Saturday, July 27, 2024

Latest Posts

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್‌ -ಕಿಶ್‌ಮಿಶ್ ಸ್ಯಾಲೆಡ್

- Advertisement -

Summer Special: ಬೇಸಿಗೆಯಲ್ಲಿ ನಾವು ಎಂಥ ಸಲಾಡ್ ತಿನ್ನಬೇಕು ಅಂತಾ ಕೇಳಿದರೆ, ಹಲವರು ಸೌತೇಕಾಯಿ, ಈರುಳ್ಳಿ, ಟೊಮೆಟೋ ಸಲಾಡ್ ಅಂತಲೇ ಹೇಳುತ್ತಾರೆ. ಆದರೆ ಇದರೊಂದಿಗೆ ನೀವು ಬೇರೆ ಬೇರೆ ಸಲಾಡ್ ಮಾಡಿ ಸೇವಿಸಬಹುದು. ಹಾಗಾಗಿ ಇಂದು ನಾವು ಕ್ಯಾರೆಟ್-ಕಿಶ್‌ಮಿಶ್ ಸ್ಯಾಲೆಡ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.

ಮೊದಲು ಎಳ್ಳಿನ ಪೇಸ್ಟ್ ತಯಾರಿಸಿಕೊಳ್ಳಬೇಕು. ಕೊಂಚ ಬಿಳಿ ಎಳ್ಳನ್ನು ಹುರಿದುಕೊಳ್ಳಬೇಕು. ಈ ಮಿಶ್ರಣ ತಣಿದ ಬಳಿಕ ಬ್ಲೆಂಡರ್‌ನಲ್ಲಿ ಹಾಕಿ, ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು. ಒಂದು ಚೂರು ನೀರು ಹಾಕದೇ, ಹಾಗೆ ಬ್ಲೆಂಡ್ ಮಾಡಿದರೆ, ಅದರಲ್ಲಿರುವ ಎಣ್ಣೆಯಿಂದಲೇ ಪೇಸ್ಟ್ ತಯಾರಾಗುತ್ತದೆ. ಈ ಪೇಸ್ಟ್‌ನಲ್ಲಿ ನಾಲ್ಕು ಸ್ಪೂನ್ ಎಳ್ಳಿನ ಪೇಸ್ಟ್ ತೆಗೆದುಕೊಂಡು, ಅದನ್ನು ಬ್ಲೆಂಡರ್‌ಗೆ ಹಾಕಿ, ಅದಕ್ಕೆ ಅರ್ಧ ಕಪ್ ನೀರು, 4 ಖರ್ಜೂರ, 2 ಸ್ಪೂನ್ ನಿಂಬೆರಸ, 1 ಸ್ಪೂನ್ ಬೆಲ್ಲದ ಪುಡಿ, 1 ಚಿಕ್ಕ ತುಂಡು ಹಸಿಮೆಣಸಿನಕಾಯಿ, ಅರ್ಧ ಸ್ಪೂನ್ ಸೇಂಧವ ಲವಣ. ಇವಿಷ್ಯನ್ನು ಹಾಕಿ ಬ್ಲೆಂಡ್ ಮಾಡಿದ್ರೆ, ಎಳ್ಳಿನ ಪೇಸ್ಟ್ ರೆಡಿ.

ಎರಡು ಕ್ಯಾರೇಟ್‌ನ್ನು ತುರಿದು ಒಂದು ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಅರ್ಧ ಕಪ್ ಮೊಳಕೆಕಾಳು, ಚಿಕ್ಕದಾಗಿ ಕತ್ತರಿಸಿದ ಪುದೀನಾ, 10ರಿಂದ 15 ನೆನೆಸಿ, ಕಟ್ ಮಾಡಿದ ಕಾಜು, 3 ಟೇಬಲ್ ಸ್ಪೂನ್ ಒಣದ್ರಾಕ್ಷಿ(ಇದನ್ನೇ ಕಿಶ್‌ಮಿಶ್‌ ಎನ್ನುತ್ತಾರೆ).ಇವನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿ, ಎಳ್ಳಿ ಪೇಸ್ಟ್ ಸೇರಿಸಿ, ಗಾರ್ನಿಶ್ ಮಾಡಿ ಕೊಟ್ರೆ ಸಲಾಡ್ ರೆಡಿ.

ಅತ್ಯುತ್ತಮ ಡ್ರೈಫ್ರೂಟ್ಸ್, ವೆರೈಟಿ ಖರ್ಜೂರ ಬೇಕಂದ್ರೆ, ಬೆಂಗಳೂರಿನ ಈ ಅಂಗಡಿಗೆ ಹೋಗಿ..

ಧೂಮಪಾನ ಮಾಡುವ ಮುನ್ನ ಈ ವಿಚಾರ ತಿಳಿದುಕೊಳ್ಳಿ..

ರಕ್ತ ನಿಂತಲ್ಲೇ ನಿಂತರೆ ಏನಾಗತ್ತೆ..? ಉಗುರಿನ ಬದಿಗಳನ್ನು ಕತ್ತರಿಸುತ್ತಿದ್ದೀರಾ..?

- Advertisement -

Latest Posts

Don't Miss