Spiritual: ಕೆಲವು ಮನೆಯಲ್ಲಿ ಪದೇ ಪದೇ ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತದೆ. ಶುಭಕಾರ್ಯಗಳಲ್ಲಿ ವಿಘ್ನ ಬರುತ್ತಲೇ ಇರುತ್ತದೆ. ಅಲ್ಲದೇ ಮನೆಯಲ್ಲಿ ಚಿತ್ರ ವಿಚಿತ್ರ ಸಮಸ್ಯೆಗಳು ಉದ್ಭವಿಸುತ್ತದೆ. ಹೀಗೆ ಯಾವ ಮನೆಯಲ್ಲಿ ಆಗುತ್ತದೆ ಅಂದ್ರೆ, ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುತ್ತದೆಯೋ, ಅಂಥ ಮನೆಯಲ್ಲಿ ಈ ಲಕ್ಷಣಗಳು ಇರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ವಿಚಿತ್ರ ವಾಸನೆ: ನಕಾರಾತ್ಮಕ ಶಕ್ತಿ, ಪ್ರೇತ ವಾಸವಿರುವ ಮನೆಗೆ ನೀವು ಪ್ರವೇಶಿಸಿದಾಗ, ಅಲ್ಲಿ ಒಂದು ರೀತಿಯ ವಾಸನೆ ಬರುತ್ತದೆ. ನೀವು ಎಷ್ಟೋ ಪರ್ಫ್ಯೂಮ್, ರೂಮ್ ಫ್ರೆಶ್ನರ್ ಬಳಸಿದರೂ, ಆ ವಾಸನೆ ಹೋಗುವುದಿಲ್ಲ. ಇಂಥ ವಾಸನೆ ಯಾವ ಮನೆಯಲ್ಲಿ ಇದೆಯೋ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶ ಮಾಡಿದೆ ಎಂದರ್ಥ.
ಮನೆ ಗೋಡೆ ಮೇಲೆ ಕಪ್ಪು ಕಲೆ: ಮನೆಯ ಗೋಡೆಯಲ್ಲಿ ಅಲ್ಲಲ್ಲಿ ಕಪ್ಪು ಕಲೆಯಾಗಿದ್ದಲ್ಲಿ, ನೀವು ಎಷ್ಟೇ ಪೇಂಟ್ ಮಾಡಿದ್ದಲ್ಲಿ, ಪದೇ ಪದೇ ಕಲೆಯಾಗುತ್ತಿದೆ ಎಂದಲ್ಲಿ, ಅಂಥ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದರ್ಥ.
ನೀರಿನ ವ್ಯತ್ಯಯ: ನಕಾರಾತ್ಮಕ ಶಕ್ತಿ ಇರುವ ಮನೆಯಲ್ಲಿ ಹೆಚ್ಚು ನೀರಿನ ವ್ಯತ್ಯವಾಗುತ್ತದೆ. ಅಂದ್ರೆ, ಪದೇ ಪದೇ ಟ್ಯಾಪ್ ಹಾಳಾಗುತ್ತದೆ. ಒಂದು ರೂಮಿನ ಟ್ಯಾಪ್ ಹಾಳಾಗಿ, ನೀವು ಅದನ್ನು ಸರಿ ಮಾಡಿಸಿದರೂ, ಮತ್ತೊಂದು ಟ್ಯಾಪ್ ಹಾಳಾಗುತ್ತದೆ. ನೀರು ಹೆಚ್ಚು ಲೀಕ್ ಆಗುತ್ತಲೇ ಇರುತ್ತದೆ.
ಖರ್ಚು: ಇಂಥ ಮನೆಯಲ್ಲಿ ಸದಾ ಖರ್ಚು ಇರುತ್ತದೆ. ಸಾಮಾನ್ಯ ಮನುಷ್ಯನಿಗೆ ಖರ್ಚು ಬಂದರೆ, ಅವನು ಸ್ವಲ್ಪವಾದರೂ ಉಳಿತಾಯ ಮಾಡುತ್ತಾನೆ. ಅಥವಾ ಜೀವನದಲ್ಲಿ ಎಂಜಾಯ್ ಮಾಡುವುದಕ್ಕಾಗಿ, ಹಣ ಖರ್ಚು ಮಾಡುತ್ತಾನೆ. ಆದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದಲ್ಲಿ, ಅಂಥ ಮನೆಯಲ್ಲಿ ಉಳಿತಾಯವಾಗುವುದಿಲ್ಲ. ಒಂದಲ್ಲ ಒಂದು ಸಮಸ್ಯೆ ಉದ್ಭವಿಸಿ, ಹಣ ಖರ್ಚಾಗುತ್ತದೆ.
ಜಗಳ: ಇನ್ನು ನಕಾರಾತ್ಮಕ ಶಕ್ತಿ ಇರುವ ಮನೆಯಲ್ಲಿ ಸಂಬಂಧಗಳು ಸರಿ ಇರುವುದಿಲ್ಲ. ಪದೇ ಪದೇ ಜಗಳ, ಮನೆ ಮಂದಿಯಲ್ಲೇ ದ್ವೇಷ ಭಾವನೆ ಮೂಡುವುದು. ನೆಮ್ಮದಿಯೇ ಹಾಳಾಗಿ ಹೋಗುವುದೆಲ್ಲ ಆಗುತ್ತದೆ. ಅಲ್ಲದೇ, ತುಳಸಿ ಗಿಡ ಸರಿಯಾಗಿ ಬೆಳೆಯುವುದಿಲ್ಲ. ಪದೇ ಪದೇ ಒಣಗುತ್ತದೆ.