Saturday, December 21, 2024

Latest Posts

ಸಂಸತ್‌ನತ್ತ ರಜತ್ ಚಿತ್ತ: ವಿವಿಧ ಮಠದ ಸ್ವಾಮೀಜಿಗಳ ಬೆಂಬಲ

- Advertisement -

Hubli News: ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಯುವ ಮುಖಂಡ, ಕಳೆದ ವಿಧಾನಸಭೆ ಚುನಾವಣೆ ವೇಳೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ರಜತ್ ಉಳ್ಳಾಗಡ್ಡಿಮಠ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಮಧ್ಯೆಯೇ ಧಾರವಾಡ ಜಿಲ್ಲೆಯ ವೀರಶೈವ ಲಿಂಗಾಯತ ಮಠಾಧೀಶರು, ಸ್ವಾಮೀಜಿಗಳ ಬೆಂಬಲ ಹಾಗೂ ಆಶೀರ್ವಾದ ಪಡೆಯಲು ರಜತ್ ಮುಂದಾಗಿದ್ದಾರೆ.

ಅದಕ್ಕೆ ಸಾಕ್ಷಿ ಎಂಬಂತೆ ’ಅವರ ಸಮಾಜ ಸೇವೆ ಸದಾ ಮುನ್ನಡೆಯಲಿ’ ಎಂದು 50ಕ್ಕೂ ಹೆಚ್ಚು ಸ್ವಾಮೀಜಿಗಳು ಆಶೀರ್ವದಿಸಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳ ಸಹಕಾರದೊಂದಿಗೆ ಕೈ ಹೈ ಕಮಾಂಡ್‌ಗೆ ಬೇಡಿಕೆ ಸಲ್ಲಿಸುವ ಮಾತುಗಳು ಕೇಳಿಬರುತ್ತಿವೆ.

ರಜತ್ ಜನ್ಮ ದಿನ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡು ಹರಸಲಿದ್ದಾರೆ. ಈ ಮೂಲಕ ಶಕ್ತಿ ಸಮಾವೇಶ ನಡೆಸಲೂ ತಯಾರಿ ನಡೆದಿದೆ ಎನ್ನಲಾಗಿದೆ. ಸಚಿವರಾದ ಸತೀಶ್‌ ಜಾರಕಿಹೊಳಿ, ಸಂತೋಷ್ ಲಾಡ್ ಅವರು ರಜತ್ ಸಂಭ್ರಮದಲ್ಲಿ ಭಾಗಿಯಾಗುವವರಿದ್ದಾರೆ.

ಲಕ್ಷ್ಮೇಶ್ವರ ಮುಕ್ತಿಮಂದಿರ ಶ್ರೀ, ಧಾರವಾಡ ಮುರಘಾಮಠ ಶ್ರೀ, ಮಹಾಂತ ಸ್ವಾಮೀಜಿ ಕಲ್ಮಠ ಬಂಕಾಪುರ ಸವಣೂರ, ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ಸಂಸ್ಥಾನ ಪಂಚಗ್ರಹ ಹಿರೇಮಠ ನವಲಗುಂದ, ಚನ್ನಬಸವ ದೇವರು ವೀರಕ್ತಮಠ ಸಂಶಿ, ಅಭಿನವ ರೇವಣಸಿದ್ಧೇಶ್ವರ ಶ್ರೀ ರಾಯನಾಳ ಸೇರಿ ವಿವಿಧ ಮಠಾಧೀಶರು ರಜತ್‌ಗೆ ಬೆಂಬಲ ಸೂಚಿಸಿದ್ದಾರೆ.

ನಟ ಮಹೇಶ್ ಬಾಬು ಪುತ್ರಿ ಸಿತಾರಾ ಹೆಸರು ದುರ್ಬಳಕೆ: ಪ್ರಕರಣ ದಾಖಲು

ಹೆಚ್ಚು ಡ್ರಗ್ಸ್ ಸೇವಿಸಿ, ಆಸ್ಪತ್ರೆ ಸೇರಿದ ಪೋರ್ನ್ ಸ್ಟಾರ್: ಸಾವು ಬದುಕಿನ ನಡುವೆ ಹೋರಾಟ

ಅಯೋಧ್ಯೆಯ ಬಾಲಕರಾಮನಿಗೆ ದುಬಾರಿ ಚಿನ್ನದ ಉಡುಗೊರೆ ನೀಡಿದ ಬಿಗ್‌ಬಿ ಅಮಿತಾಬ್

- Advertisement -

Latest Posts

Don't Miss