Ramanagara News: ರಾಮನಗರ: ರಾಮನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ಭಾಗವಹಿಸಿ, ಮಾತನಾಡಿದರು.
ಮಂಜುನಾಥ್ ಅವರನ್ನು ದೆಹಲಿಗೆ ಕಳುಹಿಸಲು ಮೋದಿ ನನ್ನನ್ನು ಗೋವಾದಿಂದ ಇಲ್ಲಿಗೆ ಕಳಿಸಿದ್ದಾರೆ. ಮೈತ್ರಿ ಸ್ವಲ್ಪ ಹಿಂದೆಯೇ ಆಗಿರುತ್ತಿದ್ದರೆ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ನಡೆಯುತ್ತಿತ್ತು. ಮತ್ತೊಮ್ಮೆ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ತರಲು ನಿಮ್ಮ ಸಹಕಾರ ಬೇಕಿದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಐವತ್ತು ವರ್ಷದಲ್ಲಿ ಮಾಡದ್ದನ್ನು ಮೋದಿ ಸರ್ಕಾರ ಹತ್ತು ವರ್ಷದಲ್ಲಿ ಮಾಡಿದೆ. ಮೋದಿ ಸರ್ಕಾರ ಮಹಿಳೆಯರು, ಯುವಕರು, ರೈತರಿಗೆ ಸಾಕಷ್ಟು ಕಾರ್ಯಕ್ರಮ ತಂದಿದೆ ಎಂದು ಸಾವಂತ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಜಾತಿ, ಧರ್ಮದ ಭೇದ ಭಾವದಿಂದ ನಡೆಯುತ್ತದೆ. ಕಾಂಗ್ರೆಸ್ ಸಾಧನೆ ಮತ್ತು ಮೋದಿ ಸರ್ಕಾರದ ಸಾಧನೆಗಳ ಬಹಿರಂಗ ಚರ್ಚೆಗೆ ಎಲ್ಲಿ ಬೇಕಾದರೂ ಬರುತ್ತೇನೆ ಎಂದು ನಾನು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರಿಗೂ ಸವಾಲು ಹಾಕುತ್ತೇನೆ. ಕಾಂಗ್ರೆಸ್ ಯಾವಾಗಲೂ ಹಸ್ತವನ್ನು ತೋರಿಸುತ್ತದೆ. ಆದರೆ ಹಸ್ತ ತೋರಿಸದೇ ಕೆಲಸ ಮಾಡಿರುವುದು ಮೋದಿ ಸರ್ಕಾರ. ಕರ್ನಾಟಕ ಸರ್ಕಾರ ಈಗ ಭ್ರಷ್ಟವಾಗಿರುವ ಸರ್ಕಾರ. ಇಲ್ಲಿ ಈಗ ಐದೈದು ಸಿಎಂಗಳು ಇದ್ದಾರೆ ಎಂದು ಸಾವಂತ್ ಹೇಳಿದ್ದಾರೆ..
H. D. Kumaraswamy : ಮಂಡ್ಯ : ನಾಮಪತ್ರ ಸಲ್ಲಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ: ವಿಜಯೇಂದ್ರ ಆಹ್ವಾನದ ಬಳಿಕವೂ ಗೈರಾದ ಪ್ರೀತಂಗೌಡ
ನಾಮಪತ್ರ ಸಲ್ಲಿಕೆ ಬಳಿಕ ಡಿ.ಕೆ.ಸುರೇಶ್ ಕಾರಿಗೆ ಮೈತ್ರಿ ಕಾರ್ಯಕರ್ತರಿಂದ ಮುತ್ತಿಗೆ..




