Spiritual: ನಾವು ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಾಗಬೇಕು ಅಂದ್ರೆ, ಶ್ರೀಮಂತರಾಗಬೇಕು ಅಂದ್ರೆ, ನಮ್ಮ ಪರ್ಸ್‌ನಲ್ಲಿ ಸದಾ ದುಡ್ಡಿರಬೇಕು ಅಂದ್ರೆ, ಯಾವ ಕೆಲಸವನ್ನು ಮಾಡಬೇಕು ಅಂತಾ ಹೇಳಿದ್ದೇವೆ. ಅದೇ ರೀತಿ ನಾವು ನಮ್ಮ ಪರ್ಸ್‌ನಲ್ಲಿ ಇಡುವ ಕೆಲ ವಸ್ತುಗಳಿಂದಲೇ, ನಮ್ಮ ದುಡ್ಡು ಬೇಗ ಬೇಗ ಖಾಲಿಯಾಗುತ್ತದೆ. ಹಾಗಾಗಿ ನಾವಿಂದು ಪರ್ಸ್‌ನಲ್ಲಿ ಯಾವ ವಸ್ತು ಇಡಬಾರದು ಅಂತಾ ಹೇಳಲಿದ್ದೇವೆ.
ಮನೆಜನರ ಫೋಟೋ. ವಾಸ್ತುಶಾಸ್ತ್ರದ ಪ್ರಕಾರ, ಮನೆಜನರ ಅಥವಾ ಮೃತರ ಫೋಟೋವನ್ನು ಪರ್ಸ್‌ನಲ್ಲಿ ಇರಿಸಿಕೊಳ್ಳಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗಿದ್ದು, ಹೀಗೆ ಮಾಡಿದವರು ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿತ ಕಾಣುತ್ತಾರೆ.
ದೇವರ ಫೋಟೋ. ದೇವರ ಫೋಟೋ ಎಲ್ಲಿ ಇರಬೇಕೋ ಅಲ್ಲೇ ಇರಬೇಕು. ಅಂದ್ರೆ ದೇವರ ಕೋಣೆಯಲ್ಲಿರಬೇಕು. ಏಕೆಂದರೆ, ದೇವರ ಫೋಟೋ ಮುಟ್ಟುವಾಗ, ನಾವು ಕೈ ಕಾಲು ತೊಳೆದು, ಅಥವಾ ಸ್ನಾನ ಮಾಡಿ, ಮಡಿಯಿಂದ ಮುಟ್ಟುತ್ತೇವೆ. ಆದರೆ ನಿಮ್ಮ ಪರ್ಸ್‌ನಲ್ಲಿ ದೇವರ ಫೋಟೋ ಇದ್ದರೆ, ಅದನ್ನು ಯಾರ್ಯಾರೋ ಮುಟ್ಟುತ್ತಾರೆ. ಅಥವಾ ನೀವೇ ಶುದ್ಧಿ ಇಲ್ಲದೇ, ದೇವರ ಫೋಟೋವನ್ನು ಮುಟ್ಟುತ್ತೀರಿ. ಇದರಿಂದ ಹಲವು ಸಮಸ್ಯೆಗಳು ಉದ್ಭವಿಸುತ್ತದೆ. ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ. ಹಾಗಾಗಿ ಪರ್ಸ್‌ನಲ್ಲಿ ದೇವರ ಫೋಟೋ ಇಟ್ಟುಕೊಳ್ಳಬೇಡಿ.
ಹಳೆಯ ಪೇಪರ್‌ಗಳು, ಚೀಟಿಗಳು. ಪರ್ಸ್‌ನಲ್ಲಿ ಬರೀ ದುಡ್ಡುಗಳಿರಬೇಕು. ಹಳೆಯ ಪೇಪರ್‌ಗಳು, ಬಿಲ್‌ಗಳು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವುದನ್ನು ತಪ್ಪಿಸುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಪರ್ಸ್‌ನಲ್ಲಿ ಹಳೆಯ ಪೇಪರ್‌ಗಳು, ಚೀಟಿಗಳು ಇರಿಸಬಾರದು.