Monday, October 6, 2025

Latest Posts

ಬಾತ್‌ರೂಮ್‌ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ..

- Advertisement -

Spiritual Story: ಒಂದು ಮನೆಗೆ ಬಾತ್‌ರೂಮ್ ಅನ್ನೋದು ಎಷ್ಟು ಮುಖ್ಯವೋ, ಅದನ್ನು ಕ್ಲೀನ್ ಆಗಿ ಇರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಇಲ್ಲವಾದಲ್ಲಿ ನೀವು ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಬಾತ್‌ರೂಮ್ ಕ್ಲೀನ್ ಇರಲಿ. ಬಾತ್‌ರೂಮ್ ಸದಾ ಕ್ಲೀನ್ ಇರಲಿ. ಏಕೆಂದರೆ, ನಕಾರಾತ್ಮಕ ಶಕ್ತಿಯ ಪ್ರಭಾವ ಇರುವುದೇ ಬಾತ್‌ರೂಮ್‌ನಲ್ಲಿ. ಅಲ್ಲಿ ನಾವು ದೇವರಿಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವುದಿಲ್ಲ. ಬರೀ ಕಲ್ಮಶ ತೆಗೆದು ಹಾಕಲು ಆ ಕೋಣೆ ಬಳಸಲಾಗುತ್ತದೆ. ಹಾಗಾಗಿ ಅಲ್ಲಿ ನಕಾರಾತ್ಮಕ ಶಕ್ತಿ ಇದ್ದೇ ಇರುತ್ತದೆ. ಹಾಗಾಗಿ ಬಾತ್‌ರೂಮ್ ಕ್ಲೀನ್ ಇದ್ದಷ್ಟು, ನಕಾರಾತ್ಮಕ ಶಕ್ತಿಯ ಪ್ರಭಾವವೂ ಕಡಿಮೆ ಇರುತ್ತದೆ.

ನಳವನ್ನು ಸರಿಯಾಗಿ ಬಂದ್ ಮಾಡಿ. ಕೆಲವರು ನಳವನ್ನು ಸರಿಯಾಗಿ ಬಂದ್ ಮಾಡುವುದಿಲ್ಲ. ಕೊಂಚ ಕೊಂಚ ನೀರು ಪೋಲಾಗುತ್ತದೆ. ಹೀಗೆ ನೀರು ಪೋಲಾದರೆ, ನಿಮ್ಮ ಹಣವೂ ಇದೇ ರೀತಿ ಪೋಲಾಗುತ್ತದೆ. ಶೌಚಗೃಹದ ಬಗ್ಗೆ ಯಾರೂ ಅಷ್ಟು ಗಮನಿಸುವುದಿಲ್ಲ. ಆದರೆ ಈ ರೀತಿ ನಳವನ್ನು ಸರಿಯಾಗಿ ಬಂದ್ ಮಾಡುವುದು ಕೂಡ ಮುಖ್ಯವಾಗಿರುತ್ತದೆ.

ಬಾತ್‌ರೂಮ್‌ನಲ್ಲಿರುವ ಬಕೇಟ್, ಬೇರೆ ವಸ್ತುಗಳನ್ನು ತಲೆಕೆಳಗಾಗಿ ಇರಿಸಬೇಡಿ. ಹೆಚ್ಚಿನವರು ಸ್ನಾನದ ಬಳಿಕ ಬಕೇಟ್ ತಲೆಕೆಳಗಾಗಿ ಇಡುತ್ತಾರೆ. ಆದರೆ ಎಂದಿಗೂ ನೀವು ಬಳಸುವ ತಪ್ಪಲೆ, ಅಥವಾ ಬಕೇಟ್ ತಲೆಕೆಳಗಾಗಿ ಇಡಬಾಾರದು. ಇದರಿಂದ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಆರ್ಥಿಕ ಸಮಸ್ಯೆಗೂ ಉಂಟಾಗುತ್ತದೆ.

ತೊಳೆಯದ ಬಟ್ಟೆಗಳನ್ನು ಹೆಚ್ಚು ದಿನ ಬಾತ್‌ರೂಮ್‌ನಲ್ಲಿ ಇರಿಸಬೇಡಿ. ತೊಳೆಯದ ಬಟ್ಟೆಗಳನ್ನು ಬಾತ್‌ರೂಮ್‌ನಲ್ಲಿ ಹೆಚ್ಚು ದಿನ ಇರಿಸಬೇಡಿ. ಇದರಿಂದ ಆರ್ಥಿಕ ಪರಿಸ್ಥಿತಿಯೂ ಹಾಳಾಗುತ್ತದೆ. ಆರೋಗ್ಯ ಸಮಸ್ಯೆಯೂ ಬಂದೊದಗುತ್ತದೆ. ಬಳಸಿದ ಬಟ್ಟೆಯನ್ನು ಎರಡು ದಿನದೊಳಗೆ ತೊಳೆದು ಹಾಕಿ. ಇನ್ನು ಮುಖ್ಯವಾದ ವಿಚಾರ ಅಂದ್ರೆ, ಬಾತ್‌ರೂಮ್ ಬಾಗಿಲನ್ನು ಸದಾ ಮುಚ್ಚಿ.

ಹಣೆಗೆ ಯಾವ ತಿಲಕವಿಡಬೇಕು..? ಇದರಿಂದ ಏನು ಪ್ರಯೋಜನ..?

ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ

ಚಾಣಕ್ಯರ ಪ್ರಕಾರ ಅಪ್ಪಿತಪ್ಪಿಯೂ ನಾವು ಈ ಕೆಲಸ ಮಾಡಬಾರದಂತೆ..

- Advertisement -

Latest Posts

Don't Miss