Health Tips: ಪ್ರಿಟರ್ಮ್ ಮಗು ಅಂದ್ರೆ, ಸಮಯಕ್ಕೂ ಮುನ್ನವೇ ಹುಟ್ಟಿದ ಮಗು. ಉದಾಹರಣೆಗೆ 7 ತಿಂಗಳಿಗೆ ಹುಟ್ಟಿದ ಮಗು. ಇಂಥ ಮಕ್ಕಳು ನಾರ್ಮಲ್ ಆಗಿ ಜನಿಸಿದ ಮಕ್ಕಳಂತೆ, ಆರೋಗ್ಯವಾಗಿ ಇರುವುದಿಲ್ಲ. ಕೆಲವೇ ಕೆಲವು ಮಕ್ಕಳಷ್ಟೇ ಆರೋಗ್ಯವಾಗಿರುತ್ತಾರೆ. ಆದರೆ ಹಲವು ಪ್ರಿಟರ್ಮ್ ಬೇಬಿಸ್ ಅಷ್ಟು ಆರೋಗ್ಯವಾಗಿರುವುದಿಲ್ಲ. ಇಂಥ ಮಕ್ಕಳ ಆರೈಕೆ ಯಾವ ರೀತಿ ಇರುತ್ತದೆ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ..
ಪ್ರಿಟರ್ಮ್ ಬೇಬಿ ಜನಿಸುವ ಸಂದರ್ಭದಲ್ಲಿ ತಾಯಿ ಮಗು ಇಬ್ಬರಿಗೂ ತೊಂದರೆ ಇರುತ್ತದೆ. ಹಾಗಾಗಿ ಇಂಥ ಕೇಸ್ ಬಂದಾಗ, ಹೈ ರಿಸ್ಕ್ ಬೇಬಿ, ಹೈ ರಿಸ್ಕ್ ಮದರ್ ಎಂದು ಕರೆಯುತ್ತಾರೆ. ಇಂಥವರು ಆಸ್ಪತ್ರೆಯಲ್ಲಿ ಹಲವು ದಿನಗಳ ಕಾಲ ಉಳಿದು, ಚಿಕಿತ್ಸೆ ಪಡೆಯಬೇಕಾಗುತ್ತದೆ. ಅಲ್ಲದೇ, ಇವರು ಹೆಚ್ಚು ಎದ್ದು ಓಡಾಡುವಂತಿಲ್ಲ. ಹೆಚ್ಚು ಕೆಲಸ ಮಾಡುವಂತಿಲ್ಲ. ಬರೀ ರೆಸ್ಟ್ ತೆಗೆದುಕೊಳ್ಳಬೇಕು.
ಇಂಥ ತಾಯಂದಿರಿಗೆ ವೈದ್ಯರು ನಾಲ್ಕು ಡೋಸ್ ವ್ಯಾಕ್ಸಿನ್ ನೀಡಲಾಗುತ್ತದೆ. ಇದರಿಂದ ರಿಸ್ಕ್ ಕಡಿಮೆಯಾಗುತ್ತದೆ. ಇದು ಮಗುವಿನ ಪ್ರಾಣ ಸರಿಯಾಗಿ ಇರಿಸೋಕ್ಕೆ ಸಹಾಯಕವಾಗಿದೆ ಅಂತಾರೆ ವೈದ್ಯರು. ಇದಾದ ಬಳಿಕ ಮಗು ಹುಟ್ಟಿದ ಮೇಲೆ ತಾಯಿಯ ಹಾಲು ಮಗು ಡೈರೆಕ್ಟ್ ಆಗಿ ಕುಡಿಯಲಾಗುವುದಿಲ್ಲ. ಅದನ್ನು ಎನ್‌ಐಸಿಯುಗೆ ಶಿಫ್ಟ್ ಮಾಡಿ, ಟ್ಯೂಬ್ ಮೂಲಕ, ತಾಯಿಯ ಹಾಲನ್ನೇ ಕುಡಿಸಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..