Movie News: ನಿನ್ನೆಯಷ್ಟೇ ದರ್ಶನ್ ಫ್ಯಾನ್ ಪೇಜ್ ಅಂತಾ ಹೇಳಿಕೊಂಡಿದ್ದ ಗಜಪಡೆ ಎಂಬ ಟ್ವೀಟರ್ ಅಕೌಂಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕೀಳಾಗಿ ಪೋಸ್ಟ್ ಹಾಕಲಾಗಿತ್ತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಆರ್‌ಸಿಬಿ ಅನ್‌ಬಾಕ್ಸಿಂಗ್ ಇವೆಂಟ್‌ಗೆ ತೆರಳಿದ್ದರು.
ಪತಿ ಇಲ್ಲದ ಮಹಿಳೆಯನ್ನು ಶುಭಕಾರ್ಯಕ್ಕೆ ಕರೆದಿದ್ದಕ್ಕೆ, ಆರ್‌ಸಿಬಿ ಸೋಲುತ್ತಿದೆ ಎಂದು ಗಜಪಡೆ ಎಂಬ ದರ್ಶನ್ ಫ್ಯಾನ್ಸ್ ಟ್ವೀಟ್ ಪೇಜ್ ಟ್ವೀಟ್ ಮಾಡಿದೆ. ಇಂಥ ಕೀಳು ಮಟ್ಟದ ಟ್ವೀಟ್‌ಗೆ ನೆಟ್ಟಿಗರು ಆಕ್ರೋಶ ಮತ್ತು ಬೇಸರ ಹೊರಹಾಕಿದ್ದಾರೆ.
ಇನ್ನು ಈ ಘಟನೆಯನ್ನು ಪ್ರಸ್ತಾಪಿಸದೇ, ಜೀವನದಲ್ಲಿ ಪಾಸಿಟಿವ್ ನೆಗೆಟಿವ್ ಸಿಚುವೇಶನ್ ಬಂದರೆ, ಎರಡನ್ನೂ ಸಮನಾಗಿ ಕಂಡು ಮುಂದೆ ಸಾಗುವೆ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಅಪ್ಪು ಅವರ ಹಾರ್ಡ್‌ಕೋರ್ ಫ್ಯಾನ್ ಆಗಿರುವ ಆ್ಯಂಕರ್ ಅನುಶ್ರೀ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಹೆಣ್ಣಿಗೆ ಗೌರವ ಸಿಗುವುದು ಕನಸು ಅಷ್ಟೇ ಅಂತಾ ಹೇಳುವ ಅನುಶ್ರೀ, ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದು, ಹೆಣ್ಣಾಗಿ ಹುಟ್ಟೋದು ಒಂದು ವರ …. ಇನ್ನೊಬ್ಬರ ಮನೆ ಬೆಳಗೋ ಲಕ್ಷ್ಮೀ ಸಮಾಜಕ್ಕೆ ಒಂದು ವರ … ಇದೆಲ್ಲ ಗಾಳಿ ಮಾತುಗಳ ಹೆಮ್ಮರ !!!
ಈ ಜಾಗದಲ್ಲಿ ನಿಮ್ಮ ತಾಯಿ ಮಡದಿ ಅಥವಾ ಸಹೋದರಿ ಇದ್ದಿದ್ದರೆ ???
ಹೆಣ್ಣಿಗೆ ಗೌರವ ಸಿಗೋದು … ಒಂದು ಕನಸು ಅಷ್ಟೇ …
ಈ ಕೆಟ್ಟೆ ಬೆಳವಣಿಗೆಗೆ ಕೊನೆಯಿಲ್ಲವೇ ??
ಸ್ತ್ರೀ ಅಂದರೆ ಅಷ್ಟೇ ಸಾಕೆ !!!
ಹೆಣ್ಣೆಂದರೆ ಅಂಬಿಕೆ …
ನಿಜ ಮಾಡಿ ಈ ಮೂಢನಂಬಿಕೆ
ಹೀಗೆ ಅನುಶ್ರೀ ಬರೆದು, ನಾವು ಸದಾಾ ನಿಮ್ಮೊಂದಿಗಿದ್ದೇವೆ ಎಂದು ಹೇಳಿದ್ದಾರೆ.
ನನ್ನ ಮಕ್ಕಳು ರಾಹುಲ್ ಗಾಂಧಿಯಂತಾಗಬೇಕು, ಮೋದಿಯಂತೆ ಸುಳ್ಳು ಹೇಳಬಾರದು: ಸಚಿವ ಸಂತೋಷ್ ಲಾಡ್
ರಾಹುಲ್ ಗಾಂಧಿ ಕೆಟ್ಟು ನಿಂತ ಗ್ರಾಮಾಫೋನ್ ಇದ್ದಂತೆ. ಹೇಳಿದ್ದನ್ನೇ ಹೇಳುತ್ತಾರೆ: ಪ್ರಹ್ಲಾದ್ ಜೋಶಿ ವ್ಯಂಗ್ಯ..
ಇದು ಕಾಂಟ್ರ್ಯಾಕ್ಟ್ ಮದುವೆಯಲ್ಲ, ಧೀರ್ಘಕಾಲದ ಸಂಬಂಧ: ಮೈತ್ರಿ ಬಗ್ಗೆ ರಾಧಾಮೋಹನ್ ಹೇಳಿಕೆ