Thursday, February 6, 2025

Latest Posts

Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 1

- Advertisement -

ಬೇಸಿಗೆಯಲ್ಲಿ ಆದಷ್ಟು ನಾವು ದೇಹಕ್ಕೆ ತಂಪು ನೀಡುವ ಆಹಾರವನ್ನೇ ಸೇವಿಸಬೇಕು. ಹಾಗಾಗಿ ನಾವಿಂದು ಹವ್ಯಕ ಶೈಲಿಯ ತಂಬುಳಿ ರೆಸಿಪಿ ಹೇಳಲಿದ್ದೇವೆ.

ಶುಂಠಿ ತಂಬುಳಿ: ಒಂದು ಕಪ್ ತೆಂಗಿನತುರಿ, ಚಿಕ್ಕ ತುಂಡು ಶುಂಠಿ, ಉಪ್ಪು, 1 ಹಸಿಮೆಣಸಿನಕಾಯಿ, ಅರ್ಧ ಕಪ್ ಮೊಸರು. ಇವಿಷ್ಟು ಶುಂಠಿ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿ. ಮೊದಲು ತೆಂಗಿನ ತುರಿ, ಶುಂಠಿ, ಹಸಿಮೆಣಸು, ಉಪ್ಪು, ಕೊಂಚ ಮೊಸರು ಸೇರಿಸಿ, ಮಿಕ್ಸಿ ಜಾರ್‌ಗೆ ಹಾಕಿ, ರುಬ್ಬಿಕೊಳ್ಳಿ. ಬಳಿಕ ಇದನ್ನು ಪಾತ್ರೆಗೆ ಹಾಕಿ, ಮತ್ತಷ್ಟು ಮೊಸರು, ನೀರು ಸೇರಿಸಿ.

ಒಂದೆಲಗದ ತಂಬುಳಿ: ಒಂದು ಕಪ್ ತೆಂಗಿನತುರಿ, ಉಪ್ಪು, ಅರ್ಧ ಕಪ್ ಮೊಸರು, 1 ಹಸಿಮೆಣಸು, ಕೊಂಚ ಒಂದೆಲಗದ ಎಲೆ. ಇವಿಷ್ಟು ಒಂದೆಲಗದ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿ. ಮಿಕ್ಸಿ ಜಾರ್‌ಗೆ ಒಂದೆಲಗದ ಎಲೆ, ಹಸಿಮೆಣಸು, ಉಪ್ಪು, ಕೊಂಚ ಮೊಸರು, ತೆಂಗಿನ ತುರಿ ಇವಿಷ್ಟು ಹಾಕಿ ರುಬ್ಬಿ. ಬಳಿಕ ಈ ಮಿಶ್ರಣವನ್ನು ಪಾತ್ರೆಗೆ ಹಾಕಿ, ಅದಕ್ಕೆ ಕೊಂಚ ಮೊಸರು ಮತ್ತು ನೀರು ಸೇರಿಸಿ,.

ಮೆಂತ್ಯೆ ತಂಬುಳಿ: ಒಂದು ಕಪ್ ತೆಂಗಿನತುರಿ, ಉಪ್ಪು, 1 ಒಣಮೆಣಸು, 1 ಸ್ಪೂನ್ ತುಪ್ಪ, ಅರ್ಧ ಕಪ್ ಮೊಸರು,  ಕೊಂಚ ಮೆಂತ್ಯೆ. ಇವಿಷ್ಟು ಮೆಂತ್ಯೆ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿ. ಮೊದಲು ಒಂದು ಪ್ಯಾನ್‌ಗೆ ತುಪ್ಪ, ಮೆಂತ್ಯೆ, ಒಣಮೆಣಸು ಹಾಕಿ, ಘಮ ಬರುವವರೆಗೂ ಹುರಿಯಿರಿ. ಬಳಿಕ, ಮಿಕ್ಸಿ ಜಾರ್‌ಗೆ ತೆಂಗಿನ ತುರಿ, ಕೊಂಚ ಮೊಸರು, ಹುರಿದ ಮಿಶ್ರಣ, ಉಪ್ಪು ಸೇರಿಸಿ, ರುಬ್ಬಿ. ಇದನ್ನು ಪಾತ್ರೆಗೆ ಹಾಕಿ, ಉಳಿದ ಮೊಸರು ಮತ್ತು ನೀರು ಸೇರಿಸಿದರೆ, ಮೆಂತ್ಯೆ ತಂಬುಳಿ ರೆಡಿ.

ಈ ತಂಬ್ಳಿಗಳಿಗೆ ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ.

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್‌ -ಕಿಶ್‌ಮಿಶ್ ಸ್ಯಾಲೆಡ್

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್

ಅತ್ಯುತ್ತಮ ಡ್ರೈಫ್ರೂಟ್ಸ್, ವೆರೈಟಿ ಖರ್ಜೂರ ಬೇಕಂದ್ರೆ, ಬೆಂಗಳೂರಿನ ಈ ಅಂಗಡಿಗೆ ಹೋಗಿ..

- Advertisement -

Latest Posts

Don't Miss