Health Tips: ಕ್ಯಾನ್ಸರ್ ಅನ್ನೋದು ಈಗ ಕಾಮನ್ ಆಗಿಬಿಟ್ಟಿದೆ. ಇದು ಹೆದರಿಕೆ ಹುಟ್ಟಿಸುವ ವಿಷಯವಾದರೂ ಸತ್ಯವೇ. ಹಲವರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. 40 ದಾಟದವರು ಕೂಡ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ವೈದ್ಯರು ಕ್ಯಾನ್ಸರ್ ಬರಬಾರದು ಅಂದ್ರೆ ಏನು ಸೇವಿಸಬೇಕು ಅಂತಾ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಡಾ.ಶಿವಕುಮಾರ್ ಉಪ್ಪಳ ಈ ಬಗ್ಗೆ ವಿವರಣೆ ನೀಡಿದ್ದು, ಹಣ್ಣು ಹಂಪಲುಗಳನ್ನು ಹೆಚ್ಚು ಸೇವಿಸಬೇಕು ಅಂತಾ ಹೇಳಿದ್ದಾರೆ. ಹಸಿರು ಸೊಪ್ಪು ತರಕಾರಿಯನ್ನು ಚೆನ್‌ನಾಗಿ ತೊಳೆದು ಸ್ವಚ್ಛಗೊಳಿಸಿ ಸೇವಿಸಬೇಕು. ಏನೇ ತಿನ್ನುವುದಿದ್ದರೂ ಫ್ರೆಶ್ ಆಗಿರಬೇಕು. ಪ್ರೆಶ್ ಆಗಿರುವ ತರಕಾರಿ, ಹಣ್ಣು, ಪದಾರ್ಥಗಳ ಸೇವನೆ ಮಾಡಬೇಕು ಅಂತಾರೆ ವೈದ್ಯರು.
ಇಂಥ ಆಹಾರ ಸೇವನೆಯಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ಹಳೆಯ ಹಣ್ಣು, ತರಕಾರಿ, ಸೊಪ್ಪಿನ ಸೇವನೆ ಅಷ್ಟು ಉತ್ತಮಮವಲ್ಲ. ಅಲ್ಲದೇ, ಪದಾರ್ಥಗಳು ರೆಡಿಯಾದ ತಕ್ಷಣ ತಿಂದರೆ ಒಳ್ಳೆಯದು. ಅದನ್ನು ಪ್ರಿಜ್‌ನಲ್ಲಿ ಇರಿಸಿ, ಮತ್ತೆ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಇದರಿಂದಲೇ ಕ್ಯಾನ್ಸರ್ ಬರುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..