Health Tips: ಯೋಗ ಮಾಡಿದವರಿಗೆ ಯಾವ ರೋಗವೂ ಬರುವುದಿಲ್ಲವೆಂಬ ಮಾತಿದೆ. ಆದರೆ ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಯೋಗ ಮಾಡಿದರೆ ಮಾತ್ರ, ಆರೋಗ್ಯಕ್ಕೆ ಲಾಭವಾಗುತ್ತದೆ. ಇಂದು ನಾವು ಯೋಗಾ ಮಾಡುವುದರಿಂದ ಮೈಗ್ರೇನ್ ಸಮಸ್ಯೆ ದೂರ ಮಾಡಬಹುದಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕೆಲವು ಯೋಗಗಳನ್ನು ಮಾಡುವುದರಿಂದ ಮೈಗ್ರೇನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಬರೀ ಮೈಗ್ರೇನ್ ಮಾತ್ರವಲ್ಲ, ಸೈನಸ್, ಡಸ್ಟ್ ಅಲರ್ಜಿ ಇದ್ದರೂ, ಯೋಗ ಮಾಡಿ ಅದನ್ನು ಕೂಡ ಹೋಗಲಾಡಿಸಬಹುದು. ಪ್ರಾಣಾಯಾಮದಲ್ಲಿ ಅನಲೋಮ ವಿಲೋಮ ಮಾಡುವುದರಿಂದ ನಮ್ಮ ಮೆದುಳಲ್ಲಿ 142 ಸಾವಿರ ನರನಾಡಿಗಳು ಆ್ಯಕ್ಟಿವೇಟ್ ಆಗುತ್ತದೆ. ಅಲ್ಲದೇ ನೆನಪಿನ ಶಕ್ತಿ ಕೂಡ ಉತ್ತಮವಾಗಿರುತ್ತದೆ.
ಇನ್ನು ಯೋಗ ಗುರುಗಳು ಹೇಳುವುದೇನೆಂದರೆ, ಯೋಗ ಮಾಡಲು ಶುರು ಮಾಡಿ, ಕೆಲ ದಿನಗಳಲ್ಲೇ ನಿಮ್ಮೆಲ್ಲ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಯೋಗ ಮಾಡುವುದರಿಂದ ಅದರ ಉತ್ತಮ ಪರಿಣಾಮ ನಮ್ಮ ದೇಹದ ಮೇಲೆ ನಿಧಾನ ಗತಿಯಲ್ಲಾಗುತ್ತದೆ. ರೋಗಗಳು ನಿಧಾನವಾಗಿ ಕಡಿಮೆಯಾಗುತ್ತದೆ. ದೇಹದ ತೂಕ ನಿಧಾನವಾಗಿ ಇಳಿಯುತ್ತದೆ. ಹಾಗಾಗಿ ಯೋಗ ಮಾಡುವಾಗ, ಅದನ್ನು ಸರಿಯಾಗಿ ಕಲಿತು ಯೋಗ ಮಾಡಬೇಕು. ಸರಿಯಾದ ಸಮಯಕ್ಕೆ ಯೋಗ ಮಾಡಬೇಕು.
ಇನ್ನು ಮೈಗ್ರೇನ್, ಸೈನಸ್, ಡಸ್ಟ್ ಅಲರ್ಜಿ ಎಲ್ಲವನ್ನೂ ದೂರ ಮಾಡಲು ಯಾವ ರೀತಿಯ ಯೋಗ ಮಾಡಬೇಕು ಅಂತಾ ತಿಳಿಯಲು ಈ ವೀಡಿಯೋ ನೋಡಿ..