Hubli News: ಹುಬ್ಬಳ್ಳಿ: ಇದೆ ತಿಂಗಳು ಫೆಬ್ರವರಿ 14 ಬುಧವಾರದಂದು ಸಂಜೆ 5:30 ಗಂಟೆಗೆ, ಹುಬ್ಬಳ್ಳಿ ನಗರದ ಗಿರಣಿಚಾಳ ಮೈದಾನದಲ್ಲಿ ರಜತ ಉಳ್ಳಾಗಡ್ಡಿ ಮಠ ಇವರ 32ನೇ ಜನ್ಮದಿನದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಜತ್ ಸಂಭ್ರ ಕಾರ್ಯಕ್ರಮ ಆಯೋಜಿಸಲಾಗಿದೆ ಯಂದು ಪತ್ರಿಕಾಗೋಷ್ಠಿಯಲ್ಲಿ ರಜತ್ ಉಳ್ಳಾಗಡ್ಡಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿವಯೋಗಿ ಮಂದಿರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಗದ್ಗುರು ಮೂರುಸಾವಿರ ಮಠ ಸಂಸ್ಥಾನ ಮಠದ ಡಾ. ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳು ಹುಬ್ಬಳ್ಳಿ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಮಲ ರೇಣುಕಾ ವೀರಮುಕ್ತಿಮನಿ ಶಿವಾಚಾರ್ಯ ಸ್ವಾಮಿಗಳು ಮುಕ್ತಿಮಂದಿರ ಲಕ್ಷ್ಮೇಶ್ವರ ಇವರು ದಿವ್ಯ ಸಾನಿಧ್ಯ ವಹಿಸುವರು. ಅದೇ ರೀತಿ ಧಾರವಾಡ ಜಿಲ್ಲೆಯ ಸುಮಾರು ವಿವಿಧ ಮಠದ ಐವತ್ತು ಮಠಾಧೀಶರು ಈ ಕಾರ್ಯಕ್ರಮದ ಸಾನಿಧ್ಯ ವಹಿಸುವರು.
ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಬೆಂಗೇರಿಯ ರಾಷ್ಟ್ರಧ್ವಜ ತಯಾರಿಕೆಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ವಿಶ್ವವಿಖ್ಯಾತ ಮಲ್ಲಕಂಬ ಪ್ರದರ್ಶನ ಮಾಡಲಾಗುವುದು. ಜೊತೆಗೆ ಹೆಸರಾಂತ ಕನ್ನಡ ಚಲನಚಿತ್ರ ನಟ ಡಾಲಿ ಧನಂಜಯ್, ಹಾಸ್ಯ ಕಲಾವಿದ ಪ್ರಾಣೇಶ್ ಅವರ ತಂಡ ಹುಬ್ಬಳ್ಳಿಯ ಜನತೆಗೆ ಮನೋರಂಜನೆ ಮಾಡಲಿದ್ದಾರೆ.
ಸಚಿವ ಸಂತೋಷ್ ಲಾಡ್, ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕೊಳಚೆ ನಿರ್ಮೂಲ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಶಾಸಕ ಎನ್. ಹೆಚ್ ಕೋನರೆಡ್ಡಿ ಸೇರಿದಂತೆ ಪ್ರಮುಖ ನಾಯಕರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ ಎಂದು ತಿಳಿಸಿದರು.
ಈ ಪತ್ರಿಕಾಗಷ್ಠಿಯಲ್ಲಿ ಪಾಲಿಕೆ ಸದಸ್ಯರಾದ, ಶಿವಕುಮಾರ್ ರಾಯನಗೌಡ್ರ್, ಚೇತನ್ ಹಿರೇಕೆರೂರು ಮುಖಂಡರಾದ ಮೋಹನ್ ಹಿರೇಮನಿ, ಗೋಪಾಲ್ ಎನ್ನೆಚವಂಡಿ, ಶಹಜಮಾನ್ ಮುಜಾಹಿದ್, ಸಾಧಿಕ್ ಯಕ್ಕಂಡಿ ಇದ್ದರು.
ಹೆಚ್ಚು ಡ್ರಗ್ಸ್ ಸೇವಿಸಿ, ಆಸ್ಪತ್ರೆ ಸೇರಿದ ಪೋರ್ನ್ ಸ್ಟಾರ್: ಸಾವು ಬದುಕಿನ ನಡುವೆ ಹೋರಾಟ
ಅಯೋಧ್ಯೆಯ ಬಾಲಕರಾಮನಿಗೆ ದುಬಾರಿ ಚಿನ್ನದ ಉಡುಗೊರೆ ನೀಡಿದ ಬಿಗ್‌ಬಿ ಅಮಿತಾಬ್