Sunday, September 8, 2024

Latest Posts

ಸರ್ಕಾರದ ಕುಮ್ಮಕ್ಕು ಇಂಥ ದುಷ್ಟಶಕ್ತಿಗಳಿಗೆ ಇರುವುದು ಸ್ಪಷ್ಟವಾಗಿದೆ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

- Advertisement -

Political News: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ನಿನ್ನೆ ಬೆಂಗಳೂರಿನಲ್ಲಿ ರಾಮಭಕ್ತರ ಮೇಲೆ ಮುಸ್ಲಿಂ ಯುವಕ ನಡೆಸಿದ ಹಲ್ಲೆ ಬಗ್ಗೆ ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು ಏನಾಗುತ್ತಿದೆ? ಬೆಂಗಳೂರಿನಲ್ಲಿ ಏನು ನಡೆಯುತ್ತಿದೆ? ಬೆಂಗಳೂರಿಗೆ ಯಾರೆಲ್ಲಾ ನುಸುಳಿದ್ದಾರೆ? ತಾಲಿಬಾನ್‌ ಸಂಸ್ಕೃತಿಯನ್ನು ಬಿತ್ತುತ್ತಿರುವ ಹಿಂದಿನ ಶಕ್ತಿಗಳು ಯಾರು ಎಂಬ ಪ್ರಶ್ನೆ ನಾಗರೀಕರನ್ನು ಕಾಡುತ್ತಿದೆ. ಕೆಫೆಯಲ್ಲಿ ಬಾಂಬ್‌, ಹನುಮಾನ್‌ ಚಾಲೀಸ ಆಲಿಸಿದರೆ ಅಂಗಡಿಗೆ ನುಗ್ಗಿ ಮಾರಣಾಂತಿಕ ಹಲ್ಲೆ, ರಾಮನವಮಿಯಂದು ರಾಮ ಸ್ಮರಣೆ ಮಾಡಿದರೆ ಅಲ್ಲಾಹು ಅಕ್ಬರ್‌ ಎಂದು ಕೂಗುವಂತೆ ಹಾಡು ಹಗಲೇ ಕಾರು ನಿಲ್ಲಿಸಿ ಹಲ್ಲೆ. ರಾಜ್ಯದಲ್ಲಿ ತಾಲಿಬಾನ್‌ ಸರ್ಕಾರ ಆಡಳಿತ ನಡೆಸುತ್ತಿದೆಯೇ ಎಂಬ ಭಯ ಜನರನ್ನು ಕಾಡುತ್ತಿದೆ. ಒಂದರ ಮೇಲೊಂದು ಭಯೋತ್ಪಾದನೆ ಸೃಷ್ಟಿಸುವ ಪ್ರಕರಣಗಳು ಬೆಂಗಳೂರು ಹಾಗೂ ರಾಜ್ಯದ ಇತರೆಡೆಗಳಲ್ಲಿ ಮರುಕಳಿಸುತ್ತಿರುವುದನ್ನು ನೋಡಿದರೆ ಸರ್ಕಾರದ ಕುಮ್ಮಕ್ಕು ಇಂಥ ದುಷ್ಟ ಶಕ್ತಿಗಳಿಗೆ ಇದ್ದಿರಲೇಬೇಕು ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಭಾರತ ಗೆಲ್ಲಿಸಲು, ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಜನತೆ ಸನ್ನದ್ಧರಾಗಿರುವುದನ್ನು ಸಹಿಸಲಾರದ ಹತಾಶ ಶಕ್ತಿಗಳು ಸಭ್ಯ ನಾಗರೀಕರ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿರುವವರೆಗೂ ನಮ್ಮ ಸಂಸ್ಕೃತಿಯನ್ನು ವಿನಾಶಗೊಳಿಸುವ ಹಾಗೂ ಜನರ ನೆಮ್ಮದಿಗೆ ಭಂಗ ತರುವ ಆತಂಕವಾದಿಗಳ ಕ್ರೌರ್ಯವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು

ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೋ.. ಈಕೆಯ ಆಸ್ತಿಯೇ 1,400 ಕೋಟಿ..

- Advertisement -

Latest Posts

Don't Miss