Bollywood News: ಅಯೋಧ್ಯೆ ವಿಷಯದಲ್ಲಿ ಅಮಿತಾಬ್ ತುಂಬಾ ಸದ್ದು ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಅಮಿತಾ ಬಚ್ಚನ್ ಜಾಗ ಖರೀದಿಸಲಿದ್ದಾರೆ ಎನ್ನುವ ಸುದ್ದಿಯ ಬಳಿಕ, ಈಗ ಇನ್ನೊಂದು ಸುದ್ದಿ ಹೊರಬಿದ್ದಿದೆ. ಅಮಿತಾಬ್ ಅಯೋಧ್ಯೆಯ ಬಾಲಕರಾಮನಿಗೆ ಚಿನ್ನದ ಉಡುಗೊರೆ ಗಿಫ್ಟ್ ನೀಡಿದ್ದಾರೆ.
ಅಮಿತಾ ಬಚ್ಚನ್ ಜುವೆಲ್ಲರಿ ಶಾಪ್ ಓಪೆನಿಂಗ್‌ಗಾಗಿ ಅಯೋಧ್ಯೆಗೆ ಆಗಮಿಸಿದ್ದರು. ಆಗ ಬಾಲಕರಾಮನ ದರ್ಶನ ಮಾಡಿ, ಅರ್ಧ ಗಂಟೆ ಅಯೋಧ್ಯೆಯ ರಾಮಮಂದಿರದಲ್ಲೇ ಇದ್ದು, ಅಯೋಧ್ಯೆಯ ಅಧಿಕಾರಿಗಳ ಮನೆಯಲ್ಲಿ ಊಟ ಮಾಡಿದ್ದಾರೆ.
ಬಾಲಕ ರಾಮನ ದರ್ಶನದ ವೇಳೆ ನಟ ಅಮಿತಾಬ್ ಬಚ್ಚನ್, ರಾಮನಿಗೆ ಚಿನ್ನದ ಸರ ಉಡುಗೊರೆಯಾಗಿ ನೀಡಿದ್ದಾರೆ. ಕೇಸರಿ ಬಟ್ಟೆಯಲ್ಲಿ ಮಿಂಚಿರುವ ಅಮಿತಾಬ್, ಇನ್ನು ಕೆಲ ದಿನಗಳಲ್ಲೇ ಅಯೋಧ್ಯೆಯಲ್ಲಿ ಮನೆ ಕಟ್ಟಲಿದ್ದಾರೆಂಬ ಸುದ್ದಿ ಇದೆ. ಅಮಿತಾಬ್ ಈಗಾಗಲೇ ಅಯೋಧ್ಯೆಯಲ್ಲಿ 14 ಕೋಟಿ ರೂಪಾಯಿಯ ಭೂಮಿ ಖರೀದಿಸಿದ್ದು, ಈ ಸ್ಥಳ, ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಹತ್ತಿರವಿದೆ ಎನ್ನಲಾಗಿದೆ.
3 Pan India ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟಿ ಜಾಹ್ನವಿ ಕಪೂರ್
ಡಿವೋರ್ಸ್ ವದಂತಿಗೆ ಫುಲ್‌ಸ್ಟಾಪ್ ಹಾಕಿದ ನಟಿ ಅಂಕಿತಾ ಲೋಖಂಡೆ- ವಿಕ್ಕಿ ಜೈನ್