Saturday, July 5, 2025

Latest Posts

ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ ಸೋಶಿಯಲ್ ಮೀಡಿಯಾ ಸ್ಟಾರ್, ನಟ ವರುಣ್ ಆರಾಧ್ಯ

- Advertisement -

Movie News: ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ವರುಣ್ ಆರಾಧ್ಯ, ಬೃಂದಾವನ ಸಿರಿಯಲ್ ಮೂಲಕ ಸಿನಿಲೋಕಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದಕ್ಕೂ ಮುನ್ನ ವರುಣ್ ಮತ್ತು ಅವರ ಮಾಜಿ ಪ್ರಿಯತಮೆ ವರ್ಷಾ ಕಾವೇರಿ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು. ಈ ಬಗ್ಗೆ ವರುಣ್ ಎಲ್ಲೂ ಮಾತನಾಡಿರಲಿಲ್ಲ.

ಆದರೆ ವರ್ಷಾ ಕಾವೇರಿ ಈ ಬಗ್ಗೆ ಪೋಸ್ಟ್ ಹಾಕಿ, ತಮಗೂ ವರುಣ್‌ಗೂ ಬ್ರೇಕಪ್ ಆಗಿದೆ ಎಂದು ಹೇಳಿದರು. ಅಲ್ಲದೇ, ವರುಣ್‌ಗೆ ಇನ್ನೊಬ್ಬಳು ಗರ್ಲ್ ಫ್ರೆಂಡ್ ಇರುವುದೇ ಇದಕ್ಕೆ ಕಾರಣ ಎಂದಿದ್ದರು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಟಕ್ಕರ್ ಕೊಡುವಂತೆ, ಪೋಸ್ಟ್ ಹಾಕುತ್ತಿದ್ದರು.

ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ವರುಣ್, ಕಾಲಾಯ ತಸ್ಮೈ ನಮಃ, ಬ್ರೇಕಪ್ ಆಗೋದು ಆಗಿ ಹೋಗಿದೆ, ಆ ಬಗ್ಗೆ ಮಾತು ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಬಿಗ್‌ಬಾಸ್ ಶುರುವಾಗುವುದಕ್ಕೂ ಮುನ್ನ ವರುಣ್ ಮತ್ತು ವರ್ಷಾ ಬಿಗ್‌ಬಾಸ್‌ಗೆ ಹೋಗಲು, ಬ್ರೇಕಪ್ ನಾಟಕವಾಡುತ್ತಿದ್ದಾರೆಂಬ ಮಾತು ಕೇಳಿ ಬಂದಿತ್ತು. ಆದರೆ ನಿಜವಾಗ್ಲೂ ಬ್ರೇಕಪ್ ಆಗಿದೆ ಎಂಬುದು ಬಳಿಕ ಗೊತ್ತಾಗಿದ್ದು.

ನಟ ಮಹೇಶ್ ಬಾಬು ಪುತ್ರಿ ಸಿತಾರಾ ಹೆಸರು ದುರ್ಬಳಕೆ: ಪ್ರಕರಣ ದಾಖಲು

ಹೆಚ್ಚು ಡ್ರಗ್ಸ್ ಸೇವಿಸಿ, ಆಸ್ಪತ್ರೆ ಸೇರಿದ ಪೋರ್ನ್ ಸ್ಟಾರ್: ಸಾವು ಬದುಕಿನ ನಡುವೆ ಹೋರಾಟ

ಅಯೋಧ್ಯೆಯ ಬಾಲಕರಾಮನಿಗೆ ದುಬಾರಿ ಚಿನ್ನದ ಉಡುಗೊರೆ ನೀಡಿದ ಬಿಗ್‌ಬಿ ಅಮಿತಾಬ್

- Advertisement -

Latest Posts

Don't Miss