Sunday, December 22, 2024

Latest Posts

ಧೂಮಪಾನ ಮಾಡುವ ಮುನ್ನ ಈ ವಿಚಾರ ತಿಳಿದುಕೊಳ್ಳಿ..

- Advertisement -

Health Tips: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಹಲವರು ಇದರ ದಾಸರಾಗಿರುತ್ತಾರೆ. ಕೊನೆಗೆ ಆರೋಗ್ಯ ಕೈ ಕೊಟ್ಟಾಗ, ನಾನು ಕೆಟ್ಟ ಚಟಗಳ ದಾಸನಾಗಬಾರದಿತ್ತು ಅನ್ನೋದು ಅವರ ಗಮನಕ್ಕೆ ಬರುತ್ತದೆ. ಧೂಮಪಾನ ಮಾಡುವ ಮುನ್ನ ಯಾವ ವಿಚಾರಗಳನ್ನು ತಿಳಿದುತೊಳ್ಳಬೇಕು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ..

ಧೂಮಪಾನ ಮಾಡುವುದರಿಂದ ಬರೀ ಕ್ಯಾನ್ಸರ್‌ನಂಥ ಖಾಯಿಲೆ ಬರುವುದಿಲ್ಲ. ಬದಲಾಗಿ ಗ್ಯಾಂಗ್ರಿನ್ ಕೂಡ ಬರುತ್ತದೆ. ನಮ್ಮ ದೇಹದ ಯಾವುದೇ ಭಾಗದಲ್ಲಿ ರಕ್ತ ಕಪ್ಪಾಗುವುದನ್ನು ಗ್ಯಾಂಗ್ರಿನ್ ೆನ್ನಲಾಗುತ್ತದೆ. ಗ್ಯಾಂಗ್ರಿನ್ ಆದ ಜಾಗವನ್ನು ಕತ್ತರಿಸಲಾಗುತ್ತದೆ. ಹೆಚ್ಚಿನಂಶ, ಸಕ್ಕರೆ ಖಾಯಿಲೆ ಇದ್ದವರಿಗೆ ಕಾಲಿಗೆ ನೋವಾಗಿ, ಅದು ನಂಜಾಗಿ ಪರಿವರ್ತನೆಯಾಗಿ, ಬಳಿಕ ಗ್ಯಾಂಗ್ರಿನ್ ಆದರೆ, ಅದು ಇಡೀ ದೇಹವನ್ನು ಹರಡತ್ತೆ ಎಂದು ಕಾಲನ್ನೇ ಕತ್ತರಿಸುತ್ತಾರೆ. ಹಾಗಾಗಿ ಗ್ಯಾಂಗ್ರಿನ್ ಬಾರದಂತೆ ನಾವು ಎಚ್ಚರವಹಿಸಬೇಕಾಗುತ್ತದೆ.

ಮತ್ತು ಗ್ಯಾಂಗ್ರಿನ್ ಬರಬಾರದು ಅಂದ್ರೆ, ನಾವು ಸ್ಮೋಕ್ ಮಾಡಬಾರದು. ಇನ್ನು ಸಿಕ್ಕಾಪಟ್ಟೆ ಚಳಿ ಇರುವ ಪ್ರದೇಶದಲ್ಲಿ ಯಾರು ಕೆಲಸ ಮಾಡುತ್ತಾರೋ, ಅಂಥವರಲ್ಲಿ ಗ್ಯಾಂಗ್ರಿನ್ ಕಾಣಿಸಿಕೊಳ್ಳುತ್ತದೆ.ಈ ವೇಳೆ ದೇಹದಲ್ಲಿ ಸರಿಯಾಗಿ ರಕ್ತ ಸಂಚಲನವಾಗುವುದಿಲ್ಲ. ಆಗ ರಕ್ತ ಹೆಪ್ಪು ಗಟ್ಟಿ, ಕಪ್ಪಾಗುತ್ತದೆ. ಈ ವೇಳೆ ಗ್ಯಾಂಗ್ರಿನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗದಿದ್ದಲ್ಲಿ, ಡ್ರೈ ಗ್ಯಾಂಗ್ರಿನ್ ಆಗುತ್ತದೆ. ರಕ್ತ ಸಂಚಾರ ಸರಿಯಾಗಿ ಆಗದೇ, ರಕ್ತ ನಾಳಗಳು ಊದಿಕೊಳ್ಳಲು ಶುರುವಾದಾಗ, ಆ ಸ್ಥಳದಲ್ಲಿ ಇನ್‌ಫೆಕ್ಷನ್ ಆಗುತ್ತದೆ. ಅದನ್ನು ವೆಟ್ ಗ್ಯಾಂಗ್ರಿನ್ ಎನ್ನುತ್ತಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss