ಕಳಪೆ ಗುಣಮಟ್ಟದ ಸಿರಪ್ ತಯಾರಿಕೆ: ಮದ್ದು ಸೇವಿಸಿ, ಮಕ್ಕಳ ಸಾವು, ಹಲವರ ಬಂಧನ

International News: ಉಜ್ಬೇಕಿಸ್ತಾನದಲ್ಲಿ ಕಳಪೆ ಗುಣಮಟ್ಟದ ಸಿರಪ್ ತಯಾರಿಸಿ ಮಾರಾಟ ಮಾಡುತ್ತಿದ್ದು, ಆ ಸಿರಪ್ ಸೇವಿಸಿದ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಕಾರಣಕ್ಕೆ ಭಾರತೀಯರು ಸೇರಿ ಹಲವು ಆರೋಪಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.

ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಲಿಮಿಟೆಡ್ ತಯಾರಿಸಿದ ಸಿರಪ್ ಸೇವಿಸಿ, 65ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ರಾಘವೇಂದ್ರ ಪ್ರತಾಪ್ ಸಿಂಗ್ ಎಂಬುವವರಿಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. ಇವರೊಂದಿಗೆ ಇನ್ನೂ ಹಲವರಿಗೆ ಶಿಕ್ಷೆ ವಿಧಿಸಲಾಗಿದೆ.

ಯಾವುದೇ ಔಷಧಿ ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನ ಅದನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಈ ಮದ್ದಿನ ಪರೀಕ್ಷೆ ಮಾಡದಂತೆ, ಉಜ್ಬೇಕಿಸ್ತಾನದ ಅಧಿಕಾರಿಗಳು ಲಂಚ ನೀಡಿದ್ದಾರೆಂಬ ಆರೋಪವಿದೆ. ಹೀಗೆ ಉಜ್ಬೇಕಿಸ್ತಾನದ ಕೆಲವು ಅಧಿಕಾರಿಗಳನ್ನು ಸಹ ಬಂಧಿಸಲಾಗಿದೆ.

ಇನ್ನು ಈ ಔಷಧಿ ಸೇವಿಸಿ, ಎಷ್ಟೋ ಮಕ್ಕಳು ಅಂಗವಿಕಲರಾಗಿದ್ದಾರೆ. ಅವರಿಗೆ ಇಂತಿಷ್ಟು ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಲಾಗಿದೆ. ಇನ್ನು ಈ ಮಕ್ಕಳು ಸಾವನ್ನಪ್ಪಲು ಮತ್ತು ಅಂಗವಿಕಲರಾಗಲು ಈ ಔಷಧಿಯಲ್ಲಿದ್ದ ವಿಷಕಾರಿ ಗುಣಗಳೇ ಕಾರಣ ಎನ್ನಲಾಗಿದೆ.

ಜಾರ್ಖಂಡ್‌ನ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

ಬಾಲಿವುಡ್ ಹಾಡುಗಾರ, ಗಝಲ್ ಮಾಂತ್ರಿಕ ಪಂಕಜ್‌ ಉದಾಸ್ ನಿಧನ

ದಾಖಲೆ ಬರೆದ ರಾಮಲಲ್ಲಾ: ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹ

About The Author