ಮೋದಿ ಗ್ಯಾರಂಟಿ ಮುಂದೆ ಕಾಂಗ್ರೆಸ್ ಗ್ಯಾರಂಟಿಗಳು ನೀರಿನಲ್ಲಿ ಬೂದಿ ಹಾಕಿದಂತೆ: ಮಾಜಿ ಸಚಿವ ಶ್ರೀರಾಮುಲು

Hubli News: ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗ್ಯಾರಂಟಿ ಮುಂದೆ ಕಾಂಗ್ರೆಸ್ ನ ಎಲ್ಲಾ ಗ್ಯಾರಂಟಿಗಳು ನೀರಿನಲ್ಲಿ ಬೂದಿ ಹಾಕಿದಂತೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮಲು ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಕೊಟ್ಟಿದ್ದು ಮತವಾಗಿ ಪರಿವರ್ತನೆಯಾಗಬಹುದು ಎಂದುಕೊಂಡಿದ್ದಾರೆ. ಆದರೇ ಜನರು ಮೋದಿಯವರ ಪರವಾಗಿ ಇದ್ದಾರೆ ಎಂದರು.

ಮೋದಿಯವರು ಹಿಂದುಳಿದ ಸಮುದಾಯದ ಜನರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ೬೦ ವರ್ಷ ಆಳಿದ ಕಾಂಗ್ರೆಸ್ ಪಕ್ಷ ಕೇವಲ ಹಿಂದುಳಿದವರನ್ನು ಬಳಕೆ ಮಾಡಿಕೊಂಡಿದೆ. ಮೋದಿಯವರ ಮಂತ್ರಿ ಮಂಡಲದಲ್ಲಿ ಅರ್ಧ ಡಜನ್ ಹಿಂದುಳಿದ ಸಮಾಜದವರು ಇದ್ದಾರೆ. ನನ್ನ ಸಮುದಾಯದ ಎಲ್ಲಾ ಜನ ಕಾಂಗ್ರೆಸ್ ಪಕ್ಷ ಮತ ನೀಡಬಾರದು. ಕಲ್ಯಾಣ ಕರ್ನಾಟಕದಲ್ಲಿ ನಾವು ಗೆಲ್ಲುತ್ತೇವೆ ಎಂದ ಅವರು ಭಗವಂತ ಖೂಬಾ, ಜಾಧವ ಕೂಡಾ ಗೆಲ್ಲುತ್ತಾರೆ. ಖರ್ಗೆ ಅವರು ಸ್ಪರ್ಧೆ ಮಾಡಬೇಕಿತ್ತು ಆದರೆ ಅವರ ಅಳಿಯ ಸ್ಪರ್ಧೆಗೆ ಇಳಿದಿದ್ದು, ರಾಜಕೀಯ ಗೊತ್ತಿಲ್ಲ ಎಂದರು.

ಕರಡಿ ಸಂಗಣ್ಣ ವಿಚಾರವಾಗಿ ಮಾತನಾಡಿದ ಅವರು, ಕರಡಿ ಸಂಗಣ್ಣನವರ ಮನವೊಲಿಕೆಯಾಗಿದೆ. ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಅವರಿಗೆ ಟಿಕೆಟ್ ಸಿಗದೆ ಇರೋದಕ್ಕೆ ಆತಂಕ ಆಗಿತ್ತು. ಅವರ ಶಕ್ತಿಯಿಂದಲ್ಲೇ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆಂದು ನುಡಿದರು.

ಪ್ರಿಯಾಂಕ್ ಖರ್ಗೆ ಅವರು ಬಹಳ ಬುದ್ದಿವಂತರು ಇದ್ದಾರೆ. ಮಾತಾಡೋ ವಿಚಾರದಲ್ಲಿ ಜಾಣ ಇದ್ದಾರೆ. ಆದರೇ ಅದು ಒಳ್ಳೆಯ ಜಾಣ ಅಲ್ಲ ಕೆಟ್ಟ ಜಾಣ ಎಂದು ಲೇವಡಿ ಮಾಡಿದರು. ಡಾ. ಬಿ‌.ಆರ್.ಅಂಬೇಡ್ಕರ್ ಅವರ ಬಗ್ಗೆ ಅವರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೊತ್ತಿದೆ. ಸಣ್ಣ ಪ್ರಿಯಾಂಕ್ ಖರ್ಗೆ ಅವರು ಪೂರ್ತಿ ಅಧ್ಯಯನ ಮಾಡಬೇಕು. ಅಧ್ಯಯನ ಮಾಡದೇ ಹೋದ್ರೆ ಅವರು ಕಾಂಗ್ರೆಸ್ ಗೆ ಮತ ಹಾಕಬೇಡಿ ಅಂತಾರೆ ಎಂದು ರಾಮುಲು ಹೇಳಿದರು.

200 ಕೋಟಿ ಆಸ್ತಿ ದಾನ ಮಾಡಿ ಜೈನ ಮುನಿಯಾದ ಗುಜರಾತ್‌ನ ಉದ್ಯಮಿ..

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಜ್ಯೋತಿಷಿ ಎಸ್‌.ಕೆ.ಜೈನ್ ನಿಧನ

ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ, ಆದರೆ ಮಕ್ಕಳ ಫೀಸ್‌ ಕಟ್ಟಲು ದುಡ್ಡಿಲ್ಲ

About The Author