Saturday, April 19, 2025

Latest Posts

ನಿಮ್ಮ ಹುಡುಗಿಗೆ ಪ್ರೇಮಿಗಳ ದಿನದಂದು ಈ ರಕ್ಷಣಾತ್ಮಕ ಉಡುಗೊರೆ ನೀಡಿ

- Advertisement -

Valentines Day Special: ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಮಯದಲ್ಲಿ ಹಲವು ಹುಡುಗರು ತಮ್ಮ ಗೆಳತಿಗಾಗಿ, ಚಾಕೋಲೇಟ್ಸ್, ಮೇಕಪ್ ಕಿಟ್, ಬಟ್ಟೆ, ಚಪ್ಪಲಿ, ಬ್ಯಾಗ್, ಪರ್ಫ್ಯೂಮ್ ಖರೀದಿಸುತ್ತಾರೆ. ಇದೆಲ್ಲವೂ ಕಾಮನ್ ಉಡುಗೊರೆ. ಅಲ್ಲದೇ, ಇವೆಲ್ಲವೂ ಹೆಣ್ಣು ಮಕ್ಕಳಿಗೂ ಇಷ್ಟವಾಗುವ ಗಿಫ್ಟ್‌. ಆದರೆ ನೀವು ಈ ವರ್ಷ ನಿಮ್ಮ ಹುಡುಗಿಗೆ, ರಕ್ಷಣಾತ್ಮಕವಾದ ಉಡುಗೊರೆ ನೀಡಿ. ಈ ಬಗ್ಗೆ ನಾವು ನಿಮಗೆ ಐಡಿಯಾಗಳನ್ನ ಕೊಡುತ್ತಿದ್ದೇವೆ.

ಪೆಪ್ಪರ್ ಸ್ಪ್ರೇ: ಹೆಣ್ಣು ಮಕ್ಕಳು ಒಬ್ಬರೇ ಜರ್ನಿ ಮಾಡುವಾಗ, ಆಫೀಸಿನಿಂದ ಬರುವಾಗ, ಅಥವಾ ಗೊತ್ತಿಲ್ಲದ ಜಾಗಕ್ಕೆ ಹೋಗುವಾಗ, ಅವರ ರಕ್ಷಣೆ ಅವರೇ ಮಾಡಿಕೊಳ್ಳಬೇಕಾಗುತ್ತದೆ. ಈ ವೇಳೆ ಅವರ ಸಹಾಯಕ್ಕೆ ಬರುವುದೇ ಪೆಪ್ಪರ್ ಸ್ಪ್ರೇ. ಹಾಗಾಗಿ ಈ ಪ್ರೇಮಿಗಳ ದಿನಕ್ಕೆ ನಿಮ್ಮ ಹುಡುಗಿಗೆ, ಪೆಪ್ಪರ್ ಸ್ಪ್ರೇ ಗಿಫ್ಟ್ ಮಾಡಿ.

ಸೇಫ್ಟಿ ಕೀ ಬಂಚ್. ಈಗ ಮಾರುಕಟ್ಟೆಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಸೇಫ್ಟಿ ಕೀ ಬಂಚ್ ಬಂದಿದೆ. ಅದರಲ್ಲಿ ಚಾಕು, ಬ್ಲೇಡ್ ಸೇರಿ ಹಲವು ಸೇಫ್ಟಿ ಆಯುಧಗಳಿರುತ್ತದೆ. ಇಂಥ ಆಯುಧಗಳಿಂದ ಹೆಣ್ಣು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಆದರೆ ಇದೇ ಕೀ ಬಂಚ್‌ನಿಂದ ತಮಗೆ ತಾವೇ ಅಪಾಯ ಮಾಡಿಕೊಳ್ಳದಿದ್ದರೆ ಸಾಕು.

