Tuesday, October 7, 2025

Latest Posts

ಹೊಟ್ಟೆ ನೋವು, ಜ್ವರ ಕಾಡ್ತಾ ಇದೆಯಾ..? ಅಪೆಂಡಿಕ್ಸ್ ಇರಬಹುದು..

- Advertisement -

Health Tips: ಸಾಮಾನ್ಯವಾಗಿ ಹಲವರು ತಮಗೆ ಜ್ವರ ಬಂದ್ರೆ, ಮನೆಮದ್ದು ಮಾಡುತ್ತಾರೆ. ಮನೆಯಲ್ಲೇ ಇರುವ ಯಾವುದಾದರೂ ಗುಳಿಗೆ ತಿಂದು ಸುಮ್ಮನಾಗುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಏಕೆಂದರೆ, ಯಾವಾಗಲೂ ಜ್ವರ ನಾರ್ಮಲ್ ಆಗಿರುವುದಿಲ್ಲ. ಕೆಲವೊಮ್ಮೆ ಯೂರಿನ್ ಪ್ರಾಬ್ಲಮ್ ಆಗಿ ಜ್ವರ ಬರಬಹುದು. ಇನ್ನು ಹಲವು ಕಾರಣಗಳಿಗೆ ಜ್ವರ ಬರಬಹುದು. ಅದೇ ರೀತಿ ಅಪೆಂಡಿಕ್ಸ್ ಬರುವಾಗಲೂ ಜ್ವರ ಬರುತ್ತದೆ. ಈ ಬಗ್ಗೆ ಡಾ.ಆಂಜೀನಪ್ಪ ವಿವರಿಸಿದ್ದಾರೆ ನೋಡಿ..

ಅಪೆಂಡಿಕ್ಸ್ ಅಂದ್ರೆ ಜಂತುಹುಳದ ರೀತಿ ಇರುತ್ತದೆ. ಈ ಜಾಗದಲ್ಲಿ ಇನ್‌ಫೆಕ್ಷನ್ ಆದಾಗ, ನಮಗೆ ಹೊಟ್ಟೆ ನೋವಾಗುತ್ತದೆ. ವಾಂತಿ, ಬೇಧಿ, ಜ್ವರ, ಹೊಟ್ಟೆ ನೋವು, ಕಾಣಿಸಿಕೊಂಡಾಗ, ಅದು ಅಪೆಂಡಿಕ್ಸ್ ಬಂದಿರುವ ಸೂಚನೆಯಾಗಿರುತ್ತದೆ. ಹಾಗಾಗಿ ಇಂಥ ಲಕ್ಷಣಗಳು ಕಂಡುಬಂದರೆ, ನಿರ್ಲಕ್ಷಿಸದೇ, ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಬೇಕು.

ಇನ್ನು ಕಾಲಿನಲ್ಲಿ ಗ್ಯಾಂಗ್ರಿನ್ ಆಗುತ್ತದೆ. ಆಗ ಕಾಲನ್ನೇ ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಅದೇ ರೀತಿ ನಾವು ಸೇವಿಸಿದ ಆಹಾರದಲ್ಲಿ ಕಲ್ಲು, ಮಣ್ಣು ಇದ್ದರೆ, ಅದನ್ನು ನಾವು ನುಂಗಿಬಿಟ್ಟರೆ, ಅದು ಅಪೆಂಡಿಕ್ಸ್‌ಗೆ ಹೋಗಿ ಸೇರಿಕೊಳ್ಳುತ್ತದೆ. ಆಗ ಗ್ಯಾಂಗ್ರಿನ್ ಆಗುವ ಸಾಧ್ಯತೆ ಇರುತ್ತದೆ. ಹೀಗಾದಾಗ, ಅಪೆಂಡಿಕ್‌ಸ್ ಒಡೆದು ಪ್‌ರಾಣಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss