ಬಿಲ್‌ಗೇಟ್ಸ್ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ..

Political News: ಮೈಕ್ರೋಸಾಫ್ಟ್ ಮಾಜಿ ಚೇರ್‌ಮನ್ ಬಿಲ್‌ಗೇಟ್ಸ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ. ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ್ದ ಬಿಲ್‌ಗೇಟ್ಸ್ ಮೋದಿಯೊಂದಿಗೆ ಕೆಲ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಇದರಲ್ಲಿ ಪ್ರಧಾನಿ ಮೋದಿ ಮತ್ತು ಬಿಲ್‌ಗೇಟ್ಸ್‌ ತಂತ್ರಜ್ಞಾನ, ಕೋವಿಡ್ ಸಮಸ್ಯೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೊದಲು ಮಾತನಾಡುವ ಬಿಲ್‌ಗೇಟ್ಸ್, ಭಾರತೀಯ ತಂತ್ರಜ್ಞಾನವನ್ನು ಬಳಸುವುದಷ್ಟೇ ಅಲ್ಲದೇ, ಅದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆಂದು ಹೇಳುತ್ತಾರೆ. ಎಐ, ಡಿಜಿಟಲ್ ರೆವ್ಯೂಲ್ಯೂಶನ್, ಆರೋಗ್ಯ, ವಿದ್ಯಾಭ್ಯಾಸ, ಕೃಷಿ, ನಾರಿ ಶಕ್ತಿ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ.

ಹಳ್ಳಿ ಮಹಿಳೆಯರು ಹಸು ಮೇಯಿಸುತ್ತಾರೆ, ಎಮ್ಮೆ ಮೇಯಿಸುತ್ತಾರೆ, ಹಾಲು ಕರಿಯುತ್ತಾರೆ. ಆದರೆ ಅವರು ಇಷ್ಟಕ್ಕೆ ಸೀಮಿತವಾಗಬಾರದು. ನಾನು ಅವರ ಕೈಗೆ ಟೆಕ್ನಾಲಜಿ ನೀಡಬಯಸುತ್ತೇನೆ. ಕೆಲವರು ನನಗೆ ಹೇಳಿದ್ದಾರೆ, ನನಗೆ ಸೈಕಲ್ ಓಡಿಸಲು ಬರುತ್ತಿರಲಿಲ್ಲ. ಆದರೆ ನಾವಿಂದು ಪೈಲಟ್ ಆಗಿದ್ದೇವೆ. ನಮಗೆ ಡ್ರೋನ್ ನಡೆಸಲು ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇನ್ನೂ ಸಾಕಷ್ಟು ವಿಷಯಗಳ ಬಗ್ಗೆ ಮೋದಿ ಮತ್ತು ಗೇಟ್ಸ್ ಚರ್ಚಿಸಿದ್ದಾರೆ.

ಕಷ್ಟಕ್ಕೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ? ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ?ನೀವೇ ನಿರ್ಧರಿಸಿ ಎಂದ ಸಿಎಂ

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ನಾವೆಲ್ಲರೂ ಲಿಂಗಾಯತರು ನಮ್ಮನ್ನು ಬೆಳೆಸಿದ್ದು ಪ್ರಹ್ಲಾದ್ ಜೋಶಿ: ಶಾಸಕ ಎಂ.ಆರ್.ಪಾಟೀಲ್

About The Author