ಆಲಾಂ ಕೀ ಬಂಚ್. ಇದು ಕೂಡ ಸೇಫ್ಟೀ ಕೀ ಬಂಚ್. ಇದರಲ್ಲಿ ಅಲಾಂ ಪ್ಲೇ ಆಗತ್ತೆ. ಹೆಣ್ಣು ಮಕ್ಕಳಿಗೆ ಕಷ್ಟ ಬಂದಾಗ, ಅವರು ಈ ಅಲಾಂ ಪ್ಲೇ ಮಾಡಿ, ತಮ್ಮವರಿಗೆ ಸಂದೇಶ ರವಾನಿಸಬಹುದು.

ಸೇಫ್ಟಿ ಟಾರ್ಚ್. ಇದು ಅಪರೂಪದ ಟಾರ್ಚ್ ಆಗಿದೆ. ಈ ಟಾರ್ಚ್ ಬರೀ ಬೆಳಕು ಕೊಡುವುದಿಲ್ಲ. ಬದಲಾಗಿ ಎದುರಿಗಿದ್ದವರಿಗೆ ಶಾಕ್ ಕೂಡ ನೀಡುತ್ತದೆ. ಯಾರಾದರೂ ಹೆಣ್ಣು ಮಕ್ಕಳಿಗೆ ತೊಂದರೆ ಕೊಡಲು ಬಂದರೆ, ಅಂಥವರಿಗೆ ಈ ಟಾರ್ಚ್ ಬಳಸಿ, ಶಾಕ್ ನೀಡಬಹುದು. ಆದರೆ ನೀವು ಈ ಟಾರ್ಚ್‌ನ್ನು ಸುಮ್ಮನೆ ಸುಮ್ಮನೆ ಬಳಸುವಂತಿಲ್ಲ. ಬದಲಾಗಿ ತೊಂದರೆ ಕೊಟ್ಟವರಿಗೆ ಮಾತ್ರ ಬಳಸಬೇಕು.

ಹಿಡನ್ ಪಾಕೇಟ್ ಟೀ ಶರ್ಟ್. ಸೇಫ್ಟಿ ಕೀ ಬಂಚ್, ಪೆಪ್ಪರ್ ಸ್ಪ್ರೇ, ಟಾರ್ಚ್ ಕೊಟ್ರೆ ಸಾಕಾ..? ಅದನ್ನು ಅಡಗಿಸಿ ಇಡಲು ಟೀ ಶರ್ಟ್ ಬೇಡ್ವಾ?. ಹೌದು ಇದು ಹಿಡನ್ ಪಾಕೇಟ್ ಟೀ ಶರ್ಟ್. ಅಂದ್ರೆ ಎದುರಿಗೆ ಇರುವವರಿಗೆ ಇವರ ಟೀ ಶರ್ಟ್‌ನಲ್ಲಿ ಜೇಬು ಇಲ್ಲ ಅಂತಾ ಅನ್ನಿಸುತ್ತೆ. ಆದರೆ ಆ ಟೀ ಶರ್ಟ್‌ನಲ್ಲಿ ಹಿಡನ್ ಪಾಕೇಟ್ ಇರತ್ತೆ. ಅಂಥ ಟೀ ಶರ್ಟ್ ನಿಮ್ಮ ಹುಡುಗಿಗೆ ಗಿಫ್ಟ್ ಮಾಡಿ.

ಬಾಣಂತಿಯ ಆರೈಕೆ ಯಾವ ರೀತಿ ಇರಬೇಕು..?

ಚಳಿಗಾಲದಲ್ಲಿ ಮಕ್ಕಳಿಗೆ ಉಲ್ಲನ್ ಬಟ್ಟೆ ಹಾಕೋದು ತಪ್ಪಾ..?

ಯೋಗಾಭ್ಯಾಸ ಯಾರ್ಯಾರು ಮಾಡಬಹುದು..? ಇದರಿಂದ ಏನು ಪ್ರಯೋಜನ..?

- Advertisement -

Latest Posts

Don't Miss