ಹಿಮಾಚಲದಲ್ಲಿ ಬಿಜೆಪಿ ಸೇರಿದ 6 ಕಾಂಗ್ರೆಸ್ ಬಂಡಾಯ ಶಾಸಕರು

National Political News: ಹಿಮಾಚಲಪ್ರದೇಶದಲ್ಲಿ 6 ಕಾಂಗ್ರೆಸ್ ಬಂಡಾಯ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸುಧೀರ್ ಶರ್ಮಾ, ರವಿ ಠಾಕೂರ್, ಇಂದ್ರ ದತ್ ಲಖನ್ ಪಾಲ್, ದೇವೇಂದ್ರ ಭುಟ್ಟೋ, ರಾಜೇಂದ್ರ ರಾಣಾ, ಚೈತನ್ಯ ಶರ್ಮಾ ಇವಿಷ್ಟು ಕಾಂಗ್ರೆಸ್ ಬಂಡಾಯ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಹಿಮಾಚಲ ಪ್ರದೇಶದವರೇ ಆದ ಸ್ಪೋರ್ಟ್ಸ್ ಮಿನಿಸ್ಟರ್ ಅನೂರಾಗ್ ಸಿಂಗ್ ಠಾಕೂರ್ ಅವರ ಸಮ್ಮುಖದಲ್ಲಿ ಈ ಆರು ಜನ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಮೂವರು ಪಕ್ಷೇತರ ಶಾಸಕರು ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕಳೆದ ತಿಂಗಳು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಈ 6 ಬಂಡಾಯ ಶಾಸಕರು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದರು. ಅಡ್ಡಮತದಾಾನದ ಬಳಿಕ, ಪಕ್ಷದಿಂದ ಅನರ್ಹಗೊಳಿಸಿ ವಿಧಾನಸಭಾ ಸ್ಪೀಕರ್ ಆದೇಶಿಸಿದ್ದರು. ಬಳಿಕ ಈ 6 ಜನ ಯಾವುದೇ ಚುನಾವಣೆಯಲ್ಲೂ ಭಾಗವಹಿಸಿರಲಿಲ್ಲ.

ಉಡುಪಿ ಕಾಲೇಜು ಶೌಚಾಲಯದಲ್ಲಿ ವೀಡಿಯೋ: ವಿದ್ಯಾರ್ಥಿನಿಯರ ನೀಚತನ ಸಾಬೀತು..

ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್‌ಗೆ ಕ್ಯಾನ್ಸರ್‌

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಕಾಂಗ್ರೆಸ್ ಸರ್ಕಾರಕ್ಕೇ ಗ್ಯಾರಂಟಿ‌ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

About The Author