Health Tips: ಹಿಂದೂಗಳು ಪೂಜೆಯ ಸಮಯದಲ್ಲಿ ಕಾಯಿ, ಹಣ್ಣು, ಹೂವು, ಎಲೆ ಅಡಿಕೆ, ಮಾವಿನ ಎಲೆ ಸೇರಿ ಹಲವು ವಸ್ತುಗಳನ್ನು ಬಳಸುತ್ತಾರೆ. ಅದೇ ರೀತಿ ಈ ವೇಳೆ ಅಗರಬತ್ತಿಯನ್ನು ಕೂಡ ಬಳಸಲಾಗುತ್ತದೆ. ಹಾಗಾದ್ರೆ ಪೂಜೆ ಪುನಸ್ಕಾರದ ವೇಳೆ ಅಗರಬತ್ತಿ ಬಳಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಅಗರಬತ್ತಿಯನ್ನು ಬಳಸುವುದರಿಂದ ಆ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಅಂತಾ ಹೇಳುತ್ತಾರೆ. ಹಾಗಾಗಿ ಬರೀ ಪೂಜೆಯಲ್ಲಿ ಮಾತ್ರವಲ್ಲ. ಮನೆಯಲ್ಲಿ ಸಂಜೆ ದೀಪ ಹಚ್ಚಿದ ಬಳಿಕ, ಅಗರಬತ್ತಿ ಹಚ್ಚಲಾಗುತ್ತದೆ. ತೀರಿಹೋದವರ ಫೋಟೋದ ಮುಂದೆ ಅಗರಬತ್ತಿ ಹೊತ್ತಿಸಲಾಗುತ್ತದೆ. ಏಕೆಂದರೆ, ಮನೆಯಲ್ಲಿ ಈ ವೇಳೆ ಸಕಾರಾತ್ಮಕ ಶಕ್ತಿ ಇರುವುದು ತುಂಬಾ ಮುಖ್ಯವಾಗಿರುತ್ತದೆ.
ಇನ್ನು ಅಗರಬತ್ತಿಯನ್ನು ಬರೀ ಹಿಂದೂಗಳು ಮಾತ್ರವಲ್ಲ. ಮುಸ್ಲಿಂ, ಬೌದ್ಧ, ಸಿಖ್ ಸೇರಿ ಹಲವರು ಬಳಕೆ ಮಾಡುತ್ತಾರೆ. ಗರಬತ್ತಿಯ ಪರಿಮಳ ನಮ್ಮಲ್ಲಿ ಭಕ್ತಿ ಹೆಚ್ಚುವಂತೆ ಮಾಡುತ್ತದೆ. ಆ ಸ್ಥಳದಲ್ಲಿ ಧಾರ್ಮಿಕ ಭಾವವನ್ನುಂಟು ಮಾಡಲು, ಪೂಜೆಯಲ್ಲಿಯೇ ಧ್ಯಾನವಿಡಲು ಸಹಕಾರಿಯಾಗಿರುತ್ತದೆ. ಇದು ಸಮೃದ್ಧಿ ಮತ್ತು ನೆಮ್ಮದಿ ಹೆಚ್ಚಿಸುವ ಒಂದು ವಿಧಾನ ಕೂಡ ಹೌದು.
ಇನ್ನು ಕೆಲವರು ದೇವರಿಗೆ ಹರಕೆ ಸಲ್ಲಿಸಿದಂತೆ, ಅಗರಬತ್ತಿ ಉರಿಸಿ. ಸ್ವಲ್ಪ ಹೊತ್ತಿಗೆ ಆರಿಸಿಬಿಡುತ್ತಾರೆ. ಮರುದಿನ ಮತ್ತೆ ಅದನ್ನೇ ಮರುಬಳಕೆ ಮಾಡುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಇದರಿಂದ ಮನೆಯಲ್ಲಿ ಸಮೃದ್ಧಿಯಾಗುವ ಬದಲು, ಆರ್ಥಿಕ ನಷ್ಟವೇ ಆಗುತ್ತದೆ. ದೇವರಿಗೆ ನೀವು ಎಷ್ಟು ನಿಸ್ವಾರ್ಥ ಭಕ್ತಿ ತೋರಿಸುತ್ತೀರೋ, ಅಷ್ಟು ದೇವರು ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ.