Saturday, July 5, 2025

Latest Posts

ಮನೆಯಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದು ಬಿಸಾಕಿ, ಇಲ್ಲದಿದ್ದರೆ ನೆಮ್ಮದಿ ಹಾಳಾಗೋದು ಗ್ಯಾರಂಟಿ..

- Advertisement -

Spiritual News: ಮನೆಯಲ್ಲಿ ಕೆಲವು ವಸ್ತುಗಳನ್ನು ಇರಿಸಿಕೊಳ್ಳುವುದರಿಂದ ಆರೋಗ್ಯ ಹಾಳಾಗುತ್ತದೆ. ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಮನೆ ಜನರ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ಮನೆಯಲ್ಲಿ ಕೆಲ ವಸ್ತುಗಳಿದ್ದರೆ, ಅದನ್ನು ಬಿಸಾಕಿಬಿಡಿ. ಹಾಗಾದ್ರೆ ಯಾವ ವಸ್ತುಗಳನ್ನು ಮನೆಯಿಂದ ಆಚೆ ಎಸೆಯಬೇಕು ಅಂತಾ ತಿಳಿಯೋಣ ಬನ್ನಿ..

ಹರಿದಿರುವ ಚಪ್ಪಲಿ. ನಿಮ್ಮ ಮನೆಯಲ್ಲಿ ಹರಿದಿರುವ ಚಪ್ಪಲಿ ಇದ್ದರೆ, ಅದನ್ನು ನೀವು ಬಳಸದೇ ಇದ್ದರೆ, ಅಂಥ ಚಪ್ಪಲಿಯನ್ನು ಬಿಸಾಕಿಬಿಡಿ. ಇಂಥ ವಸ್ತು ಮನೆಯಲ್ಲಿದ್ದರೆ, ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿರುವುದಿಲ್ಲ.

ಹಳೆಯ ಕ್ಯಾಲೆಂಡರ್. ಹಳೆಯ ಕ್ಯಾಲೆಂಡರ್‌ಗಳು ಮನೆಯಲ್ಲಿರುವುದು ಅಷ್ಟು ಉಚಿತವಲ್ಲ. ಇದರೊಂದಿಗೆ ರದ್ದಿ ಪೇಪರ್ ಇದ್ದರೂ ಕೂಡ ಅದನ್ನ ಆಚೆ ಹಾಕಿ. ಇಂಥವುಗಳಿಗೆ ಧೂಳು ಹಿಡಿದಿರುತ್ತದೆ. ಇದೇ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಕಾರಣವಾಗುತ್ತದೆ.

ಒಡೆದ ಗಡಿಯಾರ. ಒಡೆದ ಗಡಿಯಾರ ಅಥವಾ ಎಂದಿಗೂ ಸರಿಯಾಗದೇ ಇರುವ ಗಡಿಯಾರ, ವಾಚ್ ಇದ್ದರೆ, ಅದನ್ನು ಮೊದಲು ಮನೆಯಿಂದ ಆಚೆ ಬಿಸಾಕಿ. ಇಂಥ ವಸ್ತುಗಳು ನಿಮ್ಮ ಸಮಯವನ್ನು ಹಾಳು ಮಾಡುತ್ತದೆ. ನಿಮಗೆ ಉತ್ತಮ ಸಮಯ ಬಂದಾಗ, ವಾಚುಗಳು ಹಾಳಾಗುತ್ತದೆ. ಗಡಿಯಾರಗಳು ಮುರಿದು ಹೋಗುತ್ತದೆ. ಆದರೂ ನೀವು ಅದೇ ವಾಚ್ ಬೇಕೆಂದು ಬಳಸಿದರೆ, ನಿಮ್ಮ ಲಕ್ ಬಂದ ದಾರಿಯಲ್ಲೇ ಹೋಗುತ್ತದೆ.

ಬಳಸದಿರುವ, ಹಳೆಯ ಬಟ್ಟೆಗಳು. ಬಳಸದಿರುವ ಬಟ್ಟೆ, ಹಳೆಯ ಬಟ್ಟೆಗಳನ್ನು ದಾನ ಮಾಡಿಬಿಡಿ. ಹರಿದಿರುವ ಬಟ್ಟೆಯನ್ನು ಬಿಸಾಕಿಬಿಡಿ. ಉತ್ತವಾದ ಬಟ್ಟೆಯನ್ನು ಇರಿಸಿಕೊಳ್ಳಿ, ಧರಿಸಿಕೊಳ್ಳಿ. ಕಡಿಮೆ ರೇಟಿಗೆ ಸಿಕ್ಕಿತೆಂದು ರಾಶಿ ರಾಶಿ ಬಟ್ಟೆ ತರಬೇಡಿ. ಬಟ್ಟೆ, ಚಪ್ಪಲಿ, ಕಟ್ಟಿಗೆ ಎಷ್ಟು ಕಡಿಮೆ ಇರುತ್ತದೆಯೋ, ಮನೆಗೆ ಅಷ್ಟೇ ಒಳ್ಳೆಯದು.

ಒಡೆದಿರುವ ಪಾತ್ರೆ. ಒಡೆದಿರುವ ಪಾತ್ರೆ ಬಳಸಿದರೆ, ಅದು ನಿಮ್ಮ ಅವನತಿಗೆ ಕಾರಣವಾಗಬಹುದು. ಈ ಕೆಲಸ ಮಾಡುವವರು ಅನ್ನಪೂರ್ಣೆಯ ಅವಕೃಪೆಗೆ ಪಾತ್ರರಾಗುತ್ತಾರೆ. ಅಲ್ಲದೇ, ಒಡೆದ ಪಾತ್ರೆ ಮನೆಗೆ ದರಿದ್ರ ತರುತ್ತದೆ. ಹಾಗಾಗಿ ಮನೆಯಲ್ಲಿ ಒಡೆದ ಪಾತ್ರೆ ಇರಿಸಬೇಡಿ.

ಒಣಗಿರುವ ಗಿಡಗಳು. ಒಣಗಿರುವ ಗಿಡಗಳನ್ನು ಮನೆಯಲ್ಲಿ ಇರಿಸಬಾರದು. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಅನಾರೋಗ್ಯ ಸಂಭವಿಸುತ್ತದೆ. ನೀವು ನೆಟ್ಟ ತುಳಸಿ ಗಿಡ ಪದೇ ಪದೇ ಒಣಗುತ್ತಿದ್ದರೆ, ಅದು ನಿಮ್ಮ ಮನೆಯಲ್ಲಿ ಯಾರಿಗಾದರೂ ಗಂಭೀರ ಖಾಯಿಲೆ ಸಂಭವಿಸಲಿದೆ. ಅಥವಾ ಸಂಬಂಧಿಗಳ ಸಾವಾಗಲಿದೆ ಎಂಬ ಸೂಚನೆ ನೀಡುತ್ತದೆ. ಹಾಗಾಗಿ ಒಣಗಿದ ಗಿಡವನ್ನು ಮನೆಯಲ್ಲಿ ಇರಿಸಬೇಡಿ.

ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಇಂಥ ಲಕ್ಷಣಗಳು ಕಂಡು ಬರುತ್ತದೆ

ನಿಮ್ಮ ಜೀವನ ಸಂಗಾತಿ ಆಗುವವರಿಗೆ ಈ ಉಡುಗೊರೆ ಮಾತ್ರ ಕೊಡಬೇಡಿ..

ಲಕ್ಷ್ಮೀ ಒಲಿಯಬೇಕು ಅಂದ್ರೆ ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇರಿಸಿ

- Advertisement -

Latest Posts

Don't Miss