Health Tips: ಇಂದಿನ ಕಾಲದಲ್ಲಿ ಬ್ಯೂಟಿ ಹೆಚ್ಚಿಸುವುದಕ್ಕಾಗಿ ಹವು ರೀತಿಯ ಚಿಕಿತ್ಸೆ ಮಾಡಲಾಗುತ್ತದೆ. ಸ್ಕಿನ್ ಚನಾಗಿ ಇಲ್ಲದವರಿಗೆ, ಹಲ್ಲು, ಮೂಗು ಸೇರಿ ಮುಖದ ಯಾವುದೇ ಭಾಗಕ್ಕೂ ಸರ್ಜರಿ ಮೂಲಕ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತದೆ. ಅದೇ ರೀತಿ ಹೆಣ್ಣಿನ ಕೂದಲು ತುಂಬಾ ಉದುರಿ ಹೋಗಿದ್ದರೆ, ಅದಕ್ಕಾಗಿ ಕೂದಲ ಕಸಿ ಕೂಡ ಮಾಡಿಸಲಾಗುತ್ತದೆ. ಹಾಗಾದ್ರೆ ಯಾವ ಸಂದರ್ಭದಲ್ಲಿ ಮಹಿಳೆಯರು ಕೂದಲ ಕಸಿ ಮಾಡಿಸಿಕೊಳ್ಳುವಂತಿಲ್ಲ ಅಂತ ವೈದ್ಯರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ವೈದ್ಯೆಯಾದ ಡಾ. ದೀಪಿಕಾ ಈ ಬಗ್ಗೆ ವಿವರಿಸಿದ್ದು, ಗರ್ಭಿಣಿಯರು ಕೂದಲ ಕಸಿ ಮಾಡಿಸಿಕೊಳ್ಳಬಾರದು. 60 ವರ್ಷ ವಯಸ್ಸು ದಾಟಿದ ಮಹಿಳೆಯರು, ಬೇರೆ ಆರೋಗ್ಯ ಸಮಸ್ಯೆ ಹೊಂದಿರುವ ಮಹಿಳೆಯರು ಕೂಡ ಕೂದಲ ಕಸಿ ಮಾಡಿಸಿಕೊಳ್ಳುವಂತಿಲ್ಲ. ಅಲ್ಲದೇ, ಕುಟುಂಬಸ್ಥರಲ್ಲೂ ಆ ರೀತಿ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗಿದ್ದಲ್ಲಿ, ಕೂದಲ ಕಸಿ ಉತ್ತಮ ರಿಸಲ್ಟ್ ಕೊಡುತ್ತೆ ಅಂತಾ ಹೇಳಲಾಗುವುದಿಲ್ಲ. ಹಾಗಾಗಿ ಈ ಚಿಕಿತ್ಸೆ ಪಡೆಯಲು ಬಂದವರಿಗೆ ನಾವು ಎಲ್ಲ ರೀತಿ ಕೌನ್ಸಲಿಂಗ್ ಮಾಡಿಯೇ ಚಿಕಿತ್ಸೆ ನೀಡುತ್ತೇವೆ ಎಂದು ಡಾ.ದೀಪಿಕಾ ಹೇಳುತ್ತಾರೆ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..