು ದೂರವಿರಿಸುವುದೇ ಒಳಿತು. ಇನ್ನು ಎದೆ ಹಾಲು ಕುಡಿಯುವ ಮಕ್ಕಳಿದ್ದರೆ, ಅಂಥವರಿಗೆ ಹೆಚ್ಚು ಎದೆ ಹಾಲು ಕುಡಿಸಬೇಕು. ಏಕೆಂದರೆ, ಎದೆಹಾಲಿನಿಂದ ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. 6 ತಿಂಗಳ ಒಳಗಿನ ಮಕ್ಕಳಿಗೆ ನೀರು ಕೊಡಬಾರದು. 6 ತಿಂಗಳು ತುಂಬಿದ ಮಕ್ಕಳಿದ್ದರೆ, ಅಂಥವರಿಗೆ ಕಾಯಿಸಿ, ತಣಿಸಿದ ನೀರು ಕುಡಿಸಿದರೆ ಉತ್ತಮ.
ಮಕ್ಕಳು ಬಳಸುವ ವಸ್ತುಗಳನ್ನು, ಬಾಟಲಿ, ಸ್ಪೂನ್, ಲೋಟಗಳನ್ನು ಬಿಸಿ ನೀರಿನಲ್ಲಿ ತೊಳೆದು ಬಳಸಬೇಕು. ಇನ್ನು ಮಗುವಿಗೆ ಸಮಯಕ್ಕೆ ತಕ್ಕಂತೆ ಯಾವ ಯಾವ ವ್ಯಾಕ್ಸಿನ್ಸ್ ಹಾಕಬೇಕೋ, ಆ ವ್ಯಾಕ್ಸಿನ್ ಹಾಕಲೇಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




