ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು

National News: ಜುಲೈನಲ್ಲಿ ಆಗರ್ಭ ಶ್ರೀಮಂತ ಅನಂತ್ ಅಂಬಾರಿ ಮತ್ತು ಉದ್ಯಮಿ ರಾಧಿಕಾ ಮರ್ಚಂಟ್ ಹಸೆಮಣೆ ಏರಲಿದ್ದಾರೆ. ಅದಕ್ಕೂ ಮುನ್ನ ಈಗಿನಿಂದಲೇ ಹಲವು ಕಾರ್ಯಕ್ರಮ ಶುರುವಾಗಿದೆ.

ಗುಜರಾತ್‌ನಲ್ಲಿ ಅನಂತ್ ಅಂಬಾನಿ ದೇವಸ್ಥಾನಗಳ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಜಾಮ್‌ನಗರದಲ್ಲಿ ಜಾಗ ತೆಗೆದುಕೊಂಡು ಅಲ್ಲಿ, ಕಾಡು ಪ್ರಾಣಿಗಳನ್ನಿರಿಸಿ, ಅಭಯಾರಣ್ಯ ರಕ್ಷಣೆ ಮಾಡುತ್ತಿದ್ದಾರೆ. ಅಲ್ಲದೇ, ನಾಳೆಯಿಂದ ಗುಜರಾತ್‌ನ ಜಾಮ್‌ ನಗರದಲ್ಲಿ ಅನಂತ್ ಮತ್ತು ರಾಧಿಕಾ ಪ್ರಿ ವೆಡ್ಡಿಂಗ್ ನಡೆಯಲಿದ್ದು, ಈಗಾಗಲೇ ಜಾಮ್‌ನಗರಕ್ಕೆ ಹಾಲಿವುಡ್, ಬಾಲಿವುಡ್ ಗಣ್ಯರು ಬಂದಿಳಿದಿದ್ದಾರೆ.

ನಾಳೆಯಿಂದ ಮೂರು ದಿನಗಳ ಕಾಲ ಪ್ರಿ ವೆಡ್ಡಿಂಗ್ ಕಾರ್ಯಕ್ರಮವಿದ್ದು, ಈ ಕಾರ್ಯಕ್ರಮದಲ್ಲಿ ಮನೋರಂಜನಾ ಕಾರ್ಯಕ್ರಮವಿರುತ್ತದೆ. ಬಾಲಿವುಡ್ ಗಣ್ಯರು ಈ ವೇಳೆ ಹೆಜ್ಜೆ ಹಾಕಲಿದ್ದಾರೆ. ಅಲ್ಲದೇ ಬಂದ ಅತಿಥಿಗಳಿಗಾಗಿ 2500 ರೀತಿಯ ಪದಾರ್ಥಗಳಿರುವ ಭೋಜನ ಕೂಟವಿರುತ್ತದೆ.

ಇನ್ನು ಇಂದು ಅನ್ನದಾನ ಸೇವೆ ಮಾಡುವ ಮೂಲಕ ಅನಂತ್ ಅಂಬಾನಿ ಮತ್ತು ರಾಧಿಕಾ ಮದುವೆ ಸಮಾರಂಭ ಶುರುವಾಗಿದೆ. ಈ ಅನ್ನಸೇವೆಯಲ್ಲಿ ರಾಧಿಕಾ ಮತ್ತು ಅನಂತ್ ಎಲ್ಲರನ್ನೂ ಮಾತನಾಡಿಸುತ್ತ, ತಿಂಡಿ ಬಡಿಸಿದ್ದಾರೆ. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಅನಂತ್ ಅಂಬಾನಿ, ಮುಖೇಶ್ ಮತ್ತು ಅನಿತಾ ಅಂಬಾನಿಯ ಪುತ್ರನಾಗಿದ್ದು, ಬ್ಯುಸಿನೆಸ್ ಮ್ಯಾನ್, ಕೋಟಿಗಳ ಒಡೆಯನಾಗಿದ್ದಾರೆ. ರಾಧಿಕಾ ಕೂಡ ಸಾಮಾನ್ಯ ಮನೆತನದ ಹೆಣ್ಣಲ್ಲ. ಆಕೆ ಈಗಾಗಲೇ ಹಲವು ಉದ್ಯೋಗಗಳ ಮಾಲೀಕಳಾಗಿದ್ದು, ಕೋಟಿ ಕೋಟಿ ಆಸ್ತಿಯ ಒಡತಿಯಾಗಿದ್ದಾಳೆ.

ಡಾಲಿ ಚಾಯ್‌ವಾಲಾನ ಬಳಿ ಚಹಾ ಖರೀದಿಸಿ ಕುಡಿದ ಬಿಲ್ ಗೇಟ್ಸ್..

ಸುಳ್ಳು ಹೇಳಿ ಸಿಕ್ಕಿಬಿದ್ದ ನಟಿ ಮಲೈಕಾ ಅರೋರಾ, ನಾಚಿಕೆಗೇಡಿನ ಸಂಗತಿ ಎಂದ ನೆಟ್ಟಿಗರು..

ಶೂಟಿಂಗ್ ವೇಳೆ ನಿರ್ದೇಶಕರು ನನ್ನ ಮೇಲೆ ಹಲ್ಲೆ ಮಾಡಿದ್ದರು: ನಟಿ ಮಮಿತಾ ಆರೋಪ

About The Author